ದೆಹಲಿ: ಕೊರೊನಾ ಎರಡನೇ ಅಲೆ ಊಹೆಗೂ ಮೀರಿ ಹಾನಿ ಮಾಡಿದೆ. ವೇಗವಾಗಿ ಹರಡಿ ಬಹಳಷ್ಟು ನೋವಿಗೆ ಕಾರಣವಾಗಿದೆ. ಈ ಮಧ್ಯೆ ಕೊವಿಡ್-19 ಮೂರನೇ ಅಲೆ ಎದುರಾಗಲಿರುವ ಬಗ್ಗೆಯೂ ತಜ್ಞರು ಮಾಹಿತಿ ಕೊಟ್ಟಿದ್ದಾರೆ. ಅದಕ್ಕೂ ಮೊದಲೇ ದೇಶದ ಎಲ್ಲಾ ಜನರಿಗೂ ಲಸಿಕೆ ನೀಡಲು ಸರ್ಕಾರ ತಯಾರಿ ಮಾಡಿದೆ.
ದೇಶಾದ್ಯಂತ ಲಸಿಕೆ ನೀಡಿಕೆಗೆ ಯೋಜನೆ ಸಿದ್ಧವಾಗುತ್ತಿದೆ ಎಂದು ತಿಳಿದುಬಂದಿದೆ. ತಜ್ಞರ ಜತೆ ಕೇಂದ್ರ ಸರ್ಕಾರದ ನಿರಂತರ ಸಂಪರ್ಕದಲ್ಲಿದೆ. ಕೊವ್ಯಾಕ್ಸಿನ್, ಕೊವಿಶೀಲ್ಡ್ ಜೊತೆ ಇನ್ನೂ 3 ಲಸಿಕೆ ಮಾರುಕಟ್ಟೆಗೆ ಬರಲಿದೆ. ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿರುವ ವ್ಯಾಕ್ಸಿನ್‌ಗಳು ಕೊರೊನಾ ತಡೆಗೆ ಸಹಕಾರಿಯಾಗಲಿದೆ.
ರಷ್ಯಾದ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗೆ ಖಾಸಗಿ ವಲಯಕ್ಕೂ ಅವಕಾಶ ನೀಡುವ ಸಾಧ್ಯತೆ ಇದೆ. ಖಾಸಗಿ ವಲಯಕ್ಕೂ ಅವಕಾಶ ನೀಡಲು ಕೇಂದ್ರ ಚಿಂತನೆ ನಡೆಸಿದೆ. ಮಾಡರ್ನಾ ಲಸಿಕೆಯೂ ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ. ಜಾನ್ಸನ್ & ಜಾನ್ಸನ್ ಸಂಸ್ಥೆಯ ಮಾಡರ್ನಾ ಲಸಿಕೆ ಭಾರತ ಪ್ರವೇಶಿಸಲಿದೆ.
ಡಿಆರ್ಡಿಒ ಸಂಸ್ಥೆ ಲಸಿಕೆ ಬದಲು ಮಾತ್ರೆ ಮಾದರಿ ಔಷಧ ಬಿಡುಗಡೆಗೊಳಿಸಿದೆ. ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಕ್ಯಾಲೆಂಡರ್ ಆಫ್ ಇವೆಂಟ್ಸ್ ಸಿದ್ಧಪಡಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಡಿಸೆಂಬರ್ ಅಂತ್ಯಕ್ಕೆ 3ನೇ ಅಲೆ ಸೂಚನೆ ನೀಡಿದೆ. ಅದರೊಳಗೆ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ತಯಾರಿ ನಡೆಸುತ್ತಿದೆ.
ಕೊವ್ಯಾಕ್ಸಿನ್ ಲಸಿಕೆ ವಿದೇಶದಲ್ಲಿ ಉತ್ಪಾದನೆಗೆ ಯೋಜನೆ
ದೇಶದ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿದೇಶದಲ್ಲೂ ಉತ್ಪಾದಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಜರ್ಮನಿಯ ಐದು ಕಂಪನಿಗಳು ಉತ್ಪಾದನೆಗೆ ಆಸಕ್ತಿ ತೋರಿದೆ. ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಕೊರತೆ ಹಿನ್ನೆಲೆಯಲ್ಲಿ, ಲಸಿಕೆ ತಂತ್ರಜ್ಞಾನವನ್ನು ವಿದೇಶಕ್ಕೆ ವರ್ಗಾಯಿಸಿ ಅಲ್ಲಿ ಲಸಿಕೆ ಉತ್ಪಾದನೆ ಮಾಡಲಾಗುವ ಬಗ್ಗೆ ಯೋಜಿಸಲಾಗಿದೆ. ಮಿಷನ್ ಕೊವಿಡ್ ಸುರಕ್ಷಾ ಯೋಜನೆಯಡಿ ಲಸಿಕೆ ನೀಡಿಕೆ ಪ್ರಕ್ರಿಯೆಗೆ ತಯಾರಿ ಮಾಡಲಾಗುತ್ತಿದೆ. ತಿಂಗಳಿಗೆ 10 ಕೋಟಿ ಡೋಸ್ ಲಸಿಕೆ ಉತ್ಪಾದನೆ ಆಗಲಿದೆ ಎಂದು ಹೇಳಲಾಗುತ್ತಿದೆ. ತಂತ್ರಜ್ಞಾನ ವರ್ಗಾವಣೆಗೆ ಭಾರತ್ ಬಯೋಟೆಕ್ ಕೂಡ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೊರೊನಾ ವಿರುದ್ಧ ಹೊಸ ಅಸ್ತ್ರ: ಡಿಆರ್ಡಿಓ ಅಭಿವೃದ್ಧಿಪಡಿಸಿದ 2ಡಿಜಿ ಔಷಧ ಬಿಡುಗಡೆ
ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮುಂದುವರಿಸಲಿ; ಹೆಚ್.ಡಿ.ಕುಮಾರಸ್ವಾಮಿ ಸಲಹೆ
Published On - 3:04 pm, Mon, 17 May 21