‘ದಲಿತ ಬಾಲಕಿಯೂ ದೇಶದ ಮಗಳು’: ದೆಹಲಿಯಲ್ಲಿ 9ರ ಹರೆಯದ ಬಾಲಕಿಯ ಅತ್ಯಾಚಾರ ಪ್ರಕರಣ ಬಗ್ಗೆ ಜನಾಕ್ರೋಶ

‘ದಲಿತ ಬಾಲಕಿಯೂ ದೇಶದ ಮಗಳು’: ದೆಹಲಿಯಲ್ಲಿ 9ರ ಹರೆಯದ ಬಾಲಕಿಯ ಅತ್ಯಾಚಾರ ಪ್ರಕರಣ ಬಗ್ಗೆ ಜನಾಕ್ರೋಶ
ದೆಹಲಿಯಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳನ್ನು ಬಂಧಿಸಲು ಒತ್ತಾಯಿಸುತ್ತಿರುವ ಭೀಮ್ ಆರ್ಮಿ

ಸಂತ್ರಸ್ತೆಯ ಗ್ರಾಮವಾದ ಕಂಟೋನ್ಮೆಂಟ್‌ನ ಹಳೆಯ ನಂಗಲ್ ಗ್ರಾಮದ ಜನರು  ಭಾನುವಾರ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರವೆಸಗಿ ರಾತ್ರೋರಾತ್ರಿ ಶವ ದಹನ ಮಾಡಿದ ಈ ಪ್ರಕರಣವನ್ನು ಸೆಪ್ಟೆಂಬರ್ 2020ರಲ್ಲಿ ಉತ್ತರ ಪ್ರದೇಶದ ಹಾಥರಸ್ ಪ್ರಕರಣದೊಂದಿಗೆ ಹೋಲಿಸಲಾಗುತ್ತಿದೆ.

TV9kannada Web Team

| Edited By: Rashmi Kallakatta

Aug 03, 2021 | 11:56 PM

ದೆಹಲಿ: ದೆಹಲಿ ಕಂಟೋನ್ಮೆಂಟ್‌ನಲ್ಲಿ ಒಂಬತ್ತು ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಪ್ರಕರಣದ ಬಗ್ಗೆ ಸ್ಥಳೀಯರು ಹಾಗೂ ರಾಜಕೀಯ ಮುಖಂಡರು ತೀವ್ರ ನೋವು ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಬಗ್ಗೆ ತ್ವರಿತ ಕ್ರಮ ಮತ್ತು ನ್ಯಾಯಕ್ಕಾಗಿ ಹಲವು ಕಡೆಗಳಿಂದ ಬೇಡಿಕೆಗಳು ಬಂದಿವೆ. ಸಂತ್ರಸ್ತೆಯ ಗ್ರಾಮವಾದ ಕಂಟೋನ್ಮೆಂಟ್‌ನ ಹಳೆಯ ನಂಗಲ್ ಗ್ರಾಮದ ಜನರು  ಭಾನುವಾರ ರಾತ್ರಿಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರವೆಸಗಿ ರಾತ್ರೋರಾತ್ರಿ ಶವ ದಹನ ಮಾಡಿದ ಈ ಪ್ರಕರಣವನ್ನು ಸೆಪ್ಟೆಂಬರ್ 2020ರಲ್ಲಿ ಉತ್ತರ ಪ್ರದೇಶದ ಹಾಥರಸ್ ಪ್ರಕರಣದೊಂದಿಗೆ ಹೋಲಿಸಲಾಗುತ್ತಿದೆ.

ಭಾನುವಾರ ಸ್ಮಶಾನದಲ್ಲಿ ಅತ್ಯಾಚಾರ ಮತ್ತು ಕೊಲೆ ನಡೆದಿದೆ ಎಂದು ಹೇಳಲಾದ ಸ್ಮಶಾನದ ಅರ್ಚಕ ರಾಧೇ ಶ್ಯಾಮ್ ಶವವನ್ನು ಸುಡಲು ಸಂತ್ರಸ್ತೆಯ ಕುಟುಂಬವನ್ನು ಒತ್ತಾಯಿಸಿದರು. ನಾನು ಮತ್ತು ನನ್ನ ಕುಟುಂಬ ಬೆಂಕಿ ನಂದಿಸುವ ಹೊತ್ತಿಗೆ ಬಾಲಕಿಯ ಪಾದ ಮಾತ್ರ ಉಳಿದಿತ್ತು ಎಂದು ಸಂತ್ರಸ್ತೆಯ ಅಮ್ಮ ಪೊಲೀಸರಿಗೆ ಹೇಳಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.

ಕೂಲರ್​​ನಿಂದ  ನೀರು ತರಲು ಮಗು ಅಲ್ಲಿಗೆ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಹಳ ಸಮಯದ ನಂತರವೂ ಅವಳು ಹಿಂತಿರುಗಿ ಬಾರದೇ ಇದ್ದಾಗ ಬಾಲಕಿಯ ಕುಟುಂಬಕ್ಕೆ ದೂರವಾಣಿ ಕರೆ ಬಂದಿದ್ದು ವಿದ್ಯುತ್ ಪ್ರವಹಿಸಿ ಬಾಲಕಿಯ ಸಾವಿಗೀಡಾಗಿದ್ದಾಳೆ ಎಂದು ಹೇಳಲಾಗಿದೆ.

ತಕ್ಷಣವೇ ಬಾಲಕಿಯ ಅಪ್ಪ ಸ್ಥಳೀಯರನ್ನು ಒಟ್ಟು ಸೇರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಮಶಾನದ ಅರ್ಚಕ ಸೇರಿದಂತೆ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ದಲಿತರ ಮಗಳೂ ದೇಶದ ಮಗಳೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ಸುದ್ದಿಯ ಸ್ಕ್ರೀನ್ ಶಾಟ್ ಕೂಡಾ ಲಗತ್ತಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂಬತ್ತು ವರ್ಷದ ಸಂತ್ರಸ್ತೆಗ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡುವ ಭರವಸೆ ನೀಡಿದರು. ದೆಹಲಿಯಲ್ಲಿ 9 ವರ್ಷದ ಮಗುವನ್ನು ಅತ್ಯಾಚಾರ ನಡೆಸಿದ ಕೊಲೆ ಮಾಡಿರುವು ಅತ್ಯಂತ ನಾಚಿಕೆಗೇಡಿನ ಸಂಗತಿ. ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಅಪರಾಧಿ ಆದಷ್ಟು ಬೇಗ ಮರಣದಂಡನೆ ಶಿಕ್ಷೆಯನ್ನು ಪಡೆಯಬೇಕು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. “ನಾನು ನಾಳೆ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡುತ್ತೇನೆ. ನ್ಯಾಯಕ್ಕಾಗಿ ಅವರ ಹೋರಾಟದಲ್ಲಿ ನಾವು ಅವರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತೇವೆ ಎಂದಿದ್ದಾರೆ ಕೇಜ್ರಿವಾಲ್.

ದಲಿತ ನಾಯಕ ಮತ್ತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್, ನಂಗಲ್ ಗ್ರಾಮದಲ್ಲಿ ಪ್ರತಿಭಟನಾಕಾರರ ನಡುವೆ ತಮ್ಮ ತಂಡವು ಈಗಾಗಲೇ ಇತ್ತು ಎಂದು ಹೇಳಿದರು. ಅವರು ಮಂಗಳಾವರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದರು.

ಇದು ನನ್ನ ಸ್ವಂತ ಕುಟುಂಬ. ಅವಳು ನನ್ನ ಸಹೋದರಿ “ಎಂದು ಆಜಾದ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. “ಪ್ರಧಾನಿಯಿಂದ ಹಿಡಿದು ಗೃಹ ಮಂತ್ರಿಯವರೆಗೆ ಪ್ರತಿಯೊಬ್ಬರೂ ಇಲ್ಲಿ ವಾಸಿಸುತ್ತಿದ್ದಾರೆ, ಮಹಿಳೆಯರಿಗೆ ಯಾವುದೇ ಸುರಕ್ಷತೆಯ ಪ್ರಜ್ಞೆ ಇಲ್ಲ. ಮುಖ್ಯಮಂತ್ರಿಯವರು ಸಂತ್ರಸ್ತೆಯ ಪೋಷಕರನ್ನು ಏಕೆ ಇನ್ನೂ ಭೇಟಿ ಮಾಡಿಲ್ಲ? ಎಂದು ಆಜಾದ್ ಪ್ರಶ್ನಿಸಿದ್ದರು.

ಹತ್ರಾಸ್  ಪ್ರಕರಣ ದೆಹಲಿಯಲ್ಲಿ ಪುನರಾವರ್ತನೆಯಾಯಿತು. ದಲಿತ ಬಾಲಕಿಯೊಬ್ಬಳು ಸ್ಮಶಾನದಲ್ಲಿ ಅತ್ಯಾಚಾರಕ್ಕೊಳಗಾದಳು ಮತ್ತು ಕುಟುಂಬದ ಒಪ್ಪಿಗೆಯಿಲ್ಲದೆ ಅರ್ಚಕ ಆಕೆಯ ಅಂತ್ಯಸಂಸ್ಕಾರ ಮಾಡಿದ ಎಂದು ಆರೋಪಿಸಲಾಗಿದೆ .ಪೊಲೀಸರು ಎಂದಿನಂತೆ ಎಲ್ಲ ರೀತಿಯ ಗೊಂದಲಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಮತ್ತೊಮ್ಮೆ ಇಂತಹ ಭಯಾನಕ ಅಪರಾಧಗಳಿಗೆ ಮೂಕ ಪ್ರೇಕ್ಷಕರಾಗಲಿದ್ದೇವೆಯೇ? ಎಂದು ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಮನ್ವಯಕಾರ ಬೆಜವಾಡ ವಿಲ್ಸನ್ ಟ್ವೀಟ್ ಮಾಡಿದ್ದಾರೆ.

ದೆಹಲಿ ಮಹಿಳಾ ಆಯೋಗವು ಈ ಘಟನೆಯನ್ನು “ಗಂಭೀರ” ಮತ್ತು “ತುರ್ತು ಗಮನ” ಎಂದು ಕರೆದಿದ್ದು, ತನಿಖೆ ನಡೆಸಲು ಒಂದು ಸಮಿತಿಯನ್ನು ಸ್ಥಾಪಿಸಿದೆ. ನೈಋತ್ಯ ಜಿಲ್ಲೆಯ ಉಪ ಪೊಲೀಸ್ ಆಯುಕ್ತರನ್ನು ಕರೆದು, ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಈ ಪ್ರಕರಣದ “ಸಂಪೂರ್ಣ ಕೇಸ್ ಫೈಲ್”, ಎಫ್ಐಆರ್ ಪ್ರತಿಗಳು ಮತ್ತು ವಿವಿಧ ಹೇಳಿಕೆಗಳು ಮತ್ತು ಇತರ ವಿವರಗಳನ್ನು ಕೋರಿದ್ದಾರೆ.

ಇದನ್ನೂ ಓದಿ: ತಣ್ಣೀರು ತರಲು ಚಿತಾಗಾರಕ್ಕೆ ಹೋದ 7 ವರ್ಷದ ಬಾಲಕಿ; ಮುಂದಾಗಿದ್ದೆಲ್ಲ ಊಹಿಸಲಾರದಷ್ಟು ಭೀಕರ

(Alleged rape and murder of a nine-year-old Dalit girl in Delhi Cantonment Grief Rage in social media)

Follow us on

Related Stories

Most Read Stories

Click on your DTH Provider to Add TV9 Kannada