AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video ಇದು ಟಕೇಶೀಸ್​​​ ಕಾಸಲ್​​​​ ಅಲ್ಲ, ಬೃಹತ್​​​​​​​ ಹೊಂಡಗಳಿರುವ ಬಿಹಾರದ ರಾಷ್ಟ್ರೀಯ ಹೆದ್ದಾರಿ!

ಎರಡು ವಾರಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಿಹಾರದ ರಸ್ತೆ ಮೂಲಸೌಕರ್ಯವು ಡಿಸೆಂಬರ್ 2024 ರ ವೇಳೆಗೆ ಯುನೈಟೆಡ್ ಸ್ಟೇಟ್ಸ್‌ಗೆ ಸಮನಾಗಿರುತ್ತದೆ ಎಂದು ಹೇಳಿದ್ದರು

Video ಇದು ಟಕೇಶೀಸ್​​​ ಕಾಸಲ್​​​​ ಅಲ್ಲ, ಬೃಹತ್​​​​​​​ ಹೊಂಡಗಳಿರುವ ಬಿಹಾರದ ರಾಷ್ಟ್ರೀಯ ಹೆದ್ದಾರಿ!
ಬಿಹಾರದ ರಾಷ್ಟ್ರೀಯ ಹೆದ್ದಾರಿ
TV9 Web
| Edited By: |

Updated on:Jun 23, 2022 | 2:36 PM

Share

ಪಟನಾ: ಭಾರತದಲ್ಲಿ ಹೊಂಡು ಗುಂಡಿಗಳಿರುವ ರಸ್ತೆ ಸಾಮಾನ್ಯ, ಆದರೆ ಕಣ್ಣು ಹಾಯಿಸಿದಷ್ಟು ದೂರ ರಾಷ್ಟ್ರೀಯ ಹೆದ್ದಾರಿಯಲ್ಲಿ (National highway)  ಅಗಲವಾದ ದೈತ್ಯ ಹೊಂಡಗಳ ಚಿತ್ರಗಳು ಅಪರೂಪ. ದೈನಿಕ್ ಭಾಸ್ಕರ್ ಪತ್ರಿಕೆಯ ಪ್ರವೀಣ್ ಠಾಕೂರ್ ರಸ್ತೆ ಮೂಲಕ ಚಿತ್ರೀಕರಿಸಿದ ವೈಮಾನಿಕ ವಿಡಿಯೊದಲ್ಲಿ ಬಿಹಾರದ (Bihar) ಮಧುಬನಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 227 ರ ಆತಂಕಕಾರಿ ಸ್ಥಿತಿ ಬಹಿರಂಗವಾಗಿದೆ. ಇದು ಟಕೇಶೀಸ್ ಕಾಸಲ್ (Takeshi’s Castle)ನಂತಿದೆ ಎಂದು ಜನರು ಟೀಕಿಸಿದ್ದಾರೆ. 90ರ ದಶಕದ ಜಂಗಲ್ ರಾಜ್‌ನಲ್ಲಿ ಬಿಹಾರದ ರಸ್ತೆಗಳ ಸ್ಥಿತಿಯನ್ನು ನೆನಪಿಸುತ್ತಿರುವ  ಇದು ಬಿಹಾರದ ಮಧುಬನಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 227 (ಎಲ್). ಇತ್ತೀಚೆಗೆ ನಿತೀಶ್ ಕುಮಾರ್ ಅವರು ರಸ್ತೆ ನಿರ್ಮಾಣ ವಿಭಾಗದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಬಿಹಾರದ ರಸ್ತೆಗಳ ಉತ್ತಮ ಸ್ಥಿತಿಯ ಬಗ್ಗೆ ಅವರು ಎಲ್ಲರಿಗೂ ತಿಳಿಸಬೇಕು ಎಂದು ಪ್ರಶಾಂತ್ ಕಿಶೋರ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ದೈನಿಕ್ ಭಾಸ್ಕರ್ ವರದಿ ಪ್ರಕಾರ 2015ರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ದುರಸ್ತಿಗೆ ಇದುವರೆಗೆ ಮೂರು ಬಾರಿ ಟೆಂಡರ್‌ ಕರೆದರೂ ಕಾಮಗಾರಿಯನ್ನು ಅಪೂರ್ಣಗೊಳಿಸಿದ್ದರಿಂದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ.

ಎರಡು ವಾರಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬಿಹಾರದ ರಸ್ತೆ ಮೂಲಸೌಕರ್ಯವು ಡಿಸೆಂಬರ್ 2024 ರ ವೇಳೆಗೆ ಯುನೈಟೆಡ್ ಸ್ಟೇಟ್ಸ್‌ಗೆ ಸಮನಾಗಿರುತ್ತದೆ ಎಂದು ಹೇಳಿದ್ದರು. ಹಾಜಿಪುರದಲ್ಲಿ ಗಂಗಾ ನದಿಯ ಮೇಲೆ ಪುನರ್ನಿರ್ಮಿಸಿದ ಮಹಾತ್ಮ ಗಾಂಧಿ ಸೇತುವಿನ ಪೂರ್ವ ಪಾರ್ಶ್ವವನ್ನು ಉದ್ಘಾಟಿಸಿ ಮಾತನಾಡಿದ್ದ ಗಡ್ಕರಿ ಕಳೆದ ಕೆಲವು ವರ್ಷಗಳಲ್ಲಿ ಬಿಹಾರದ ರಸ್ತೆಗಳು ಮಹತ್ತರವಾದ ಸುಧಾರಣೆಯನ್ನು ಕಂಡಿದೆ ಎಂದಿದ್ದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 2:32 pm, Thu, 23 June 22