ಆಗ 251ಕ್ಕೆ ಸ್ಮಾರ್ಟ್ಫೋನ್, ಈಗ ಡ್ರೈ ಫ್ರುಟ್ಸ್ ವ್ಯಾಪಾರಿಗಳಿಗೆ ಮೋಸ : 200 ಕೋಟಿ ರೂ. ವಂಚನೆ ಆರೋಪದಡಿ ಮೋಹಿತ್ ಗೋಯೆಲ್ ಬಂಧನ
ಅಂದು ಮೊಬೈಲ್ ಹೆಸರಲ್ಲಿ ವಂಚನೆ ಮಾಡಿದ್ದ ರಿಂಗಿಂಗ್ ಬೆಲ್ಸ್ ಕಂಪನಿ ಮುಖ್ಯಸ್ಥ ಮೋಹಿತ್ ಗೋಯೆಲ್ ಇದೀಗ ಡ್ರೈಫ್ರುಟ್ಸ್ ಉದ್ಯಮ ಸ್ಥಾಪಿಸಿ, ವ್ಯಾಪಾರಿಗಳಿಗೇ ಮೋಸ ಮಾಡಿ, ಅರೆಸ್ಟ್ ಆಗಿದ್ದಾರೆ. ಮೋಹಿತ್ರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ನೋಯ್ಡಾ: 2017 ರಲ್ಲಿ ಅತಿ ಕಡಿಮೆ ಬೆಲೆಗೆ ರಿಂಗಿಂಗ್ ಬೆಲ್ಸ್ ಕಂಪನಿಯ ಫ್ರೀಡಂ 251 ಸ್ಮಾರ್ಟ್ಫೋನ್ ಸಿಗುವುದೆಂದು ಬುಕ್ಕಿಂಗ್ ಮಾಡಿದ್ದವರು ಅದೆಷ್ಟೋ ಮಂದಿ.. ! ಆದರೆ ಆಗಿದ್ದು ಮಾತ್ರ ವಂಚನೆ. ಕೈಗೆ ಮೊಬೈಲಂತೂ ಸಿಗಲೇ ಇಲ್ಲ. ನಂತರ ಆ ಮೊಬೈಲ್ ಕಂಪನಿ ಏನಾಯಿತು ಎಂಬುದೂ ತಿಳಿಯಲಿಲ್ಲ. ಆದರೆ ಅಂದು ವಂಚನೆ ಮಾಡಿ ಸುದ್ದಿಯಾಗಿದ್ದ ಕಂಪನಿಯ ಮುಖ್ಯಸ್ಥ ಮಾತ್ರ ಇದೀಗ ಇನ್ನೊಂದು ವಂಚನೆಯ ಮೂಲಕ ಸುದ್ದಿಯಾಗಿದ್ದಾರೆ.
ಅಂದು ಮೊಬೈಲ್ ಹೆಸರಲ್ಲಿ ವಂಚನೆ ಮಾಡಿದ್ದ ರಿಂಗಿಂಗ್ ಬೆಲ್ಸ್ ಕಂಪನಿ ಮುಖ್ಯಸ್ಥ ಮೋಹಿತ್ ಗೋಯೆಲ್ ಇದೀಗ ಡ್ರೈಫ್ರುಟ್ಸ್ ಉದ್ಯಮ ಸ್ಥಾಪಿಸಿ, ವ್ಯಾಪಾರಿಗಳಿಗೇ ಮೋಸ ಮಾಡಿ, ಅರೆಸ್ಟ್ ಆಗಿದ್ದಾರೆ. ಮೋಹಿತ್ರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ದುಬೈ ಡ್ರೈ ಫ್ರುಟ್ಸ್ ಮತ್ತು ಸ್ಪೈಸಸ್ ಹಬ್ ಎಂಬ ಕಂಪನಿಯನ್ನು ಇತರ ಐವರೊಂದಿಗೆ ಸ್ಥಾಪಿಸಿದ್ದ ಮೋಹಿತ್ ಗೋಯೆಲ್ ವಿರುದ್ಧ ದೇಶದ ವಿವಿಧ ಭಾಗಗಳಿಂದ ಕನಿಷ್ಟ 40 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿದ್ದು, ಹೆಚ್ಚಿನ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ. 200 ಕೋಟಿ ರೂ. ಮೊತ್ತದ ಹಗರಣ ನಡೆದಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಮೊದಲು ವಿಶ್ವಾಸ ಗಳಿಸುತ್ತಿದ್ದರು, ನಂತರ ಮೋಸ.. ಮೊಹಿತ್ ಗೋಯೆಲ್ ಒಡೆತನದ ಕಂಪನಿಗಳು ಇತರ ವ್ಯಾಪಾರಿಗಳಿಂದ ಡ್ರೈ ಫ್ರುಟ್ಸ್ ಖರೀದಿಸುತ್ತಿದ್ದರು. ವಹಿವಾಟಿಗೂ ಮುನ್ನವೇ ಮುಂಗಡವಾಗಿ ಹಣ ನೀಡಿ ವ್ಯಾಪಾರಿಗಳ ವಿಶ್ವಾಸ ಗಳಿಸುತ್ತಿದ್ದರು. ಆದರೆ, ಖರೀದಿಯ ನಂತರ ಹಣ ಪಾವತಿಸುತ್ತಿರಲಿಲ್ಲ. ಅವರು ನೀಡಿದ್ದ ಚೆಕ್ಗಳು ಸಹ ಬೌನ್ಸ್ ಆಗುತ್ತಿದ್ದವು ಎಂದು ಹಲವು ವ್ಯಾಪಾರಿಗಳು ಪ್ರಕರಣ ದಾಖಲಿಸಿದ್ದರು.
ಮೋಹಿತ್ ಗೊಯೇಲ್ ಜತೆಗೆ, ಸುಮಿತ್ ಯಾದವ್, ಪ್ರವೀಣ್ ಸಿಂಗ್ ನಿರ್ವಾಣ್, ರಾಜೀವ್ ಕುಮಾರ್, ಓಂ ಪ್ರಕಾಶ್ ಜಂಗಿಡ್ರ ಹೆಸರಲ್ಲಿ ಕಂಪನಿ ನೋಂದಣಿಯಾಗಿತ್ತು. 2017ರಲ್ಲಿ ಮೋಹಿತ್ ಗೋಯೆಲ್ ಕೇವಲ 251 ರೂಪಾಯಿಗೆ ಸ್ಮಾರ್ಟ್ಪೋನ್ ಮಾರುವುದಾಗಿ ಮುಂಗಡ ಬುಕಿಂಗ್ ಮಾಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನೋಯ್ಡಾ, ಘಾಜಿಯಾಬಾದ್, ಜಲಂಧರ್, ಪಾಣಿಪತ್, ಗೋರಖ್ಪುರ್ಗಳಲ್ಲಿ ಪ್ರಕರಣ ದಾಖಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಭಾರತದಲ್ಲಿ ಕಡಿಮೆ ಬೆಲೆಗೆ ಲಾಂಚ್ ಆಯ್ತು 55 ಇಂಚಿನ ಶಿಯೋಮಿ 4ಕೆ ಟಿವಿ
Published On - 4:30 pm, Wed, 13 January 21