ಎನ್ ಸಿ ಪಿ  ಯುವ ಮುಖಂಡೊಬ್ಬನನ್ನು ರೇಪಿಸ್ಟ್ ಅಂದ ಮಹಾರಾಷ್ಟ್ರ ಬಿಜೆಪಿ ಧುರೀಣೆ ಚಿತ್ರಾ ವಾಘ್ ವಿರುದ್ಧ ಪ್ರಕರಣ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 03, 2021 | 10:41 PM

ಶೇಖ್ ಅವರ ದೂರಿನ ಆಧಾರದ ಮೇಲೆ ಶಿರೂರ್ ತಹಸೀಲ್ ಪೊಲೀಸ್ ಭಾರತೀಯ ದಂಡ ಸಂಹಿತೆ ಸೆಕ್ಷನ್ 500 ರ ಅಡಿಯಲ್ಲಿ ಚಿತ್ರಾ ಅವರ ವಿರುದ್ಧ ನಾನ್-ಕಗ್ನೈಸೇಬಲ್ ಪ್ರಕರಣವೊಂದನ್ನು ಸೋಮವಾರ ದಾಖಲಿಸಿಕೊಂಡಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

ಎನ್ ಸಿ ಪಿ  ಯುವ ಮುಖಂಡೊಬ್ಬನನ್ನು ರೇಪಿಸ್ಟ್ ಅಂದ ಮಹಾರಾಷ್ಟ್ರ ಬಿಜೆಪಿ ಧುರೀಣೆ ಚಿತ್ರಾ ವಾಘ್ ವಿರುದ್ಧ ಪ್ರಕರಣ
ಚಿತ್ರಾ ವಾಘ್
Follow us on

ಬೀಡ್​: ಅಧಿಕೃತ ಮೂಲಗಳ ಪ್ರಕಾರ, ಮಹಾರಾಷ್ಟ್ರ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷೆ ಚಿತ್ರಾ ವಾಘ್ ಅವರ ವಿರುದ್ಧ ಮಹಾರಾಷ್ಟ್ರ ಪೊಲೀಸ್ ನಾನ್-ಕಗ್ನೈಸೇಬಲ್ ಪ್ರಕರಣವೊಂದನ್ನು ದಾಖಲಿಸಿಕೊಂಡಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ರಾಜ್ಯ ಯುವ ಘಟಕದ ಆಧ್ಯಕ್ಷ ಮೆಹಬೂಬ್ ಶೇಖ್ ಅವರ ವಿರುದ್ಧ ಅವಹೇಳನಕಾರಿ ಆರೋಪ ಮಾಡಿರುವ ಅರೋಪದಲ್ಲಿ ಚಿತ್ರಾ ಅವರ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ.

ಬೀಡ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶೇಖ್ ಅವರು ಕಳೆದ ತಿಂಗಳು ಚಿತ್ರಾ ತಮ್ಮ ಕಾರ್ಯಕರ್ತರೊಂದಿಗೆ ಶಿರೂರ್ ತಹಸೀಲ್ ಕಚೇರಿಗೆ ಬಂದಾಗ ಅವರು, ತಾನು ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದೇನೆ ಆದರೂ ಪೊಲೀಸರು ತನ್ನನ್ನು ಬಂಧಿಸಿಲ್ಲ ಎಂದು ಆರೋಪಿಸಿದರು, ಅಂತ ಹೇಳಿದ್ದಾರೆ.

ಅವರು ಆರೋಪ ಮಾಡಿದ ನಂತರ ಪೊಲೀಸರು ತನಿಖೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ ಎಂದು ಹೇಳಿರುವ ಶೇಖ್ ಅವರು, ತಮ್ಮನ್ನು ಅವಮಾನಿಸುವ ಮತ್ತು ಚಾರಿತ್ರ್ಯವಧೆ ನಡೆಸುವ ಉದ್ದೇಶದಿಂದ ಚಿತ್ರಾ ಆರೋಪ ಮಾಡಿದ್ದಾರೆ ಎಂದಿದ್ದಾರೆ.

ಶೇಖ್ ಅವರ ದೂರಿನ ಆಧಾರದ ಮೇಲೆ ಶಿರೂರ್ ತಹಸೀಲ್ ಪೊಲೀಸ್ ಭಾರತೀಯ ದಂಡ ಸಂಹಿತೆ ಸೆಕ್ಷನ್ 500 ರ ಅಡಿಯಲ್ಲಿ ಚಿತ್ರಾ ಅವರ ವಿರುದ್ಧ ನಾನ್-ಕಗ್ನೈಸೇಬಲ್ ಪ್ರಕರಣವೊಂದನ್ನು ಸೋಮವಾರ ದಾಖಲಿಸಿಕೊಂಡಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

ತಮ್ಮ ವಿರುದ್ಧ ಪ್ರಕರಣ ದಾಖಲಾದ ನಂತರ ಟ್ವೀಟ್ ಮಾಡಿರುವ ಚಿತ್ರಾ ಅವರು, ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯ ಮತ್ತು ಅಪರಾಧಗಳ ಬಗ್ಗೆ ಮಾತಾಡಿರುವುದಕ್ಕೆ ಪ್ರಕರಣ ದಾಖಲಾಗಿದ್ದೇಯಾದರೆ, ಅಂಥ 100 ಪ್ರಕರಣಗಳನ್ನು ಎದುರಿಸಲು ನಾನು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಹೊರಟಿದ್ದ ಮುಖ್ಯಮಂತ್ರಿಯನ್ನು ತಡೆಯಲು ಪ್ರಯತ್ನಿಸಿದ ಬಿಜೆಪಿ ಕಾರ್ಯಕರ್ತರು; ಮಹಾರಾಷ್ಟ್ರದಲ್ಲಿ ಸಂಘರ್ಷ