ಇದೇ ತಿಂಗಳ 17ರಂದು ಮಧ್ಯರಾತ್ರಿ ಕಾಂಚನಗಿರಿ ಬೆಟ್ಟದ ಶಿವನ ದೇವಸ್ಥಾನದಲ್ಲಿ (Kanchanagiri hill temple) ಕಳ್ಳತನ ನಡೆದಿತ್ತು. ಅಪರಿಚಿತ ದುಷ್ಕರ್ಮಿಯೊಬ್ಬ ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ನಗದು ದೋಚಿ (burglary) ಪರಾರಿಯಾಗಿದ್ದ. ಆದರೆ ಹುಂಡಿಯಲ್ಲಿ ಪತ್ರವೊಂದು ಪತ್ತೆಯಾಗಿತ್ತು.
ಸುಲಭವಾಗಿ ಹಣ ಸಂಪಾದಿಸಿ.. ಮೋಜಿನ ಜೀವನ ನಡೆಸುವುದಕ್ಕಾಗಿ ಏನು ಬೇಕಾದರೂ ಮಾಡಲು ಕಳ್ಳರು ಹಿಂಜರಿಯುವುದಿಲ್ಲ. ಗುಡಿ ಮನೆ ಶಾಲೆಗಳು ಸರ್ಕಾಎರಿ ಕಚೇರಿಗಳು ಎಂಬ ಭೇದ ಇರುವುದಿಲ್ಲ ಅವರಿಗೆ. ಅವಕಾಶ ಸಿಕ್ಕ ಕಡೆ ಕೈಚಳಕ ತೋರಿಸಿಬಿಡುತ್ತಾರೆ. ದರೋಡೆ ಮಾಡಿ ಅಂದಿಗೆ ಮೋಜು ಕಾಣುದ್ದಾರೆ. ಅದು ದೇವರ ಹಣವಾ, ಜನರ ಹಣವಾ, ಸರ್ಕಾರಿ ಹಣವಾ ಒಂದೂ ಯೋಚಿಸುವುದಿಲ್ಲ ಅವರು. ದರೋಡೆ ಮಾಡ ಬೇಕು ಅಷ್ಟೆ.. ಹಲವೆಡೆ ಸೂಕ್ತ ರಕ್ಷಣೆ ಇಲ್ಲದ ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ ಸಲೀಸಾಗಿ ನಡೆದುಬಿಡುತ್ತದೆ. ಇತ್ತೀಚೆಗೆ ತಮಿಳುನಾಡಿನ ರಾಣಿಪೇಟಾ ಜಿಲ್ಲೆಯಲ್ಲಿ (Ranipet district) ನಡೆದ ಕಳ್ಳತನದ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳ್ಳತನ ಮಾಡಿದ ಕಳ್ಳ ಇಷ್ಟಕ್ಕೂ ಮಾಡಿದ್ದೇನು..?
ರಾಣಿಪೇಟ ಜಿಲ್ಲೆಯ ಲಾಲಾಪೇಟ ಸಮೀಪದ (Shiva temple at Lalapet) ಕಾಂಚನಗಿರಿ ಬೆಟ್ಟದ ದೇವಸ್ಥಾನದಲ್ಲಿ ಜೂನ್ ತಿಂಗಳ 17 ರಂದು ಮಧ್ಯರಾತ್ರಿ ಕಳ್ಳತನ ನಡೆದಿತ್ತು. ಅಪರಿಚಿತ ವ್ಯಕ್ತಿ ಮಧ್ಯರಾತ್ರಿ ದೇವಸ್ಥಾನಕ್ಕೆ ನುಗ್ಗಿ ನಗದು ದೋಚಿ ಪರಾರಿಯಾಗಿದ್ದ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದಾದ ಕೆಲವು ದಿನಗಳ ನಂತರ, ದೇವಾಲಯದ ಆಡಳಿತಾಧಿಕಾರಿಗಳು ಹುಂಡಿಯಲ್ಲಿನ ಹುಂಡಿ ಹಣ ಎಣಿಕೆಗೆ ಮುಂದಾಗಿದ್ದರು. ಜೂನ್ 22ರ ಮಂಗಳವಾರದಂದು ಹುಂಡಿ ತೆರೆದು ನೋಡಿದಾಗ ಪತ್ರವೊಂದು ಗಮನ ಸೆಳೆದಿತ್ತು. ದೇವಸ್ಥಾನವನ್ನು ದರೋಡೆ ಮಾಡಿದ ಕಳ್ಳ ಬರೆದ ಪತ್ರ ಅದಾಗಿತ್ತು ಎಂದು ಅಧಿಕಾರಿಗಳು ಗುರುತಿಸಿದ್ದಾರೆ.
ಆ ಪತ್ರದಲ್ಲಿ ಏನಿತ್ತು ಅಂದರೆ… “ನನ್ನನ್ನು ಕ್ಷಮಿಸಿ. ಹುಣ್ಣಿಮೆ ಮುಗಿದ ನಂತರ ದೇವಸ್ಥಾನಕ್ಕೆ ನುಗ್ಗಿ ನಗದು ದೋಚಿದ್ದೆ. ಆದರೆ ಅಂದಿನಿಂದ ನನ್ನ ಮನಸ್ಸಿಗೆ ನೆಮ್ಮದಿ ಇರಲಿಲ್ಲ.. ಸಂಸಾರದಲ್ಲಿ ಸಮಸ್ಯೆಗಳು ಹುಟ್ಟಿಕೊಂಡವು. ಹಾಗಾಗಿ ಕಳ್ಳತನ ಮಾಡಿದ 10 ಸಾವಿರ ರೂ. ನಗದನ್ನು ಹುಂಡಿಯಲ್ಲಿ ಹಾಕುತ್ತಿದ್ದೇನೆ. ನನ್ನನ್ನು ಕ್ಷಮಿಸು ದೇವಾ ಎಂದು ಬರೆಯಲಾಗಿದೆ. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ದೇವರ ಮಹಿಮೆ ಎನ್ನುತ್ತಾರೆ ಸ್ಥಳೀಯರು ಹಾಗೂ ನೆಟ್ಟಿಗರು!
ತೆಲುಗುನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ