AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ದೆಗೆ ಜಾರಿದ ಚಾಲಕ, ನದಿಗೆ ಬಿದ್ದ ಬಸ್​; ಒಂದು ವರ್ಷದ ಮಗು ಸೇರಿ ಮೂವರು ಸಾವು

ಬಸ್​ ನದಿಗೆ ಬೀಳಲು ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಈ ಚಾಲಕನಿಗೆ ನಿದ್ದೆ ಬಂದ ಪರಿಣಾಮ ಬಸ್​ ನಿಯಂತ್ರಣ ತಪ್ಪಿ ಮೆಲ್ಖೋದ್ರಾ ನದಿಗೆ ಬಿದ್ದಿದೆ.

ನಿದ್ದೆಗೆ ಜಾರಿದ ಚಾಲಕ, ನದಿಗೆ ಬಿದ್ದ ಬಸ್​; ಒಂದು ವರ್ಷದ ಮಗು ಸೇರಿ ಮೂವರು ಸಾವು
ನದಿಗೆ ಬಿದ್ದ ಬಸ್​
Follow us
TV9 Web
| Updated By: Lakshmi Hegde

Updated on: Jan 02, 2022 | 11:34 AM

ಅಲಿರಾಜ್​ಪುರ: ಬಸ್​ವೊಂದು ನದಿ(Bus Fell Into River)ಗೆ ಬಿದ್ದು ಒಂದು ವರ್ಷದ ಮಗು ಸೇರಿ ಮೂರು ಮಂದಿ ಮೃತಪಟ್ಟು, 28 ಜನರು ಗಾಯಗೊಂಡ ಘಟನೆ ಮಧ್ಯಪ್ರದೇಶ(Madhya Pradesh)ದ ಅಲಿರಾಜ್​ಪುರ ಜಿಲ್ಲೆಯಲ್ಲಿ ನಡೆದಿದೆ.  ಇಂದು ಮುಂಜಾನೆ 6ಗಂಟೆ ಹೊತ್ತಿಗೆ ಅಲಿರಾಜ್​ಪುರದ ಚಾಂದ್​ಪುರ ಗ್ರಾಮದ ಬಳಿ ಬಸ್​ ನದಿಗೆ ಬಿದ್ದಿದೆ. ಅಂದಹಾಗೆ, ಈ ಬಸ್​ ಅಲಿರಾಜ್​ಪುರದಿಂದ ಗುಜರಾತ್​​ನ ಉದೇಪುರಕ್ಕೆ ಹೋಗುತ್ತಿತ್ತು ಎಂಬುದಾಗಿ ಪೊಲೀಸ್​ ಅಧಿಕಾರಿ ಮನೋಜ್​ ಕುಮಾರ್ ತಿಳಿಸಿದ್ದಾರೆ.

ಬಸ್​ ನದಿಗೆ ಬೀಳಲು ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಈ ಚಾಲಕನಿಗೆ ನಿದ್ದೆ ಬಂದ ಪರಿಣಾಮ ಬಸ್​ ನಿಯಂತ್ರಣ ತಪ್ಪಿ ಮೆಲ್ಖೋದ್ರಾ ನದಿಗೆ ಬಿದ್ದಿದೆ. ಮೃತರನ್ನು ಕೈಲಾಶ್​ ಮೇದಾ (48), ಮೀರಾಬಾಯಿ (46) ಎಂದು ಗುರುತಿಸಲಾಗಿದೆ. ಮೃತಪಟ್ಟ ಒಂದು ವರ್ಷದ ಮಗುವಿನ ಹೆಸರು ಗೊತ್ತಾಗಿಲ್ಲ. ಇನ್ನು 28 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ಮೂರೂ ಮಂದಿ ಗುಜರಾತ್​​ನವರೇ ಆಗಿದ್ದಾರೆ. ಜಿಲ್ಲಾಧಿಕಾರಿ ಮನೋಜ್​ ಪುಷ್ಪ್​ ಅವರು ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಾಗೇ, ಇದೇ ವರ್ಷ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಸ್​ವೊಂದು ಸೇತುವೆಯ ಕೆಳಗೆ ಬಿದ್ದು 51 ಮಂದಿ ಮೃತಪಟ್ಟಿದ್ದರು. ಮುಂಜಾನೆ 7.30ರ ಹೊತ್ತಿಗೆ ಘಟನೆ ನಡೆದಿತ್ತು.  ಸೆಪ್ಟೆಂಬರ್​ನಲ್ಲಿ ಮೇಘಾಲಯದಲ್ಲಿ ಇಂಥದ್ದೇ ಒಂದು ದುರ್ಘಟನೆ ನಡೆದಿತ್ತು. ತುರಾದಿಂದ ಶಿಲ್ಲಾಂಘ್​ಗೆ ತೆರಳುತ್ತಿದ್ದ ಬಸ್​ ರಂಗ್ಡಿ ನದಿಗೆ ಬಿದ್ದು, ಚಾಲಕ ಸೇರಿ ಆರು ಮಂದಿ ಮೃತಪಟ್ಟಿದ್ದರು.  2020ರ ಫೆಬ್ರವರಿಯಲ್ಲಿ ಜೈಪುರದಲ್ಲಿ. ಮುದವೆ ಮುಗಿಸಿ ವಾಪಸ್​ ಬರುತ್ತಿದ್ದ ಖಾಸಗಿ ಬಸ್​ವೊಂದು ಬುಂಡಿ ಜಿಲ್ಲೆಯ ಕೋಟಾ-ದೌಸಾ ಹೆದ್ದಾರಿಯಲ್ಲಿ ಮೇಜ್​ ನದಿಗೆ ಬಿದ್ದಿತ್ತು. ಈ ದುರಂತದಲ್ಲಿ  25ಮಂದಿ ಮೃತಪಟ್ಟಿದ್ದರು.ಈ ಬಸ್​ನಲ್ಲಿ ಅತ್ಯಂತ ಹೆಚ್ಚಿನ ಜನರು ತುಂಬಿ ಹೋಗಿದ್ದರು. ಚಾಲಕನಿಗೆ ನಿಯಂತ್ರಣ ಮಾಡಲಾಗದೆ ಅವಘಡ ಸಂಭವಿಸಿತ್ತು.

ಇದನ್ನೂ ಓದಿ: SSLC ಪರೀಕ್ಷೆ ದಿನಾಂಕ ಶೀಘ್ರವೇ ಪ್ರಕಟಿಸಲು ಶಿಕ್ಷಣ ಇಲಾಖೆಗೆ ಪತ್ರ ಬರೆದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ

ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ