ಪಶ್ಚಿಮ ಬಂಗಾಳದಲ್ಲಿ ಭೀಕರ ಪ್ರವಾಹಕ್ಕೆ 15 ಮಂದಿ ಸಾವು; ಮಧ್ಯಪ್ರದೇಶದಲ್ಲಿ ನೀರಿಗೆ ಹೆದರಿ ಮರಹತ್ತಿ ಕುಳಿತ ಜನರು

ಮಧ್ಯಪ್ರದೇಶದಲ್ಲೂ ವಿಪರೀತ ಮಳೆಯಾಗುತ್ತಿದೆ. ಗ್ವಾಲಿಯರ್​-ಚಂಬಲ್​ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸುಮಾರು 1171 ಗ್ರಾಮಗಳು ಅಪಾಯದಲ್ಲಿವೆ. ಅದರಲ್ಲೂ ಶಿಯೋಪುರ್​ ಮತ್ತು ಶಿವಪುರಿ ಜಿಲ್ಲೆಗಳಲ್ಲಿ ಮಳೆ-ಪ್ರವಾಹ ಜಾಸ್ತಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಭೀಕರ ಪ್ರವಾಹಕ್ಕೆ 15 ಮಂದಿ ಸಾವು; ಮಧ್ಯಪ್ರದೇಶದಲ್ಲಿ ನೀರಿಗೆ ಹೆದರಿ ಮರಹತ್ತಿ ಕುಳಿತ ಜನರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Aug 04, 2021 | 9:38 AM

ಪಶ್ಚಿಮ ಬಂಗಾಳದಲ್ಲಿ ಭೀಕರ ಪ್ರವಾಹ (West Bengal Floods)ಕ್ಕೆ ಜನರು ತತ್ತರಿಸುತ್ತಿದ್ದಾರೆ. ಇದುವರೆಗೆ ಸುಮಾರು 15 ಮಂದಿ ಮೃತಪಟ್ಟಿದ್ದು, ಲಕ್ಷಕ್ಕೂ ಹೆಚ್ಚು ಜನರ ಮನೆಗಳು ಹಾನಿಗೊಳಗಾಗಿವೆ. ಪಶ್ಚಿಮ ಬಂಗಾಳ(West Bengal) ದಲ್ಲಿ ದಾಮೋದರ ಕಣಿವೆ ಮಂಡಳಿ (DVC) ಒಳಗೊಂಡಿರುವ ನಾಲ್ಕು ಅಣೆಕಟ್ಟು(Dams)ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ, ಪುರ್ಬ ವರ್ಧಮಾನ್, ಪಶ್ಚಿಮ ಬರ್ಧಮಾನ್, ಪಶ್ಚಿಮ ಮೇದಿನಿಪುರ, ಹೂಗ್ಲಿ, ಹೌರಾ ಮತ್ತು ದಕ್ಷಿಣ 24 ಪರಗಣಗಳೆಲ್ಲ ಸಂಪೂರ್ಣವಾಗಿ ಜಲಾವೃತಗೊಂಡಿವೆ. ಇಲ್ಲಿಯವರೆಗೆ ಸುಮಾರು ಮೂರು ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ರಕ್ಷಣಾ ಕಾರ್ಯಗಳು (Rescue Operations) ಭರದಿಂದ ಸಾಗುತ್ತಿವೆ.

ಹಾಗೇ, ಮಧ್ಯಪ್ರದೇಶದಲ್ಲೂ ವಿಪರೀತ ಮಳೆಯಾಗುತ್ತಿದೆ. ಗ್ವಾಲಿಯರ್​-ಚಂಬಲ್​ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸುಮಾರು 1171 ಗ್ರಾಮಗಳು ಅಪಾಯದಲ್ಲಿವೆ. ಅದರಲ್ಲೂ ಶಿಯೋಪುರ್​ ಮತ್ತು ಶಿವಪುರಿ ಜಿಲ್ಲೆಗಳಲ್ಲಿ ಮಳೆ-ಪ್ರವಾಹ ಜಾಸ್ತಿಯಾಗಿದ್ದು, ಅಲ್ಲಿಂದ ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್​ ತಂಡಗಳು 1600 ಜನರನ್ನು ರಕ್ಷಿಸಿವೆ. ಇನ್ನು ಮಧ್ಯಪ್ರದೇಶದ ಶಿವಪುರಿ, ಶಿಯೋಪುರ್​, ಗ್ವಾಲಿಯರ್​, ದಟಿಯಾ ಜಿಲ್ಲೆಗಳಲ್ಲಿ ಜನರ ರಕ್ಷಣೆಗಾಗಿ ಭಾರತೀಯ ಸೇನೆಯನ್ನು ಕರೆಸಲಾಗಿದೆ ಎಂದು ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್​ ರಾಜೋರಾ ತಿಳಿಸಿದ್ದಾರೆ. ಕೆಟ್ಟ ವಾತಾವರಣದ ಮಧ್ಯೆಯೂ ಆರ್ಮಿ ಹೆಲಿಕಾಪ್ಟರ್​ಗಳು ಜನರನ್ನು, ಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಣೆ ಮಾಡುತ್ತಿವೆ ಎಂದು ಹೇಳಿದ್ದಾರೆ.

24ಗಂಟೆ ಮರದ ಮೇಲೆ ಕುಳಿತಿದ್ದರು ಪ್ರವಾಹ ತುಂಬ ಭೀಕರವಾಗಿದೆ. ಶಿವಪುರಿ ಜಿಲ್ಲೆಯ ಬೀಚಿ ಗ್ರಾಮದಲ್ಲಿ ಮೂರು ಜನ ಮತ್ತು ಪಿಪ್ರೌಧಾ ಗ್ರಾಮದ ಐದು ಜನ ಮರ ಹತ್ತಿ ಕುಳಿತು 24 ಗಂಟೆ ಅಲ್ಲಿಯೇ ಇದ್ದರು. ನಂತರ ಅವರನ್ನು ರಕ್ಷಿಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಶಿವಪುರಿ ಮತ್ತು ಶಿಯೋಪುರ್​ನಲ್ಲಿ 24ಗಂಟೆಯಲ್ಲಿ 800 ಎಂಎಂ ಮಳೆಯಾಗಿದ್ದು, ಇದು ಊಹೆಗೂ ಮೀರಿ ಬಿದ್ದ ಮಳೆಯಾಗಿದೆ. ಹಾಗಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ ಸಿಂಗ್​ ಚೌಹಾಣ್​ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶ, ಉತ್ತರಾಖಂಡ್​ನಲ್ಲಿ ಭೂಕುಸಿತ ಇನ್ನೊಂದೆಡೆ ಹಿಮಾಚಲಯ ಪ್ರದೇಶದಲ್ಲಿ ವಿಪರೀತ ಮಳೆಯಿಂದ ಭೂಕುಸಿತ ಉಂಟಾಗುತ್ತಿದೆ. ಸೋಲಾನ್​ ಜಿಲ್ಲೆಯಲ್ಲಿ ಭೂಮಿ ಕುಸಿದು ಉತ್ತರಪ್ರದೇಶ ಮೂಲದ 22 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ. ಉತ್ತರಾಖಂಡ್​​ನಲ್ಲಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಕುಸಿದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಇದನ್ನೂ ಓದಿ: Narahalli Award 2021 : ಉಡುಪಿಯ ಜಿ.ಎನ್. ಉಪಾಧ್ಯ ಅವರಿಗೆ ನರಹಳ್ಳಿ ಪ್ರಶಸ್ತಿ

15 dead in West Bengal floods Heavy Rain In Madhya Pradesh

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?