ಕೊಲ್ಕತ್ತಾ ನವೆಂಬರ್ 13: ಲೋಕಸಭೆಯಲ್ಲಿ ಮಹುವಾ ಮೊಯಿತ್ರಾ (Mahua Moitra) ಪ್ರತಿನಿಧಿಸುವ ಕ್ಷೇತ್ರವಾದ ಕೃಷ್ಣನಗರದ (Krishnanagar) ಜಿಲ್ಲಾಧ್ಯಕ್ಷರಾಗಿ ಆಕೆಯನ್ನು ತೃಣಮೂಲ ಕಾಂಗ್ರೆಸ್ (TMC) ಸೋಮವಾರ ನೇಮಕ ಮಾಡಿದೆ. ಮೊಯಿತ್ರಾ ಅವರ ಹೊಸ ಜವಾಬ್ದಾರಿ ಲೋಕಸಭೆಯ ನೈತಿಕ ಸಮಿತಿಯು ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಅವರನ್ನು ಉಚ್ಚಾಟಿಸುವಂತೆ ಶಿಫಾರಸು ಮಾಡುವ ವರದಿಯನ್ನು ಅಂಗೀಕರಿಸಿದ ಸಮಯದಲ್ಲಿ ಬಂದಿದೆ.
“ನನ್ನನ್ನು ಕೃಷ್ಣನಗರದ (ನಾಡಿಯಾ ಉತ್ತರ) ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಮತ್ತು ಪಕ್ಷಕ್ಕೆ ಧನ್ಯವಾದಗಳು . ಕೃಷ್ಣನಗರದ ಜನರಿಗಾಗಿ ಪಕ್ಷದೊಂದಿಗೆ ಯಾವಾಗಲೂ ಕೆಲಸ ಮಾಡುತ್ತೇನೆ ಎಂದು ಮೊಯಿತ್ರಾ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಡಿಸೆಂಬರ್ 4ರಂದು ಚಳಿಗಾಲದ ಅಧಿವೇಶನದ ಮೊದಲ ದಿನವೇ ನೈತಿಕ ಸಮಿತಿ ವರದಿ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ವಿಷಯ ತಿಳಿದ ಅಧಿಕಾರಿಗಳ ಪ್ರಕಾರ, ಮೊಯಿತ್ರಾ ಅವರನ್ನು ಉಚ್ಚಾಟಿಸಲು ಸರ್ಕಾರ ಅದೇ ದಿನ ಸದನದಲ್ಲಿ ಪ್ರಸ್ತಾವನೆ ಸಲ್ಲಿಸಲಿದೆ.
Thank you @MamataOfficial and @AITCofficial for appointing me District President of Krishnanagar (Nadia North) .
Will always work with the party for the people of Krishnanagar.— Mahua Moitra (@MahuaMoitra) November 13, 2023
ಆರೋಪಗಳನ್ನು ಆಧಾರ ರಹಿತ ಎಂದು ಹೇಳಿರುವ ಮೊಯಿತ್ರಾ, ಪಿಟಿಐಗೆ ನೀಡಿದ ಸಂದರ್ಶನದಲ್ಲಿ ನೈತಿಕ ಸಮಿತಿಯ ವರದಿಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಸಮೂಹದ ನಂಟು ಇದೆ ಎಂದು ಆರೋಪಿಸಿದ್ದಾರೆ.
500 ಪುಟಗಳ ವರದಿಯಲ್ಲಿ, ನಗದು ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಏಕೆಂದರೆ ಅದು ಯಾವುದೂ ಇಲ್ಲವೇ ಇಲ್ಲ. ವಿಚಾರಣೆ ಬಗ್ಗೆ ಏನೂ ಇಲ್ಲ. ಮೋದಿ-ಅದಾನಿ ನಂಟು ಸರ್ಕಾರ ನಡೆಸುತ್ತಿದ್ದು, ಇದರಿಂದ ಹೇಗೆ ಪ್ರಶ್ನಿಸಬಾರದು ಎಂಬುದೇ ಸಮಸ್ಯೆ. ಅವರು ಗಾಬರಿಯಾಗಿದ್ದಾರೆ. ಅದಾನಿ ಕಲ್ಲಿದ್ದಲು ಹಗರಣ ಮಾಡಿದ್ದಾರೆ. ಯಾವುದೇ ದೇಶದಲ್ಲಿ, ಇದು ಸರ್ಕಾರವನ್ನು ಬೀಳಿಸುತ್ತಿತ್ತು. ಇದು ಮೋದಿಯವರಿಗೆ ಗೊತ್ತು. ಆದ್ದರಿಂದ ಅವರು ಇದನ್ನು ಸಾಧ್ಯವಾದಷ್ಟು ಕಾಲ ಮರೆಮಾಡಲು ಹತಾಶರಾಗಿದ್ದಾರೆ ಎಂದು ಮೊಯಿತ್ರಾ ಹೇಳಿದರು.
ಇದನ್ನೂ ಓದಿ: ಮಹುವಾ ಮೊಯಿತ್ರಾ ಉಚ್ಚಾಟನೆಯನ್ನು ಶಿಫಾರಸು ಮಾಡುವ ವರದಿ ಬೆಂಬಲಿಸಿದ್ದು 6 ಸಂಸದರು, ಚರ್ಚೆ ನಡೆದಿಲ್ಲ
ಇದನ್ನು ಪ್ರಶ್ನಿಸುತ್ತಿರುವ ಕೆಲವೇ ಜನರಲ್ಲಿ ನಾವೂ ಒಬ್ಬರು. ಅವರೆಲ್ಲರ ಬಾಯಿ ಮುಚ್ಚಿಸುವುದು, ಜೈಲಿಗೆ ಹಾಕುವುದು, ಏನು ಬೇಕಾದರೂ ಮಾಡಿ, ರಾಮಮಂದಿರ ಬರುವ ಜನವರಿ 22ರ ವರೆಗೆ ಎಲ್ಲವನ್ನೂ ಸುಮ್ಮನಿರುವಂತೆ ಮಾಡುವುದು ಮತ್ತು ಬಿಜೆಪಿ ಮತ್ತೆ ಅಧಿಕ್ಕೇರುವಂತೆ ಮಾಡುವುದೇ ಅವರ ಉದ್ದೇಶ. ಇದು ಆ ಯೋಜನೆಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Mon, 13 November 23