ಹಲವು ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣ ಕಠಿಣ ನಿರ್ಬಂಧ; ಲಸಿಕೆ ಹಾಕಿಲ್ಲದಿದ್ದರೆ, ಪ್ರವೇಶವೂ ಇಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು

ಅದರಲ್ಲೂ ಮುಂಬೈನಲ್ಲಿ ಜನವರಿ 7ರವರೆಗೆ ಅನ್ವಯ ಆಗುವಂತೆ ಸೆಕ್ಷನ್​ 144 ಹೇರಲಾಗಿದೆ. ಹೊಸವರ್ಷಾಚರಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಡಿಸೆಂಬರ್ 30ರಂದು, ಮುಂಬೈ ಪೊಲೀಸ್ ಉಪ ಆಯುಕ್ತ ಎಸ್​.ಚೈತನ್ಯ ಈ ಆದೇಶ ಹೊರಡಿಸಿದ್ದಾರೆ. 

ಹಲವು ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣ ಕಠಿಣ ನಿರ್ಬಂಧ; ಲಸಿಕೆ ಹಾಕಿಲ್ಲದಿದ್ದರೆ, ಪ್ರವೇಶವೂ ಇಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jan 02, 2022 | 8:48 AM

ದೆಹಲಿ: ಒಮಿಕ್ರಾನ್​ ಕಾರಣದಿಂದ ದೇಶಾದ್ಯಂತ ಹಲವು ದೇಶಗಳಲ್ಲಿ ಮತ್ತಷ್ಟು ಬಿಗಿ ಭದ್ರತೆ ಕಲ್ಪಿಸಲಾಗಿದೆ.  ಈಗಾಗಲೇ ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಗುಂಪುಗೂಡಿಕೆ ನಿಷೇಧಿಸಲಾಗಿದೆ. ಕೊರೊನಾ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳೂ ಶುರುವಾಗಿವೆ.  ದೆಹಲಿಯಲ್ಲಿ ಶ್ರೇಣೀಕೃತ ಪ್ರತಿಕ್ರಿಯಾ ಕಾರ್ಯ ಯೋಜನೆ (GDMA)ಯಡಿ ಹಳದಿ ಅಲರ್ಟ್​ ಘೋಷಣೆ ಮಾಡಲಾಗಿದೆ. ಅಂದರೆ ನೈಟ್ ಕರ್ಫ್ಯೂ ಉಲ್ಲಂಘಟನೆ ಮಾಡಿದವರಿಗೆ ದೊಡ್ಡ ಮೊತ್ತದ ದಂಡ ವಿಧಿಸಬಹುದಾಗಿದೆ.

ಅದರಲ್ಲೂ ಮುಂಬೈನಲ್ಲಿ ಜನವರಿ 7ರವರೆಗೆ ಅನ್ವಯ ಆಗುವಂತೆ ಸೆಕ್ಷನ್​ 144 ಹೇರಲಾಗಿದೆ. ಹೊಸವರ್ಷಾಚರಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಡಿಸೆಂಬರ್ 30ರಂದು, ಮುಂಬೈ ಪೊಲೀಸ್ ಉಪ ಆಯುಕ್ತ ಎಸ್​.ಚೈತನ್ಯ ಈ ಆದೇಶ ಹೊರಡಿಸಿದ್ದಾರೆ.  ಇದೆಲ್ಲದರ ಮಧ್ಯೆ ಕೆಲವು ರಾಜ್ಯಗಳ ಒಂದಷ್ಟು ಜಿಲ್ಲೆಗಳು, ಲಸಿಕೆ ಹಾಕಿಸಿದವರಿಗೆ ಪ್ರವೇಶವಿಲ್ಲ (No vaccine, no entry) ಎಂಬ ಕಾನೂನು ಜಾರಿ ಮಾಡಿವೆ. ಹೀಗೆ ನೋ ವ್ಯಾಕ್ಸಿನ್​, ನೋ ಎಂಟ್ರಿ ನಿಯಮ ಹೇರಿದ ಪ್ರದೇಶಗಳ ಬಗ್ಗೆ ವಿವರ ಇಲ್ಲಿದೆ..

ಮಹಾರಾಷ್ಟ್ರದ ಅಹ್ಮದಾಬಾದ್​ ಜಿಲ್ಲಾಡಳಿತ ಹೀಗೊಂದು ಆದೇಶ ರೂಪಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಗುಂಪುಗೂಡುವುದು, ಹೆಚ್ಚಿನ ಜನರು ಸೇರುವುದನ್ನು ನಿಷೇಧಿಸುವ ಸಲುವಾಗಿ ಸ್ಥಳೀಯ ಆಡಳಿತ ಹೀಗೊಂದು ನಿರ್ಧಾರ ಪ್ರಕಟಿಸಿದೆ. ಇನ್ನು ಹರ್ಯಾಣ ಸರ್ಕಾರವೂ ಕೂಡ ಇದೇ ಆದೇಶ ಹೊರಡಿಸಿದೆ. ಲಸಿಕೆ ಹಾಕಿಕೊಳ್ಳದೆ ಇರುವವರು ಸಾರ್ವಜನಿಕ ಪ್ರದೇಶದಿಂದ ದೂರ ಇರಬೇಕು ಎಂಬುದು ನಿಯಮವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ ಎಂದು ಹರ್ಯಾಣ ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ. ರಾಜಸ್ಥಾನದಲ್ಲಿ ನೈಟ್​ ಕರ್ಫ್ಯೂ ಹೇರಲಾಗಿದ್ದು, ಜನವರಿ 31ರಿಂದ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶ ಇರಲಿದೆ. ಈ ನಿಯಮ ಕಡ್ಡಾಯವಾಗಿ ಜಾರಿಗೆ ಬರಲಿದೆ.

ನಾಳೆಯಿಂದ (ಜನವರಿ 3) ದೇಶದಲ್ಲಿ 15-18 ವರ್ಷದವರಿಗೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಲಿದೆ. ಹಾಗೇ, ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60ವರ್ಷ ಮೇಲ್ಪಟ್ಟು ಇತರ ರೋಗಗಳಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆ ಬೂಸ್ಟರ್​ ಡೋಸ್​ ನೀಡಲು ಪ್ರಾರಂಭ ಮಾಡಲಾಗುತ್ತಿದೆ. ಆದರೆ ದೇಶದಲ್ಲಿ ಗಣನೀಯವಾಗಿ ಕೊವಿಡ್​ 19 ಕೇಸ್​ಗಳು ಹೆಚ್ಚುತ್ತಿರುವುದರಿಂದ ಹಲವು ನಿರ್ಬಂಧ ನಿಯಮಗಳ ಜಾರಿಯಾಗುತ್ತಿದೆ.

ಇದನ್ನೂ ಓದಿ: ಕೊವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ

Published On - 8:43 am, Sun, 2 January 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ