ಮೋದಿ, ಶಾ ವಿರುದ್ಧ ಅವಹೇಳನಕಾರಿ ಫೋಸ್ಟ್.. ಫೇಸ್ಬುಕ್ ಬಳಕೆದಾರನ ವಿರುದ್ಧ ಎಫ್ಐಆರ್

| Updated By: Lakshmi Hegde

Updated on: May 02, 2021 | 10:03 AM

ಫೇಸ್‌ಬುಕ್ ಬಳಕೆದಾರನಾಗಿರುವ ಕಪಿಲ್ ಕುಮಾರ್ ಅಲಿಯಾಸ್ ಕಪಿಲ್ ಪರ್ಮಾರ್ ಎಂಬ ಪ್ರೊಫೈಲ್ ಹೆಸರಿನ ಫೇಸ್ಬುಕ್ ಬಳಕೆದಾರನ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಮೋದಿ, ಶಾ ವಿರುದ್ಧ ಅವಹೇಳನಕಾರಿ ಫೋಸ್ಟ್.. ಫೇಸ್ಬುಕ್ ಬಳಕೆದಾರನ ವಿರುದ್ಧ ಎಫ್ಐಆರ್
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕಾಗಿ ಪೊಲೀಸರು ಫೇಸ್‌ಬುಕ್ ಬಳಕೆದಾರನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಫೇಸ್‌ಬುಕ್ ಬಳಕೆದಾರನಾಗಿರುವ ಕಪಿಲ್ ಕುಮಾರ್ ಅಲಿಯಾಸ್ ಕಪಿಲ್ ಪರ್ಮಾರ್ ಎಂಬ ಹೆಸರಿನ ಪ್ರೊಫೈಲ್​ನ  ಫೇಸ್ಬುಕ್ ಬಳಕೆದಾರನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 500 ರ ಅಡಿಯಲ್ಲಿ ಮಾನನಷ್ಟ, 505 (1 ಬಿ) ಸಾರ್ವಜನಿಕರಿಗೆ ಪ್ರಚೋದನೆ ನೀಡುವಂತಹ ಉದ್ದೇಶದಿಂದ ಹೇಳಿಕೆ ಪ್ರಕಟಿಸಲು ಮತ್ತು 506 ಕ್ರಿಮಿನಲ್ ಬೆದರಿಕೆಗಾಗಿ ಕಪಿಲ್ ಕುಮಾರ್ ವಿರುದ್ಧ ಕೇಸ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಪೊಲೀಸ್ ಉಪ ಆಯುಕ್ತ (ಡಿಸಿಪಿ) ಅಹಮದಾಬಾದ್ ಸೈಬರ್ ಕ್ರೈಮ್ ಸೆಲ್‌ನ ಸೂಚನೆಯಂತೆ, ಏಪ್ರಿಲ್ 29 ರಂದು ಮಾನಿಟರಿಂಗ್ ಸೆಲ್ ತಂಡವು ಸಾಮಾಜಿಕ ಮಾಧ್ಯಮಗಳಲ್ಲಿನ ಚಟುವಟಿಕೆಗಳ ಬಗ್ಗೆ ನಿಗಾ ಇಟ್ಟಿದ್ದು ಫೇಸ್‌ಬುಕ್ ಬಳಕೆದಾರ ಕಪಿಲ್ ಕುಮಾರ್ ತನ್ನ ಖಾತೆಯಲ್ಲಿ ಅನೇಕ ಪೋಸ್ಟ್‌ಗಳನ್ನು ಮಾಡಿ ಹರಿಬಿಟ್ಟಿದ್ದಾನೆ. ಹಾಗೂ ಸಾರ್ವಜನಿಕರಲ್ಲಿ ಎಚ್ಚರಿಕೆ ಉಂಟುಮಾಡುವ ಸಲುವಾಗಿ ಪ್ರಧಾನಿ ಮೋದಿ, ಗೃಹ ಸಚಿವ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ವಿರುದ್ಧ ಬೆದರಿಕೆ ಹಾಕುವ ಭಾಷೆಯೊಂದಿಗೆ ಅವಹೇಳನಕಾರಿ ಸಂದೇಶವನ್ನು ಫೋಸ್ಟ್ ಮಾಡಿದ್ದಾನೆ”ಎಂದು ಎಫ್‌ಐಆರ್‌ನಲ್ಲಿ ಎಲ್‌ಆರ್‌ಡಿ ಜವಾನ್ ಹರೀಶ್ ಚಂದ್ರ ಸಿಂಗ್ ತಿಳಿಸಿದ್ದಾರೆ.

ಇನ್ನು ಕಪಿಲ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪರಿಚಯಿಸಿದ ವಿವಿಧ ಯೋಜನೆಗಳು ಮತ್ತು ಅವರ ಕಾರ್ಯ ವೈಖರಿಯನ್ನು ಪ್ರಶಂಸಿಸಿದ್ದು ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ಜಿಎಸ್ಟಿ, ನೋಟ್ ಬ್ಯಾನ್ ಮತ್ತು ಕೊವಿಡ್ -19 ಲಾಕ್‌ಡೌನ್ ಬಗ್ಗೆ ಟೀಕಿಸಿದ್ದಾನೆ. ಮತ್ತೊಂದು ಪೋಸ್ಟ್ನಲ್ಲಿ ನಾಲ್ಕು ನಾಯಕರ ವಿರುದ್ಧ “ಅವಹೇಳನಕಾರಿ ಪದಗಳನ್ನು” ಬರೆದುಕೊಂಡಿದ್ದಾನೆ. ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಹಮದಾಬಾದ್ ಸೈಬರ್ ಕ್ರೈಮ್ ಸೆಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Amit Shah Interview: ಪ್ರಚಂಡ ಬಹುಮತದಿಂದ ಸೋಲುವ ಮಮತಾ ದೀದಿ ಮೇ 2ಕ್ಕೆ ರಾಜೀನಾಮೆ ಕೊಡ್ತಾರೆ; ಅಮಿತ್ ಶಾ