ಅತ್ಯಾಚಾರ ಆರೋಪ: ಸಚಿವ ಧನಂಜಯ ಮುಂಡೆ ವಿರುದ್ಧ ದೂರು ಸಲ್ಲಿಸಿದ ಗಾಯಕಿ
ತಮಗೆ ಆಗಿರುವ ಅನ್ಯಾಯದ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿವರಿಸಿರುವ ಗಾಯಕಿ ರೇಣು ಶರ್ಮಾ ತನಗೆ ಸಹಾಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (Nationalist Congress Party) ಹಿರಿಯ ನಾಯಕ ಮತ್ತು ರಾಜ್ಯ ಸಚಿವ ಧನಂಜಯ ಮುಂಡೆ ಅತ್ಯಾಚಾರ ಎಸಗಿದ್ದಾರೆಂದು ಗಾಯಕಿ ರೇಣು ಶರ್ಮಾ ಪೊಲೀಸರಿಗೆ ದೂರನ್ನು ಸಲ್ಲಿಸಿದ್ದಾರೆ.
ತನ್ನ ಮೇಲೆ ಮಹಾರಾಷ್ಟ್ರ ರಾಜ್ಯ ಸಚಿವ ಧನುಂಜಯ ಮುಂಡೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ದೂರನ್ನು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ಗೆ ಬರೆದಿರುವ ಪತ್ರದಲ್ಲಿ ಗಾಯಕಿ ರೇಣು ಶರ್ಮಾ ತಿಳಿಸಿದ್ದಾರೆ. ತನಗಾದ ಅನ್ಯಾಯಕ್ಕೆ ಸೂಕ್ತ ನ್ಯಾಯ ಒದಗಿಸಬೇಕು. ಧನಂಜಯ ಮುಂಡೆ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪತ್ರದಲ್ಲಿ ಹೇಳಿದ್ದಾರೆ.
ತಮಗೆ ಆಗಿರುವ ಅನ್ಯಾಯದ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿವರಿಸಿರುವ ಗಾಯಕಿ ರೇಣು ಶರ್ಮಾ ತನಗೆ ಸಹಾಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಕೆಲವು ಸಮಯದಿಂದ ನನ್ನ ಬಗ್ಗೆ ಅತ್ಯಾಚಾರದ ಆರೋಪಗಳು ಕೇಳಿಬರುತ್ತಿದೆ. ಆದರೆ ಇದು ಸುಳ್ಳು. ಅಲ್ಲದೇ 2003ರಿಂದ ರೇಣು ಶರ್ಮಾಳ ಅಕ್ಕನಾದ ಕರುಣಾ ಶರ್ಮಾದೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿದ್ದೇನೆ. ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಈ ವಿಚಾರ ನನ್ನ ಕುಟುಂಬಕ್ಕೂ ತಿಳಿದಿದೆ ಎಂದು ಸ್ಪಷ್ಟಪಡಿಸಿದ ರಾಜ್ಯ ಸಚಿವ ಧನಂಜಯ ಮುಂಡೆ ಗಾಯಕಿ ರೇಣು ಶರ್ಮಾರವರ ಆರೋಪಗಳು ಸುಳ್ಳಾಗಿವೆ ಎಂದು ತಿಳಿಸಿದ್ದಾರೆ.
I have lodged complaint of Rape @MumbaiPolice @CPMumbaiPolice against #DhananjayMunde no action till now @PawarSpeaks @supriya_sule @UdhavThackeray . Oshiwara police station is not even accepting my written complaint @Dev_Fadnavis my life is in threat please help @narendramodi pic.twitter.com/mf4ZlHxd6A
— renu sharma (@renusharma018) January 11, 2021
IMA caseI ಹೊಸ ಸಾಕ್ಷ್ಯಾಧಾರಗಳ ಹುಡುಕಾಟದಲ್ಲಿ ಸಿಬಿಐ.. ಐಪಿಎಸ್ ಅಧಿಕಾರಿಗಳ ಆಸ್ತಿ ಜಪ್ತಿ ಯಾವಾಗ?