Cadbury Chocolate: ಡೇರಿ ಮಿಲ್ಕ್ ಚಾಕೋಲೇಟ್​ನಲ್ಲಿ ದನದ ಮಾಂಸವಿದೆಯಾ?; ಕ್ಯಾಡ್​ಬರಿಯಿಂದ ಅಚ್ಚರಿಯ ಸ್ಪಷ್ಟನೆ

| Updated By: ಸುಷ್ಮಾ ಚಕ್ರೆ

Updated on: Jul 19, 2021 | 3:10 PM

Cadbury Beef Controversy: ಕ್ಯಾಡ್​ಬರಿ ಚಾಕೋಲೇಟ್​ಗಳಲ್ಲಿ ಬೀಫ್ ಅಂಶವನ್ನು ಬಳಸಲಾಗುತ್ತದೆ ಎಂದು ವೆಬ್​ಸೈಟ್​ ಒಂದರಲ್ಲಿ ಬರೆದ ಲೇಖನ ಭಾರೀ ಚರ್ಚೆಗೊಳಗಾಗಿದೆ. ಹಾಗಾದರೆ, ನೀವು ತಿನ್ನುವ ಕ್ಯಾಡ್​ಬರಿ ಚಾಕೋಲೇಟ್​ನಲ್ಲಿ ನಿಜಕ್ಕೂ ದನದ ಮಾಂಸವಿದೆಯಾ?

Cadbury Chocolate: ಡೇರಿ ಮಿಲ್ಕ್ ಚಾಕೋಲೇಟ್​ನಲ್ಲಿ ದನದ ಮಾಂಸವಿದೆಯಾ?; ಕ್ಯಾಡ್​ಬರಿಯಿಂದ ಅಚ್ಚರಿಯ ಸ್ಪಷ್ಟನೆ
ಕ್ಯಾಡ್​ಬರಿ ಡೇರಿ ಮಿಲ್ಕ್
Follow us on

‘ಬಾಯಿ ಸಿಹಿ ಮಾಡೋಣ’ ಎಂದು ದಿನಕ್ಕೊಂದು ಹೊಸ ರೂಪದಲ್ಲಿ, ಹೊಸ ರುಚಿಯಲ್ಲಿ ಮಾರುಕಟ್ಟೆಗೆ ಬರುತ್ತಿರುವ  ಡೇರಿ ಮಿಲ್ಕ್ (Dairy Milk) ಚಾಕೋಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಕ್ಯಾಡ್​ಬರಿ (Cadbury Chocolates) ಕಂಪನಿಯ ಎಲ್ಲ ಚಾಕೋಲೇಟ್​ಗಳೂ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಅದೇ ಕಾರಣಕ್ಕೆ ಚಾಕೋಲೇಟ್ ಉದ್ಯಮದಲ್ಲಿ ಸಾಕಷ್ಟು ಹೊಸ ಬ್ರ್ಯಾಂಡ್​ಗಳು ಬಂದರೂ ಕ್ಯಾಡ್​ಬರಿ ಇನ್ನೂ ಬೇಡಿಕೆ ಉಳಿಸಿಕೊಂಡಿವೆ. ಈ ಕ್ಯಾಡ್​ಬರಿ ಕಂಪನಿಯ ಚಾಕೋಲೇಟ್​ಗಳ ಬಗ್ಗೆ ಆಗಾಗ ಹೊಸ ವಿವಾದಗಳು ಏಳುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಕ್ಯಾಡ್​ಬರಿ ಚಾಲೋಕೋಟ್​ಗಳಲ್ಲಿ ಬೀಫ್​ (Beef in Cadbury Chocolates) ಅಂಶಗಳಿರುತ್ತವೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಎಲ್ಲ ಸಮುದಾಯದ, ಎಲ್ಲ ವರ್ಗದ ಜನರೂ ಈ ಚಾಕೋಲೇಟ್ ತಿನ್ನುವುದರಿಂದ ದನದ ಮಾಂಸದ ಅಂಶಗಳನ್ನು ಹೊಂದಿರುವ ಕ್ಯಾಡ್​ಬರಿ ಉತ್ಪನ್ನಗಳನ್ನು ಬ್ಯಾನ್ ಮಾಡಬೇಕೆಂದು ಟ್ವಿಟ್ಟರ್​ನಲ್ಲಿ ಅಭಿಯಾನವೂ ನಡೆದಿತ್ತು. ಹಾಗಾದರೆ, ನೀವು ಇಷ್ಟಪಟ್ಟು ತಿನ್ನುವ ಕ್ಯಾಡ್​ಬರಿ ಚಾಕೋಲೇಟ್​ಗಳಲ್ಲಿ ನಿಜಕ್ಕೂ ಬೀಫ್ ಅಂಶ ಇದೆಯಾ? ಇಲ್ಲಿದೆ ಮಾಹಿತಿ.

ವೆಬ್​ಸೈಟ್​ ಒಂದರಲ್ಲಿ ಕ್ಯಾಡ್​ಬರಿ ಚಾಕೋಲೇಟ್​ಗಳಲ್ಲಿ ಬೀಫ್ ಅಂಶವನ್ನು ಬಳಸಲಾಗುತ್ತದೆ ಎಂದು ಬರೆದ ಲೇಖನವೊಂದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆ ಸ್ಕ್ರೀನ್​ಶಾಟ್​ ಅನ್ನು ಶೇರ್ ಮಾಡಿಕೊಂಡು ಕಳೆದ ವೀಕೆಂಡ್​ನಿಂದ ಟ್ವಿಟ್ಟರ್​ನಲ್ಲಿ #BoycottCadburyProducts ಎಂಬ ಅಭಿಯಾನವೂ ನಡೆದಿತ್ತು. ಕ್ಯಾಡ್​ಬರಿ ಚಾಕೋಲೇಟ್​ ಅನ್ನು ತಯಾರಿಸಲು ಜಿಲೆಟಿನ್ ಬಳಸಲಾಗುತ್ತದೆ ಎಂದು ವೆಬ್​ಸೈಟ್ ವರದಿ ಮಾಡಿತ್ತು. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ ಹಾಗೇ ನಮಗೆ ಅರಿವಿಲ್ಲದಂತೆ ದನದ ಮಾಂಸವನ್ನು ನಮಗೆ ತಿನ್ನಿಸಲಾಗುತ್ತಿದೆ. ಇದರಿಂದ ಕ್ಯಾಡ್​ಬರಿ ಚಾಕೋಲೇಟ್​ಗಳನ್ನು ಭಾರತದಲ್ಲಿ ಬ್ಯಾನ್ ಮಾಡಬೇಕೆಂಬ ಅಭಿಯಾನಗಳು ನಡೆದಿದ್ದವು.

ಈ ವಿವಾದದ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿರುವ ಕ್ಯಾಡ್​ಬರಿ ಕಂಪನಿ, ಭಾರತದಲ್ಲಿ ಮಾರಾಟ ಮಾಡಲಾಗುತ್ತಿರುವ ಕ್ಯಾಡ್​ಬರಿ ಉತ್ಪನ್ನಗಳೆಲ್ಲವೂ ಶೇ. 100ರಷ್ಟು ಸಸ್ಯಾಹಾರಿಯಾಗಿವೆ. ವೆಬ್​ಸೈಟ್​ನಲ್ಲಿ ತಿಳಿಸಲಾಗಿರುವ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ನಾವು ಬಿಟ್ಟಿಲ್ಲ. ಜಿಲೆಟಿನ್ ಅಂಶವನ್ನು ಹೊಂದಿರುವ ಕ್ಯಾಡ್​ಬರಿ ಚಾಕೋಲೇಟ್​ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿಲ್ಲ. ಕ್ಯಾಡ್​ಬರಿ ಚಾಕೋಲೇಟ್​ ಹಿಂಭಾಗದಲ್ಲಿ ಹಸಿರು ಬಣ್ಣದ ಚುಕ್ಕೆ ಇರುವುದನ್ನು ನೀವು ಗಮನಿಸಿರಬಹುದು. ಈ ಬಣ್ಣದ ಮಾರ್ಕ್ ಇರುವ ಉತ್ಪನ್ನಗಳೆಲ್ಲವೂ ಸಂಪೂರ್ಣ ಸಸ್ಯಾಹಾರಿಯಾಗಿರುತ್ತವೆ ಎಂದು ಖಚಿತಪಡಿಸಿದೆ.

ಹಾಗೇ, ಯಾವುದೇ ಒಂದು ಮಾಧ್ಯಮದಲ್ಲಿ ಬಂದ ಸುದ್ದಿಯನ್ನು ಅಥವಾ ಜನರಿಗೆ ಸಿಕ್ಕಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಿ. ಈ ರೀತಿಯ ನೆಗೆಟಿವ್ ಪೋಸ್ಟ್​ಗಳು ನಮ್ಮ ಬ್ರ್ಯಾಂಡ್ ಮೇಲೆ ಬಹಳ ಪರಿಣಾಮ ಬೀರುತ್ತವೆ. ಹಲವಾರು ವರ್ಷಗಳಿಂದ ಕ್ಯಾಡ್​ಬರಿ ಬ್ರ್ಯಾಂಡ್​ ಅನ್ನು ಎಲ್ಲ ಕಡೆ ತಲುಪಿಸಲು ನಾವು ಹಾಕಿರುವ ಶ್ರಮ ವ್ಯರ್ಥವಾಗುತ್ತದೆ. ಹಾಗೇ, ಈ ರೀತಿಯ ಮೆಸೇಜ್ ನೋಡಿದ ಗ್ರಾಹಕರು ನಮ್ಮ ಉತ್ಪನ್ನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಇದರಿಂದ ನಾವು ನಮ್ಮ ಗ್ರಾಹಕರ ನಂಬಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ಕ್ಯಾಡ್​ಬರಿ ಟ್ವೀಟ್ ಮೂಲಕ ಮನವಿ ಮಾಡಿದೆ.

ಅಂದಹಾಗೆ, ಈಗಾಗಲೇ ವೈರಲ್ ಆಗಿರುವ ವೆಬ್​ಸೈಟ್​ನ ಲೇಖನ ಆಸ್ಟ್ರೇಲಿಯಾದಲ್ಲಿ ಪ್ರಕಟವಾದುದಾಗಿದೆ. ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡಲಾಗುವ ಕ್ಯಾಡ್​ಬರಿ ಚಾಕೋಲೇಟ್​ಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೀತಿಯದ್ದಿರುತ್ತವೆ. ಆದರೆ, ಭಾರತದಲ್ಲಿ ಹಸಿರು ಮಾರ್ಕ್ ಇರುವ ಸಸ್ಯಾಹಾರಿ ಚಾಕೋಲೇಟ್​ಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ ಎಂದು ಕ್ಯಾಡ್​ಬರಿ ಸ್ಪಷ್ಟಪಡಿಸಿದೆ. ಹೀಗಾಗಿ, ನಿಮ್ಮ ಫೇವರೆಟ್ ಡೇರಿ ಮಿಲ್ಕ್/ ಕ್ಯಾಡ್​ಬರಿ ಚಾಕೋಲೇಟ್​ಗಳನ್ನು ನೀವಿನ್ನು ಧೈರ್ಯವಾಗಿ ತಿನ್ನಬಹುದು!

ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

(Cadbury Clarifies on Viral Tweet about Cadbury Chocolates Beef Controversy Dairy Milk)

Published On - 2:00 pm, Mon, 19 July 21