SSLC ಪರೀಕ್ಷೆ ದಿನಾಂಕ ಶೀಘ್ರವೇ ಪ್ರಕಟಿಸಲು ಶಿಕ್ಷಣ ಇಲಾಖೆಗೆ ಪತ್ರ ಬರೆದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ

ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ನಿಗದಿ ಮಾಡಿಲ್ಲ. ಜೊತೆಗೆ 2021-22ನೇ ಸಾಲಿನ ಅರ್ಧವಾರ್ಷಿಕ ಪರೀಕ್ಷೆ ಕೂಡ ಇನ್ನೂ ನಡೆಸಿಲ್ಲ.

SSLC ಪರೀಕ್ಷೆ ದಿನಾಂಕ ಶೀಘ್ರವೇ ಪ್ರಕಟಿಸಲು ಶಿಕ್ಷಣ ಇಲಾಖೆಗೆ ಪತ್ರ ಬರೆದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ
ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ
Follow us
TV9 Web
| Updated By: sandhya thejappa

Updated on: Jan 02, 2022 | 10:45 AM

ಬೆಂಗಳೂರು: ಶಾಲೆ ಬಾಗಿಲು ತೆರೆದ ಬೆನ್ನಲ್ಲೆ ಕೊರೊನಾ (Coronavirus) ರೂಪಾಂತರಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಸದ್ಯ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾದರೆ ಮತ್ತೆ ಲಾಕ್​ಡೌನ್​ ಕೂಡಾ ಮಾಡಬಹುದು. ಈ ನಡುವೆ ಎಸ್ಎಸ್ಎಲ್​ಸಿ (SSLC) ಪರೀಕ್ಷೆಗೆ ಒಮಿಕ್ರಾನ್ ಕಂಟಕವಾಗುತ್ತಾ ಎಂಬ ಆತಂಕ ಶುರುವಾಗಿದೆ. ಶಿಕ್ಷಣ ಇಲಾಖೆ ಕೂಡಾ ಎಸ್ಎಲ್ಎಲ್​ಸಿ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪರೀಕ್ಷೆ ದಿನಾಂಕ ಶೀಘ್ರವೇ ಪ್ರಕಟಿಸಬೇಕೆಂದು ಆಗ್ರಹಿಸಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.

ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ ಎಸ್ಎಸ್ಎಲ್​ಸಿ ಪರೀಕ್ಷೆ ದಿನಾಂಕ ನಿಗದಿ ಮಾಡಿಲ್ಲ. ಜೊತೆಗೆ 2021-22ನೇ ಸಾಲಿನ ಅರ್ಧವಾರ್ಷಿಕ ಪರೀಕ್ಷೆ ಕೂಡ ಇನ್ನೂ ನಡೆಸಿಲ್ಲ. ಕನಿಷ್ಟ 3 ತಿಂಗಳಿಗೂ ಮುನ್ನ ಪರೀಕ್ಷಾ ದಿನಾಂಕ ಪ್ರಕಟಿಸಬೇಕು. ಆದರೆ ಶಿಕ್ಷಣ ಇಲಾಖೆ ಇನ್ನೂ ಪರೀಕ್ಷೆ ದಿನಾಂಕ ನಿಗದಿಗೊಳಿಸಿಲ್ಲ ಅಂತ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು.

ಪ್ರಶ್ನೆ ಪತ್ರಿಕೆ ಪ್ಯಾಟರ್ನ್ ಬಗ್ಗೆ ತಿಳಿಸಬೇಕು. ಆದರೆ ಇದುವರೆಗೂ ಪರೀಕ್ಷಾ ದಿನಾಂಕ ಪ್ರಕಟಿಸಿಲ್ಲ. ಇಲಾಖೆಗೆ ಮಕ್ಕಳ ಭವಿಷ್ಯದ ಚಿಂತೆ ಇಲ್ಲ. ಅಧಿಕಾರಿಗಳಿಗೆ ಹಣ ಮಾಡಿಕೊಳ್ಳುವ ಚಿಂತೆ. ಶಾಲೆಗಳ ಮಾನ್ಯತೆ ನವೀಕರಣ ಮಾಡುವ ವಿಚಾರದಲ್ಲಿ ಅಧಿಕಾರಿಗಳು ತಲ್ಲೀನರಾಗಿದ್ದಾರೆ. ಹೀಗಾಗಿ ಇಲಾಖೆ ಇದುವರೆಗೂ ಪರೀಕ್ಷಾ ದಿನಾಂಕ ಪ್ರಕಟಿಸಿಲ್ಲ. ಕೂಡಲೇ ಶಿಕ್ಷಣ ಇಲಾಖೆ ಪರೀಕ್ಷೆ ಕುರಿತು ದಿನಾಂಕ ಪ್ರಕಟಮಾಡಬೇಕು. ಮಕ್ಕಳ ಭವಿಷ್ಯದ ಚಿಂತನೆ ಕಡೆ ಇಲಾಖೆ ಗಮನ ಕೊಡಲಿ ಅಂತ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ

Vicky kaushal: ಇಂದೋರ್​ನ ಗಲ್ಲಿಗಳಲ್ಲಿ ಸಾರಾ ಜತೆ ಸುತ್ತಾಡಿದ ವಿಕ್ಕಿ ಕೌಶಲ್​ಗೆ ಎದುರಾಯ್ತು ಸಂಕಷ್ಟ! ಏನಿದು ಪ್ರಕರಣ?

ಹಲವು ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣ ಕಠಿಣ ನಿರ್ಬಂಧ; ಲಸಿಕೆ ಹಾಕಿಲ್ಲದಿದ್ದರೆ, ಪ್ರವೇಶವೂ ಇಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು