AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಸಭೆಯಲ್ಲಿ ಕ್ಯಾಂಡಿ ಕ್ರಷ್ ಆಡಿದ ಛತ್ತೀಸ್​ಗಢ ಸಿಎಂ ಭೂಪೇಶ್​ ಬಾಘೇಲ್​

ಕಾಂಗ್ರೆಸ್​ನ ಪ್ರಮುಖ ಸಭೆಯೊಂದರಲ್ಲಿ ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್ ಕ್ಯಾಂಡಿಕ್ರಷ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಭಾರತೀಯ ಜನತಾ ಪಕ್ಷವು ಸಿಎಂ ಮತ್ತು ಕಾಂಗ್ರೆಸ್ ಇಬ್ಬರನ್ನೂ ಗುರಿಯಾಗಿಸಿದೆ. ಇದೀಗ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸಿಎಂ ಪ್ರತಿಕ್ರಿಯಿಸಿದ್ದಾರೆ. ಕ್ಯಾಂಡಿ ಕ್ರಷ್‌ನಲ್ಲಿ 4400ನೇ ಹಂತದಲ್ಲಿದ್ದೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸಭೆಯಲ್ಲಿ ಕ್ಯಾಂಡಿ ಕ್ರಷ್ ಆಡಿದ ಛತ್ತೀಸ್​ಗಢ ಸಿಎಂ ಭೂಪೇಶ್​ ಬಾಘೇಲ್​
ಭೂಪೇಶ್ ಬಾಘೇಲ್Image Credit source: Hindustan
ನಯನಾ ರಾಜೀವ್
|

Updated on:Oct 12, 2023 | 3:42 PM

Share

ಕಾಂಗ್ರೆಸ್​ನ ಪ್ರಮುಖ ಸಭೆಯೊಂದರಲ್ಲಿ ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್(Bhupesh Baghel) ಕ್ಯಾಂಡಿಕ್ರಷ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಭಾರತೀಯ ಜನತಾ ಪಕ್ಷವು ಸಿಎಂ ಮತ್ತು ಕಾಂಗ್ರೆಸ್ ಇಬ್ಬರನ್ನೂ ಗುರಿಯಾಗಿಸಿದೆ. ಬಿಜೆಪಿ ಐಟಿ ಸೆಲ್​ನ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದು, ಹೇಗೂ ಈ ಬಾರಿ ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸ್ಪಷ್ಟವಾದಂತಿದೆ ಹಾಗಾಗಿಯೇ ಸಭೆಯಲ್ಲಿ ಮುಖ್ಯಮಂತ್ರಿಗಳು ಕ್ಯಾಂಡ್​ಕ್ರಷ್ ಆಡುತ್ತಿದ್ದರು ಎಂದು ಗೇಲಿ ಮಾಡಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸಿಎಂ ಪ್ರತಿಕ್ರಿಯಿಸಿದ್ದಾರೆ. ನಾನು ಗಿಲ್ಲಿ ದಾಂಡನ್ನೂ ಆಡುತ್ತೇನೆ, ಕ್ಯಾಂಡಿಕ್ರಷ್​ನ್ನು ಆಡುತ್ತೇನೆ, ನಾನು ಲೆವೆಲ್ ಚೆನ್ನಾಗಿ ಪಾಸಾಗಿದ್ದೇನೆ, ಅದು ಇನ್ನು ಮುಂದೆ ಕೂಡ ಮುಂದುವರೆಯುತ್ತದೆ ಎಂದರು, ಯಾರಿಗೆ ಮತ ಹಾಕಬೇಕು ಹಾಕಬಾರದು ಎಂಬುದು ಛತ್ತೀಸ್​ಗಢದ ಜನತೆಗೆ ತಿಳಿದಿದೆ ಎಂದು ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ರಾಯ್‌ಪುರದಲ್ಲಿ ಮೊದಲು ಕಾಂಗ್ರೆಸ್ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಿತು, ನಂತರ ರಾತ್ರಿ ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ಸಭೆ ನಡೆಯಿತು.

ಮತ್ತಷ್ಟು ಓದಿ: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋಲಲು ಛತ್ತೀಸ್​ಗಢ ಸಿಎಂ ಭೂಪೇಶ್ ಬಾಘೇಲ್ ಕಾರಣ ಎಂದ ತೇಜಸ್ವಿ ಸೂರ್ಯ

ಕರ್ನಾಟಕದಲ್ಲಿ ಬಿಜೆಪಿ ಸೋಲಲು ಭೂಪೇಶ್​ ಬಾಘೇಲ್ ಕಾರಣ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್(Bhupesh Baghel) ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ. ಭೂಪೇಶ್​ ಬಾಘೇಲ್ ಅವರು ಇಲ್ಲಿ ಹಣವನ್ನು ಲೂಟಿ ಮಾಡಿ ಕರ್ನಾಟಕಕ್ಕೆ ಕಳುಹಿಸಿದರು, ಅದೇ ಕಾರಣದಿಂದ ಬಿಜೆಪಿಯು ಕರ್ನಾಟಕದಲ್ಲಿ ಸೋತಿದೆ ಎಂದಿದ್ದಾರೆ.

ಆದರೆ ಈ ಬಾರಿ ಚತ್ತೀಸ್​ಗಢದ ಯುವ ಜನತೆ ಛತ್ತೀಸ್​ಗಢವನ್ನು ಭ್ರಷ್ಟಾಚಾರ, ವಂಶರಾಜಕಾರಣದಿಂದ ಮುಕ್ತಗೊಳಿಸಿ ಬಿಜೆಪಿಯನ್ನು ಸ್ಥಾಪಿಸಲು ಸಿದ್ಧವಾಗಿದ್ದಾರೆ ಎಂದು ಸೂರ್ಯ ಹೇಳಿದ್ದಾರೆ. ಛತ್ತೀಸ್‌ಗಢ ರಾಜ್ಯ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಹೊರಬರಲಿದೆ.

ಕಾಂಗ್ರೆಸ್ ಸರ್ಕಾರದ ನೀತಿಗಳಿಂದಾಗಿ ನೊಂದಿರುವ ರಾಜ್ಯದ ಯುವಜನರ ಪರವಾಗಿ ನ್ಯಾಯಕ್ಕಾಗಿ ಹೋರಾಡುವುದಾಗಿ ತೇಜಸ್ವಿ ಸೂರ್ಯ ಪ್ರತಿಜ್ಞೆ ಮಾಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:40 pm, Thu, 12 October 23