ಉತ್ತರಾಖಂಡ: ಕಮರಿಗೆ ಬಿದ್ದ ಮದುವೆ ದಿಬ್ಬಣದ ಬಸ್, 25 ಸಾವು
ಅಪಘಾತದ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ಹೀಗಾಗಿ ಅಕ್ಕಪಕ್ಕದ ಗ್ರಾಮಸ್ಥರು ಮೊಬೈಲ್ ಫೋನ್ಗಳ ಬ್ಯಾಟರಿ ಬೆಳಕಿನಲ್ಲಿ ಬಸ್ನಲ್ಲಿ ಸಿಲುಕಿದವರನ್ನು ಕಾಪಾಡಲು ಯತ್ನಿಸುತ್ತಿದ್ದಾರೆ
ಡೆಹ್ರಾಡೂನ್: ಉತ್ತರಾಖಂಡದ (Uttarakhand) ಪೌರಿ ಘರ್ವಾಲ್ ಜಿಲ್ಲೆಯ ಸಿಮ್ಡಿ ಗ್ರಾಮದ ಬಳಿ ರಿಖ್ನಿಖಾಲ್-ಬಿರೋಖಾಲ್ ರಸ್ತೆಯಲ್ಲಿ ಸುಮಾರು 50 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಕಮರಿಗೆ ಬಿದ್ದಿದ್ದು 25 ಜನರು ಮೃತಪಟ್ಟಿದ್ದಾರೆ. ಪೊಲೀಸರು ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಂದಕವು ಸುಮಾರು 500 ಮೀಟರ್ ಆಳವಿದೆ.
45 ರಿಂದ 50 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು 500 ಮೀಟರ್ ಕಂದಕಕ್ಕೆ ಬಿದ್ದಿದ್ದು, ಈವರೆಗೆ 6 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈವರೆಗೆ 9 ಮಂದಿಯನ್ನು ಮಾತ್ರ ರಕ್ಷಣೆ ಮಾಡಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಪೈಕಿ ಆರು ಮಂದಿಯ ಆರೋಗ್ಯ ಸ್ಥಿತಿ ಗಂಭೀರ ಸ್ವರೂಪದಲ್ಲಿದೆ. 6 ಶವಗಳನ್ನು ಮಾತ್ರವೇ ಮೇಲಕ್ಕೆ ತರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಒಟ್ಟು 25 ಮಂದಿ ಮೃತಪಟ್ಟಿದ್ದಾರೆ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
पौड़ी गढ़वाल में धुमाकोट रिखणीखाल बस हादसे में उत्तराखंड पुलिस और एसडीआरएफ ने स्थानीय लोगों के साथ मिलकर 21 लोगों को बचाया। @ANI pic.twitter.com/wgrf4HNkee
— Ashok Kumar IPS (@AshokKumar_IPS) October 5, 2022
ಮದುವೆ ದಿಬ್ಬಣವನ್ನು ಈ ಬಸ್ ಕೊಂಡೊಯ್ಯುತ್ತಿತ್ತು. ರಾತ್ರಿ ಸುಮಾರು 7.30ರ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು.
Uttarakhand | A bus carrying around 45 to 50 people falls into a gorge on Rikhnikhal-Birokhal road near Simdi village in Pauri Garhwal district. Police on the spot. Further details are awaited. pic.twitter.com/2FAw3gCJuv
— ANI UP/Uttarakhand (@ANINewsUP) October 4, 2022
‘ಅಪಘಾತದ ಸ್ಥಳಕ್ಕೆ ಅಗತ್ಯವಿರುವ ಪರಿಕರಗಳನ್ನು ರವಾನಿಸಲು, ಕೊಂಡೊಯ್ಯಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಅಕ್ಕಪಕ್ಕದ ಹಳ್ಳಿಗಳ ಜನರೂ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದರು. ಪರಿಹಾರ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆಯಲು ವಿಪತ್ತು ನಿರ್ವಹಣಾ ಪ್ರಾಧಿಕಾರ ಕಚೇರಿಗೂ ಮುಖ್ಯಮಂತ್ರಿ ಭೇಟಿ ನೀಡಿದ್ದರು.
ಅಪಘಾತದ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ಹೀಗಾಗಿ ಅಕ್ಕಪಕ್ಕದ ಗ್ರಾಮಸ್ಥರು ಮೊಬೈಲ್ ಫೋನ್ಗಳ ಬ್ಯಾಟರಿ ಬೆಳಕಿನಲ್ಲಿ ಬಸ್ನಲ್ಲಿ ಸಿಲುಕಿದವರನ್ನು ಕಾಪಾಡಲು ಯತ್ನಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯನ್ನು ಎಎನ್ಐ ಸುದ್ದಿಸಂಸ್ಥೆಯು ವರದಿ ಮಾಡಿತ್ತು.
Published On - 8:58 pm, Tue, 4 October 22