Castrol Super Mechanic Contest: ಅದ್ಭುತ ಸಾಧಿಸೋ ಪ್ರತಿಭಾವಂತ ಮೆಕ್ಯಾನಿಕ್ ನೀವೇ? ಜಗತ್ತಿಗೆ ನಿಮ್ಮ ಕೌಶಲ ಪರಿಚಯಿಸಲು ಇಲ್ಲಿದೆ ಅವಕಾಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 14, 2021 | 9:25 PM

ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ ಮೆಕ್ಯಾನಿಕ್​​ಗಳು ಕುಶಲತೆ ಹೆಚ್ಚಿಸಿಕೊಳ್ಳಲು, ಪ್ರತಿಭೆಯನ್ನು ಸಾದರಪಡಿಸಲು, ರಾಷ್ಟ್ರಮಟ್ಟದ ಮಾನ್ಯತೆ ಗಳಿಸಲು ಸಮಗ್ರ ವೇದಿಕೆಯನ್ನು ಕಲ್ಪಿಸುತ್ತದೆ.

Castrol Super Mechanic Contest: ಅದ್ಭುತ ಸಾಧಿಸೋ ಪ್ರತಿಭಾವಂತ ಮೆಕ್ಯಾನಿಕ್ ನೀವೇ? ಜಗತ್ತಿಗೆ ನಿಮ್ಮ ಕೌಶಲ ಪರಿಚಯಿಸಲು ಇಲ್ಲಿದೆ ಅವಕಾಶ
ಕ್ಯಾಸ್ಟ್ರೋಲ್ ಸೂಪರ್ ಮೆಕಾನಿಕ್ ಕಾಂಟೆಸ್ಟ್​ಗೆ ಚಾಲನೆ ಸಿಕ್ಕಿದೆ
Follow us on

ಈ ವರ್ಷದ ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ ಆವೃತ್ತಿಯನ್ನು ಟಿವಿ9 ನೆಟ್​ವರ್ಕ್​​ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಕ್ಯಾಸ್ಟ್ರೋಲ್ ಇಂಡಿಯಾ ಕಂಪನಿಯು ಮುಂಬೈನಲ್ಲಿ ಇದೇ ಅಕ್ಟೋಬರ್​ 14ರಂದು ಕಲಿಕಾ ಕಾರ್ಯಕ್ರಮಗಳು ಮತ್ತು ಲೈವ್​ ಮಾಸ್ಟರ್ ಕ್ಲಾಸ್​ಗಳನ್ನು ಆಯೋಜಿಸಿದ್ದು, ಭಾರತದ ಉದ್ದಗಲಕ್ಕೂ ಇರುವ 1,00,000 ಮೆಕ್ಯಾನಿಕ್​ಗಳು ಈ ಆವೃತ್ತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕ್ಯಾಸ್ಟ್ರೋಲ್ ಇಂಡಿಯಾ ಭಾರತದ ಮುಂಚೂಣಿ ಲ್ರ್ಯೂಬ್ರಿಕೆಂಟ್ ಕಂಪನಿಯಾಗಿದ್ದು, ದೇಶದ ಅತಿದೊಡ್ಡ ಮತ್ತು ಬಹುನಿರೀಕ್ಷಿತ ಮೆಕ್ಯಾನಿಕ್​ ಕುಶಲ ಕಾರ್ಯಕ್ರಮದ ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ (Castrol Super Mechanic Contest -SMC) ನಾಲ್ಕನೆಯ ಆವೃತ್ತಿಯನ್ನು ಪ್ರಾರಂಭಿಸಿದೆ.

2017ರಲ್ಲಿ ಪ್ರಾರಂಭಿಸಲಾದ ಅತ್ಯಂತ ಫಲಪ್ರದವಾದ ಈ ಕಾರ್ಯಕ್ರಮವು ಭಾರತದ ಕಾರ್​ ಮತ್ತು ಬೈಕ್​​ ಮೆಕ್ಯಾನಿಕ್​​ಗಳು ತಮ್ಮ ಕುಶಲತೆಯನ್ನು ಹೆಚ್ಚಿಸಿಕೊಳ್ಳಲು, ತಮ್ಮ ಪ್ರತಿಭೆಯನ್ನು ಸಾದರಪಡಿಸಲು, ರಾಷ್ಟ್ರಮಟ್ಟದ ಮಾನ್ಯತೆ ಗಳಿಸಲು ಸಮಗ್ರ ವೇದಿಕೆಯನ್ನು ಕಲ್ಪಿಸುತ್ತದೆ.

ಕಲಿಯೋಣ, ಗೆಲ್ಲೋಣ, ಮುಂದೆ ಸಾಗೋಣ! ಎಂಬುದು ಈ ವರ್ಷದ ಸ್ಪರ್ಧೆಯ ಆಶಯವಾಗಿದೆ (#SeekhengeJeetengeBadhenge). ಇದು ಮೆಕ್ಯಾನಿಕ್​​ಗಳ ಉತ್ಸಾಹ ಮತ್ತು ಚೈತನ್ಯವನ್ನು ಗೌರವಿಸುವ ಸ್ಪರ್ಧಾ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಭಾರತವನ್ನು ಮುನ್ನಡೆಸುವುದರ ಜೊತೆಗೆ ವಾಹನೋದ್ಯಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅವರು ತಮ್ಮ ಕೌಶಲವನ್ನು ವೃದ್ಧಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಮೆಕ್ಯಾನಿಕ್​​ಗಳು ದೇಶಾದ್ಯಂತ ಇತರೆ ಮೆಕ್ಯಾನಿಕ್​​ಗಳ ಜೊತೆಗೆ ತಮ್ಮ ಕುಶಲತೆಯನ್ನು ಪರೀಕ್ಷೆಗೆ ಒಡ್ಡಬಹುದು, ಅಂತಿಮವಾಗಿ 2021 ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ (Castrol Super Mechanic -SMC 2021) ಆಗಿ ಸ್ಪರ್ಧೆಯಲ್ಲಿ ಜಯಶೀಲರಾಗಬಹುದು.

ಈಗ ದೇಶವನ್ನು ಕೊರೊನಾ ಪಿಡುಗು ಕಾಡುತ್ತಿದೆ. ಇದರ ನಡುವೆಯೂ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ 2021 ಕಾರ್ಯಕ್ರಮವು ಭೌತಿಕವಾಗಿ ಮತ್ತು ಡಿಜಿಟಲ್​ ಮಾಧ್ಯಮಗಳ ಮೂಲಕ ಭಾರತದ ಉದ್ದಗಲಕ್ಕೂ ವಾಸಿಸುವ ಮೆಕ್ಯಾನಿಕ್ ಸಮುದಾಯವನ್ನು ತಲುಪಬಹುದಾಗಿದೆ. ಈ ಎರಡೂ ಮಾಧ್ಯಮಗಳ ಮೂಲಕ ಮೆಕ್ಯಾನಿಕ್​​ಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಲಭಿಸುತ್ತದೆ. ತನ್ಮೂಲಕ ಸ್ಪರ್ಧಾ ಕಾರ್ಯಕ್ರಮದಲ್ಲಿ 100,000 ಮೆಕ್ಯಾನಿಕ್​​ಗಳು ಒಗ್ಗೂಡಲಿದ್ದಾರೆ.

ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ 2021 ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಲು ಇಂಟರಾಕ್ಟೀವ್ ವಾಯ್ಸ್​ ರೆಸ್ಪಾನ್ಸ್​​ (Interactive Voice Response -IVR) ಮೂಲಕ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ವಿಶೇಷವಾಗಿ ಇದಕ್ಕೆಂದೇ ವಿಶೇಷ ವೆಬ್​ ಪೋರ್ಟಲ್ ರೂಪಿಸಲಾಗಿದೆ. ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ, ಬೆಂಗಾಲಿ, ತೆಲುಗು, ಗುಜರಾತಿ, ಮರಾಠಿ, ಮಲಯಾಳಂ ಮತ್ತು ತಮಿಳು ವೆಬ್​ಸೈಟ್​​ಗಳು ಟಿವಿ9 ನೆಟ್​ವರ್ಕ್​​ ಜೊತೆ ಕಾರ್ಯನಿರ್ವಹಿಸಲಿವೆ. ಈ ವೆಬ್​ಸೈಟ್​​ಗಳ ಮೂಲಕ ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ 2021 ಸ್ಪರ್ಧೆಗೆ ಪ್ರೋತ್ಸಾಹ ನೀಡಲಿವೆ. ಖ್ಯಾತ ಜಿಇಸಿ ನಟ ರವಿ ದುಬೆ ಕಾರ್ಯಕ್ರಮವನ್ನು ಹೋಸ್ಟ್​ ಮಾಡಲಿದ್ದಾರೆ. ನಟ ರವಿ ದುಬೆ ಅವರು ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ 2017ರಲ್ಲಿ ಪ್ರಾರಂಭವಾದಾಗಿನಿಂದ ಅದರ ಮುಖವಾಗಿ ಹೊರಹೊಮ್ಮಿದ್ದಾರೆ.

ಈ ವರ್ಷದ ಕಾಂಟೆಸ್ಟ್​​ನಲ್ಲಿ ಹೊಸ ಮತ್ತು ಅತ್ಯಾಕರ್ಷಕ ಡಿಜಿಟಲ್​ ಸಾಧನಗಳು ಪ್ರಮುಖ ಭೂಮಿಕೆ ನಿಭಾಯಿಸಲಿವೆ. ಮೆಕ್ಯಾನಿಕ್​ಗಳು ಸ್ಪರ್ಧೆಯ ನಾನಾ ಹಂತಗಳಲ್ಲಿ ಹೆಚ್ಚು ಸಕ್ರಿಯವಾಗಿ ಮತ್ತು ವ್ಯಕ್ತಿಗತವಾಗಿ ಪಾಲ್ಗೊಳ್ಳಲು ಇವುಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುವುದು. ಡಿಜಿಟಲ್ ವೇದಿಕೆಗಳಲ್ಲಿ ಪ್ರತಿ ದಿನವೂ ಕಂಟೆಟ್​ ಸೃಷ್ಟಿಯಾಗಲಿದೆ. ಸ್ಪರ್ಧೆಯ ಬಗೆಗಿನ ತಾಜಾ ಮಾಹಿತಿ, ಮುಂದುವರಿದ ಹಂತಗಳಲ್ಲಿ ವಿಜಯ ಸಾಧಿಸುವುದರ ಬಗ್ಗೆ ಸುಳಿವು, ಫಾಸ್ಟೆಸ್ಟ್​ ಫಿಂಗರ್​ ಫಸ್ಟ್​ ಸ್ಪರ್ಧೆಯನ್ನು ಕರಗತಗೊಳಿಸಿಕೊಳ್ಳುವುದು, ಸಂಭಾವ್ಯ ಪುರಸ್ಕಾರಗಳು ಮತ್ತು ಜಯಶಾಲಿಗಳ ಗುರುತಿಸುವಿಕೆ ಇದರ ಪ್ರಮುಖ ಭಾಗವಾಗಲಿದೆ.

ಇದರ ಜೊತೆಗೆ SMC 2021 ಸ್ಪರ್ಧೆಯಲ್ಲಿ ಮೊಬೈಲ್​ ಗೇಮ್​ ಲಭ್ಯವಿದ್ದು, ಇದರಿಂದ ​ಮೆಕ್ಯಾನಿಕ್​ಗಳು ಸ್ಪರ್ಧೆಯಲ್ಲಿ ಎದುರಾಗುವ ನಾನಾ ಪರೀಕ್ಷೆಗಳು ಮತ್ತು ಸವಾಲುಗಳನ್ನು ಸುಲಲಿತವಾಗಿ ಸಿದ್ಧಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಹೊರಗಿನಿಂದ ಬಂದ ಪರಿಣತರು ಮತ್ತು ಹಿಂದಿನ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್​ಗಳಲ್ಲಿ ಗೆದ್ದವರು ಸಹ ಅನೇಕ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು ಸ್ಪರ್ಧಿಗಳಿಗೆ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೆರವಾಗಲಿದ್ದಾರೆ.

ಕ್ಯಾಸ್ಟ್ರೋಲ್ ಇಂಡಿಯಾ ಕಂಪನಿಯು 2021ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮೆಕ್ಯಾನಿಕ್​​ಗಳನ್ನು ತರಬೇತುಗೊಳಿಸಲಿದೆ. ಕ್ಯಾಸ್ಟ್ರೋಲ್ ಕಂಪನಿಯು ಭಾರತದ ಆಟೋಮೋಟೀವ್​ ಸ್ಕಿಲ್ಸ್​ ಡೆವಲಪ್​ಮೆಂಟ್​​ ಕೌನ್ಸಿಲ್​ (ASDC) ಜೊತೆಗೆ ಸಹಯೋಗ ಹೊಂದಿದ್ದು ಸ್ಪರ್ಧೆಯಲ್ಲಿ ಆಯ್ದ ಮೆಕ್ಯಾನಿಕ್​​ಗಳಿಗೆ ಅದರ ಮಾಸ್ಟರ್​ ಕ್ಲಾಸ್​​ಗಳ ಮೂಲಕ ಪ್ರಮಾಣೀಕೃತ ಪರಿಣಿತಿ ನೀಡಲು ಉದ್ದೇಶಿಸಿದೆ.

ಈ ಸ್ಪರ್ಧಾ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಕೌಶಲ ಅಭಿವೃದ್ಧಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ಬೆಂಬಲ ಸೂಚಿಸಿದ್ದಾರೆ. ಭಾರತ ಸರ್ಕಾರದ ಸ್ಕಿಲ್​ ಇಂಡಿಯಾ ಕಾರ್ಯಕ್ರಮದ ಜೊತೆಜೊತೆಯಾಗಿ ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಇದರಿಂದ ದೇಶಾದ್ಯಂತ ಇರುವ ಮೆಕ್ಯಾನಿಕ್​ಗಳು ತಮ್ಮ ಪರಿಣತಿ ಮತ್ತು ಪ್ರತಿಭೆಯನ್ನು ವೃದ್ಧಿಸಿಕೊಳ್ಳಲು ನೆರವಾಗಿದೆ. ಸ್ಪರ್ಧೆಯ ನಾಲ್ಕನೆಯ ಆವೃತ್ತಿಯನ್ನು ಯಶಸ್ವಿಯಾಗಿ ಪ್ರಾರಂಭಿಸಿರುವ ಕ್ಯಾಸ್ಟ್ರೋಲ್ ಇಂಡಿಯಾವನ್ನು ಈ ಸಂದರ್ಭದಲ್ಲಿ ನಾನು ಅಭಿನಂದಿಸುತ್ತೇನೆ. ಈ ಸಂದರ್ಭದಲ್ಲಿ ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ ಕಾರ್ಯಕ್ರಮವು ಮೆಕ್ಯಾನಿಕ್​ಗಳ ಪರಿಣತಿಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆ. ತನ್ಮೂಲಕ ನಮ್ಮ ಆತ್ಮನಿರ್ಭರ್​ ಭಾರತ್ ​(Atmanirbhar Bharat) ಉದ್ದೇಶವನ್ನು ಪೂರ್ಣಗೊಳಿಸುವಲ್ಲಿ ನೆರವಾಗಲಿದೆ ಎಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ.

ಸ್ಪರ್ಧೆ ಆರಂಭವಾಗಿರುವುದನ್ನು ಘೋಷಿಸಿರುವ ಕ್ಯಾಸ್ಟ್ರೋಲ್ ಇಂಡಿಯಾ ಲಿಮಿಟೆಡ್​ನ ಪ್ರಧಾನ ನಿರ್ದೇಶಕ ಸಂದೀಪ್ ಸಂಗ್ವಾನ್, ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆಯ 4ನೇ ಆವೃತ್ತಿಯನ್ನು ಉದ್ಘಾಟಿಸಲು ನಮಗೆ ಸಂತೋಷವಾಗುತ್ತಿದೆ. ಮೆಕ್ಯಾನಿಕ್ ಸಮುದಾಯದ ಹಿತವನ್ನೇ ಮುಖ್ಯವಾಗಿಸಿಕೊಂಡ ಸ್ಪರ್ಧೆಯಿದು. ಕಳೆದ ಹಲವು ವರ್ಷಗಳಿಂದ ಈ ಸ್ಪರ್ಧೆಯು ಮೆಕ್ಯಾನಿಕ್ ಸಮುದಾಯಕ್ಕೆ ಅವರ ಪ್ರತಿಭಾ ಪ್ರದರ್ಶನಕ್ಕೆ ಮತ್ತು ಕೌಶಲ ವೃದ್ಧಿಗೆ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿದೆ. ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಮೆಕ್ಯಾನಿಕ್​ಗಳಲ್ಲಿ ಅರಿವು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಸ್ಪರ್ಧೆಯ ಈ ವರ್ಷದ ಆಶಯವಾಗಿ #SeekhengeJeetengeBadhenge (ಕಲಿಯೋಣ, ಗೆಲ್ಲೋಣ, ಬೆಳೆಯೋಣ) ಎಂಬ ಧ್ಯೇಯವಾಕ್ಯ ಇರಿಸಿಕೊಳ್ಳಲಾಗಿದೆ. ಭವಿಷ್ಯದ ಸವಾಲುಗಳು ಎದುರಿಸಲು ಮೆಕ್ಯಾನಿಕ್​ಗಳನ್ನು ಸನ್ನದ್ಧಗೊಳಿಸುವ ಈ ಸ್ಪರ್ಧೆಯು ಎಲ್ಲ ಸ್ಪರ್ಧಾಳುಗಳನ್ನು ಅತ್ಯಗತ್ಯ ಕೌಶಲಗಳಿಂದ ಸಜ್ಜುಗೊಳಿಸಲು ನೆರವಾಗುತ್ತದೆ. ಈ ಮೂಲಕ ಹೊಸ ಸವಾಲುಗಳು, ಬದಲಾವಣೆಗಳಿಗೆ ಅವರು ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು, ಹೊಂದಿಕೊಳ್ಳಬೇಕು ಎಂಬುದನ್ನು ಕೊರೊನಾ ಪಿಡುಗು ಮತ್ತೊಮ್ಮೆ ನೆನಪಿಸಿತು. ಮೆಕ್ಯಾನಿಕ್ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುವುದು, ಅವರಿಗೆ ಉತ್ತಮ ಭವಿಷ್ಯದ ಖಾತ್ರಿ ನೀಡುವುದನ್ನು ನಾವು ನಮ್ಮ ಜವಾಬ್ದಾರಿ ಎಂದುಕೊಂಡಿದ್ದೇವೆ. ಭಾರತದ ಮುನ್ನಡೆಯ ಚಾಲನಾ ಶಕ್ತಿಗಳಲ್ಲಿ ಮೆಕ್ಯಾನಿಕ್ ಸಮುದಾಯವು ಪ್ರಮುಖವಾಗಿದೆ. ಈ ಸ್ಪರ್ಧೆಯು ಅವರಿಗೆ ಯಶಸ್ಸು ಮತ್ತು ಮಾನ್ಯತೆ ತಂದುಕೊಡಲಿದೆ ಎಂದು ಅವರು ಅಶಯ ವ್ಯಕ್ತಪಡಿಸಿದರು.

ಆಟೊಮೋಟಿವ್ ಸ್ಕಿಲ್ಸ್​ ಡೆವಲಪ್​ಮೆಂಟ್​ ಕೌನ್ಸಿಲ್ ಇಂಡಿಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅರಿಂಧಂ ಲಾಹಿರಿ ಮಾತನಾಡಿ, ಮೆಕ್ಯಾನಿಕ್​ಗಳು ಮತ್ತು ಆಟೊಮೊಬೈಲ್ ವೃತ್ತಿಪರರು ಕೌಶಲವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಹೊಸ ಕಾಲದ ಜ್ಞಾನವನ್ನು ಹಸ್ತಾಂತರಿಸಲು ಇಂಥ ಕಾರ್ಯಕ್ರಮಗಳು ಮೆಕ್ಯಾನಿಕ್​ ಸಮುದಾಯಕ್ಕೆ ನೆರವಾಗುತ್ತದೆ. ಈ ವಿಚಾರದಲ್ಲಿ ಕ್ಯಾಸ್ಟ್ರೋಲ್ ಇಂಡಿಯಾ ಕಂಪನಿಯೊಂದಿಗೆ ಸಹಯೋಗ ಘೋಷಿಸಲು ಸಂತಸವಾಗುತ್ತಿದೆ. ವಾಹನಗಳ ನಿರ್ವಹಣೆಗಾಗಿ ರೂಪುಗೊಂಡಿರುವ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಈ ವೇದಿಕೆಯು ಮೆಕ್ಯಾನಿಕ್ ಸಮುದಾಯಕ್ಕೆ ನೆರವಾಗುತ್ತದೆ. ನಮ್ಮ ಸಂಸ್ಥೆಯು ಸಮಗ್ರ ಮತ್ತು ಯೋಜಿತ ರೀತಿಯಲ್ಲಿ ಮಾಹಿತಿ ಒದಗಿಸುತ್ತದೆ. ಸುಸ್ಥಿರ ಬದುಕಿಗೆ ಪೂರಕವಾಗುವ ಹಲವು ಸರ್ಟಿಫೈಡ್ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದೆ ಎಂದು ಹೇಳಿದರು.

ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆಗೆ ಟಿವಿ9 ಸಮೂಹದ ಎಲ್ಲ ಚಾನೆಲ್​ಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಪ್ರಚಾರ ನೀಡಲಾಗುತ್ತದೆ. ಕ್ಯಾಸ್ಟ್ರೋಲ್ ಜೊತೆಗಿನ ಸಹಯೋಗದ ಕುರಿತು ಮಾತನಾಡಿದ ಟಿವಿ9 ನೆಟ್​ವರ್ಕ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರುಣ್ ದಾಸ್, ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್​ಗೆ ಸಹವರ್ತಿಯಾಗಲು ನಮಗೆ ಸಂತಸವಿದೆ. ಬೈಕ್ ಮತ್ತು ಕಾರ್ ಮೆಕ್ಯಾನಿಕ್​ಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನವಿದು. ದೇಶದ ಆರ್ಥಿಕತೆಯ ಗಾಲಿಗಳನ್ನು ಸದಾ ಮುಂದೆ ಚಲಿಸುವಂತೆ ಮಾಡುವ ಮೆಕ್ಯಾನಿಕ್​ಗಳ ಬದುಕು ಸುಧಾರಿಸುವ ಈ ವಿಶಿಷ್ಟ ಪ್ರಯತ್ನದ ಭಾಗವಾಗಿರುವುದು ನಮಗೆ ಸಂತಸ ತಂದಿದೆ. ಜನರ ಯೋಗಕ್ಷೇಮ ಮತ್ತು ಪ್ರಗತಿಯ ಬಗ್ಗೆ ಟಿವಿ9 ಸಮೂಹಕ್ಕೆ ಇರುವ ಬದ್ಧತೆಯನ್ನು ಇದು ಒತ್ತಿಹೇಳುತ್ತದೆ. ಭಾರತದ ಮೂಲೆಮೂಲೆಯಲ್ಲಿರುವ ಮೆಕ್ಯಾನಿಕ್​ಗಳನ್ನು ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಕಾಂಟೆಸ್ಟ್ ಸದೃಢಗೊಳಿಸುತ್ತದೆ, ಮಾತ್ರವಲ್ಲ ಹೊಸ ಅವಕಾಶಗಳನ್ನು ತೆರೆದಿಡುತ್ತದೆ ಎಂದರು.

ಈ ಸ್ಪರ್ಧೆಯು ಸ್ಪರ್ಧಾಳುಗಳು ವಿವಿಧ ಹಂತಗಳಲ್ಲಿ ಸಾಧಿಸುವ ಡಿಜಿಟಲ್ ಪ್ರಗತಿಯನ್ನು ಅನುಸರಿಸಿ, ಅವರ ಯಶಸ್ವಿ ಸುತ್ತುಗಳನ್ನು ಅಧರಿಸಿ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಅಂತಿಮ ಸುತ್ತಿನ ಸ್ಪರ್ಧೆಯು ದೆಹಲಿಯಲ್ಲಿ ನಡೆಯಲಿದೆ. ಗೌರವಾನ್ವಿತ ಗಣ್ಯರ ಸಮ್ಮುಖದಲ್ಲಿ ವಿಜೇತರನ್ನು ಗೌರವಿಸಲಾಗುವುದು. ಸ್ಪರ್ಧೆಗಳು ಮತ್ತು ಅಂತಿಮ ಪೈಪೋಟಿಯನ್ನು ಟೆಲಿವಿಷನ್ ಮತ್ತು ಆನ್​ಲೈನ್ ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಕವರ್​ ಮಾಡುತ್ತವೆ. ಆ ಮೂಲಕ ರಾಷ್ಟ್ರೀಯ ಮಟ್ಟದ ಟೆಲಿವಿಷನ್​ಗಳಲ್ಲಿ ಕಾಣಿಸಿಕೊಳ್ಳುವ ಜೀವಿತಾವಧಿಯ ಅವಕಾಶ ಹಲವು ಮೆಕ್ಯಾನಿಕ್​ಗಳ ಪಾಲಿಗೆ ದೊರೆಯಲಿದೆ.

ಕ್ಯಾಸ್ಟ್ರಾಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆ 2019ರ ವಿಜೇತರೂ ಆಗಿರುವ ಸೂಪರ್ ಮೆಕ್ಯಾನಿಕ್ ಹರ್​ದೇವ್​ ಸಿಂಗ್ ಜಡೇಜಾ ತಮ್ಮ ಅನುಭವ ಹಂಚಿಕೊಳ್ಳುತ್ತಾ, ‘ಈ ವರ್ಷ ಸೂಪರ್ ಮೆಕ್ಯಾನಿಕ್ ಸ್ಪರ್ಧೆ ಮರಳಿ ಬಂದಿರುವುದಕ್ಕೆ ನನಗೂ ತುಂಬಾ ಸಂತೋಷವಾಗಿದೆ. ನನ್ನ ಕೌಶಲಗಳನ್ನು ಸುಧಾರಿಸಲು ಮತ್ತು ರಾಷ್ಟ್ರೀಯ ಮನ್ನಣೆಯನ್ನು ಪಡೆಯಲು ಉತ್ತೇಜನ ಸಿಗುವ ವೇದಿಕೆಯನ್ನು ಈ ಸ್ಪರ್ಧೆ ಒದಗಿಸಿತು. ಭಾರತದಾದ್ಯಂತ ಇರುವ ನನ್ನ ಎಲ್ಲ ಸಹ ಮೆಕ್ಯಾನಿಕ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ನಾನು ವಿನಂತಿಸುತ್ತೇನೆ. ನನ್ನ ಬದುಕನ್ನು ಬದಲಿಸಿದ ವೇದಿಕೆಯಿದು’ ಎಂದು ಹೇಳಿದರು.

ಹೇಗೆ ಪಾಲ್ಗೊಳ್ಳಬೇಕು?
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಸಕ್ತರು 1800 532 5999 ಸಂಖ್ಯೆಗೆ ಕರೆಮಾಡಿ, ಸೂಚನೆಗಳನ್ನು ಅನುಸರಿಸಿ. ಎಸ್​ಎಂಎಸ್ ಮೂಲಕ ಮತ್ತು www.castrolsupermechaniccontest.in ವೆಬ್​ಸೈಟ್ ಮೂಲಕ ಮೆಕ್ಯಾನಿಕ್​ಗಳಿಗೆ ಸ್ಪರ್ಧೆಯ ಮಾಹಿತಿ ಸಿಗುತ್ತದೆ.

Published On - 9:15 pm, Thu, 14 October 21