ದೆಹಲಿ: ಮಹಾಮಾರಿ ಕೊರೊನಾ ಲಸಿಕೆ ಈಗ ದೇಶದ ಹಲವು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಜನವರಿ 16ರಿಂದ ಲಸಿಕೆ ಹಾಕಲಾಗುತ್ತೆ. ಆದ್ರೆ ಈ ಲಸಿಕೆ ಎಷ್ಟು ಪರಿಣಾಮಕಾರಿ ಹಾಗೂ ಎಷ್ಟು ಸೇಫ್ ಎಂಬ ಗೊಂದಲ ಸಾಮಾನ್ಯವಾಗಿ ಹುಟ್ಟುತ್ತೆ. ಆದ್ರೆ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ಪಡೆದ ನಂತರ ಅವರಿಗೇನಾದ್ರು ಸೈಡ್ ಎಫೆಕ್ಟ್ ಆದ್ರೆ ಅವರು ಕೇಸ್ ದಾಖಲಿಸಬಹುದು.
ಕೇಂದ್ರ ಸರ್ಕಾರ ಯಾವುದೇ ಲಿಖಿತ ಭರವಸೆ, ಆದೇಶ ಇಲ್ಲ
ಕೊರೊನಾ ಲಸಿಕೆ ಕಂಪನಿಗಳಿಗೆ ಕೋರ್ಟ್ ಕೇಸ್ ನಿಂದ ರಕ್ಷಣೆ ಇಲ್ಲ. ಲಸಿಕೆ ಪಡೆದ ನಂತರ ಲಸಿಕೆಯಿಂದ ಗಂಭೀರ ಸೈಡ್ ಎಫೆಕ್ಟ್ ಉಂಟಾದರೇ ಕೋರ್ಟ್ ಕೇಸ್ ದಾಖಲಿಸಬಹುದು. ಆಗ ಲಸಿಕಾ ಕಂಪನಿಗಳೇ ತೊಂದರೆಗೊಳಗಾದವರಿಗೆ ಪರಿಹಾರ ನೀಡಬೇಕು.
ಲಸಿಕಾ ಕಂಪನಿಗಳಿಗೆ ಕೋರ್ಟ್ ಕೇಸ್ ನಿಂದ ರಕ್ಷಣೆ ನೀಡಿದರೇ ಸರ್ಕಾರ ಪರಿಹಾರ ನೀಡಬೇಕಾಗುತ್ತದೆ. ಆದ್ರೆ ಲಸಿಕಾ ಕಂಪನಿಗಳು ಕೋರ್ಟ್ ಕೇಸ್ ನಿಂದ ರಕ್ಷಣೆ ಕೇಳುತ್ತಿವೆ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ , ಭಾರತ್ ಬಯೋಟೆಕ್ ಕಂಪನಿ ಲಸಿಕೆ ವಿರುದ್ಧ ಕೋರ್ಟ್ ಕೇಸ್ ದಾಖಲು ಮಾಡದಂತೆ ರಕ್ಷಣೆ ಬೇಕೆಂದಿವೆ. ಆದರೆ ಇದುವರೆಗೂ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಲಿಖಿತ ಭರವಸೆ, ಆದೇಶ ನೀಡಿಲ್ಲ.
ಕೊರೊನಾ ಲಸಿಕೆ ಬರ ಮಾಡಿಕೊಳ್ಳಲು ರಾಜ್ಯದಲ್ಲಿ ಸಕಲ ಸಿದ್ಧತೆ: ಯಾವ ಜಿಲ್ಲೆಗೆ, ಎಷ್ಟು ಲಸಿಕೆ?