ರಾಜಸ್ಥಾನ ಚುನಾವಣೆ 2023: ನಾಲ್ಕು ಸ್ಥಾನಗಳಲ್ಲಿ ಕುಟುಂಬದ ಸದಸ್ಯರ ನಡುವೆಯೇ ಪೈಪೋಟಿ

2018 ರ ವಿಧಾನಸಭಾ ಚುನಾವಣೆಯಲ್ಲಿ, ಮಾಜಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾರಾಯಣ್ ಸಿಂಗ್ ಅವರ ಪುತ್ರ ಚೌಧರಿ ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಧಿಯನ್ನು ಕೇವಲ 920 ಮತಗಳಿಂದ ಸೋಲಿಸಿದ್ದರು. ಮಹಿಳಾ ಸಬಲೀಕರಣ ಮತ್ತು ಕುಡಿಯುವ ನೀರಿನಂತಹ ವಿಷಯಗಳ ಮೇಲೆ ಅವರ ಗಮನವಿದೆ ಎಂದು ಅವರ ಪತ್ನಿ ರೀಟಾ ಪಿಟಿಐಗೆ ತಿಳಿಸಿದ್ದಾರೆ

ರಾಜಸ್ಥಾನ ಚುನಾವಣೆ 2023: ನಾಲ್ಕು ಸ್ಥಾನಗಳಲ್ಲಿ ಕುಟುಂಬದ ಸದಸ್ಯರ ನಡುವೆಯೇ ಪೈಪೋಟಿ
ರಾಜಸ್ಥಾನ ಚುನಾವಣೆ
Follow us
ರಶ್ಮಿ ಕಲ್ಲಕಟ್ಟ
|

Updated on: Nov 13, 2023 | 9:54 PM

ಜೈಪುರ ನವೆಂಬರ್ 13: ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯು (Rajasthan assembly election) ನಾಲ್ಕು ಸ್ಥಾನಗಳಲ್ಲಿ ಕುತೂಹಲಕಾರಿ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಈ ಕ್ಷೇತ್ರಗಳಲ್ಲಿ ಕುಟುಂಬದ ಸದಸ್ಯರೇ ಪರಸ್ಪರ ಸ್ಪರ್ಧಿಸುತ್ತಿದ್ದಾರೆ. ಹರ್ಯಾಣ ಮೂಲದ ಜನನಾಯಕ್ ಜನತಾ ಪಕ್ಷದ ಅಭ್ಯರ್ಥಿ ರೀಟಾ ಚೌಧರಿ (Rita Chaudhary)ಅವರು ಸಿಕರ್‌ನ ದಂತಾ ರಾಮಗಢದಿಂದ ಸ್ಪರ್ಧಿಸುತ್ತಿದ್ದಾರೆ. ಆಡಳಿತ ಪಕ್ಷದಿಂದ ಮತ್ತೊಮ್ಮೆ ಕಣಕ್ಕಿಳಿದಿರುವ ಹಾಲಿ ಕಾಂಗ್ರೆಸ್ (Congress) ಶಾಸಕ ವೀರೇಂದ್ರ ಚೌಧರಿ ವಿರುದ್ಧ ಅವರು ಕಣಕ್ಕಿಳಿದಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ, ಮಾಜಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾರಾಯಣ್ ಸಿಂಗ್ ಅವರ ಪುತ್ರ ಚೌಧರಿ ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಧಿಯನ್ನು ಕೇವಲ 920 ಮತಗಳಿಂದ ಸೋಲಿಸಿದ್ದರು. ಮಹಿಳಾ ಸಬಲೀಕರಣ ಮತ್ತು ಕುಡಿಯುವ ನೀರಿನಂತಹ ವಿಷಯಗಳ ಮೇಲೆ ಅವರ ಗಮನವಿದೆ ಎಂದು ಅವರ ಪತ್ನಿ ರೀಟಾ ಪಿಟಿಐಗೆ ತಿಳಿಸಿದ್ದಾರೆ. ಆಕೆಯ ಕುಟುಂಬವು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದೆ. ಆಗಸ್ಟ್‌ನಲ್ಲಿ, ರೀಟಾ ಚೌಧರಿ ದುಷ್ಯಂತ್ ಚೌಟಾಲಾ ಅವರ ಜೆಜೆಪಿಗೆ ಸೇರ್ಪಡೆಗೊಂಡರು ಮತ್ತು ಅದರ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು.

2018ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆ ಹೊಂದಿದ್ದ ಅವರು, ಪಕ್ಷ ತನ್ನ ಪತಿಯನ್ನು ಆಯ್ಕೆ ಮಾಡಿದ ಬಳಿಕ ಆಕೆಯ ನಿರೀಕ್ಷೆ ಹುಸಿಯಾಯಿತು. ಅಂದಿನಿಂದ, ರೀಟಾ ಚೌಧರಿ ತಮ್ಮದೇ ಆದ ನೆಲೆಯನ್ನು ಬಲಪಡಿಸಲು ಪ್ರಾರಂಭಿಸಿದರು “ನಾನು ಜನರ ನಡುವೆ ಸಕ್ರಿಯವಾಗಿರುವುದರಿಂದ, ಚುನಾವಣೆಯಲ್ಲಿ ನಾನು ಈ ಸ್ಥಾನವನ್ನು ಗೆಲ್ಲುತ್ತೇನೆ” ಎಂದು ಚೌಧರಿ ಹೇಳಿದ್ದಾರೆ.

ಧೋಲ್‌ಪುರ ವಿಧಾನಸಭಾ ಕ್ಷೇತ್ರವು ಒಂದೇ ಕುಟುಂಬದ ಇಬ್ಬರು ಸದಸ್ಯರ ನಡುವೆ ಕುತೂಹಲಕಾರಿ ಸ್ಪರ್ಧೆಗೆ ಸಾಕ್ಷಿಯಾಗಿದೆ ಆದರೆ ಟ್ವಿಸ್ಟ್ ಇದೆ. ಸ್ಪರ್ಧಿಸಿದ್ದ ಇಬ್ಬರೂ ಅಭ್ಯರ್ಥಿಗಳು ಈಗ ಪಕ್ಷ ಬದಲಾಯಿಸಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಶೋಭಾರಾಣಿ ಕುಶ್ವಾ ಅವರು ತಮ್ಮ ಸೋದರ ಮಾವ ಶಿವಚರಣ್ ಕುಶ್ವಾ ಅವರನ್ನು ಸೋಲಿಸುವ ಮೂಲಕ ಸ್ಥಾನವನ್ನು ಗೆದ್ದಿದ್ದಾರೆ. ಹಿಂದಿನ ವರ್ಷ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣ ಬಿಜೆಪಿಯಿಂದ ಉಚ್ಛಾಟಿಸಲಾಗಿತ್ತು.

ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು ಮತ್ತು ಅದೇ ಸ್ಥಾನದಲ್ಲಿ ಕಣಕ್ಕಿಳಿದಿದ್ದಾರೆ. ಆಕೆಯ ಸೋದರ ಮಾವ ಶಿವಚರಣ್ ಕುಶ್ವಾ ಬಿಜೆಪಿ ಅಭ್ಯರ್ಥಿ.

“ಸಂಬಂಧಗಳು ಮತ್ತು ರಾಜಕೀಯ ಸ್ಪರ್ಧೆಗಳು ಸಂಪೂರ್ಣವಾಗಿ ವಿಭಿನ್ನ ಅಂಶಗಳಾಗಿವೆ ಮತ್ತು ಅವುಗಳು ತಮ್ಮದೇ ಆದ ಸ್ಥಾನವನ್ನು ಹೊಂದಿವೆ. ಆದ್ದರಿಂದ, ಚುನಾವಣಾ ಕದನದಲ್ಲಿ, ನಾವು ನಮ್ಮ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ‘ಸಾಲಿ'(ನಾದಿನಿ) ಮತ್ತು ‘ಜಿಜಾ'(ಭಾವ) ಅಲ್ಲ ಎಂದು ಅವರು ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ: 4 ವರ್ಷದ ಬಾಲಕಿ ಮೇಲೆ ಸಬ್​ ಇನ್​ಸ್ಪೆಕ್ಟರ್ ಅತ್ಯಾಚಾರ; ರಾಜಸ್ಥಾನದಲ್ಲಿ ಅಮಾನವೀಯ ಘಟನೆ

ನಾಗೌರ್ ಕ್ಷೇತ್ರದಲ್ಲಿ ಮಾಜಿ ಕಾಂಗ್ರೆಸ್ ಸಂಸದೆ ಜ್ಯೋತಿ ಮಿರ್ಧಾ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿರುವ ಅವರ ಚಿಕ್ಕಪ್ಪ ಹರೇಂದ್ರ ಮಿರ್ಧಾ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಈ ಸ್ಥಾನದಲ್ಲಿ ಬಿಜೆಪಿಯ ಮೋಹನ್ ರಾಮ್ ಚೌಧರಿ ಅವರು 2018 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಬೀಬುರ್ ರೆಹಮಾನ್ ಲಂಬಾ ಅವರನ್ನು 13,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.

ಜುಂಜುನ ಖೇತ್ರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಧರಂಪಾಲ್ ಗುರ್ಜರ್ ಸ್ಪರ್ಧಿಸಿದ್ದಾರೆ. ಅವರ ಸಹೋದರ ದಾತಾರಾಮ್ ಗುರ್ಜರ್ ಅವರ ಪುತ್ರಿ ಮನಿಶಾ ಗುರ್ಜರ್ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಬಂಡಾಯವೆದ್ದು ಕಾಂಗ್ರೆಸ್ ಸೇರಿದರು. ಈಗ ಅವರು ತಮ್ಮ ಚಿಕ್ಕಪ್ಪನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ನವೆಂಬರ್ 25 ರ ಚುನಾವಣೆಯಲ್ಲಿ 1875 ಅಭ್ಯರ್ಥಿಗಳು ಕಣದಲ್ಲಿದ್ದಾರೆ – 183 ಮಹಿಳೆಯರು ಮತ್ತು 1,692 ಪುರುಷರು. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್