AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakhimpur Kheri ಲಖಿಂಪುರ್ ಖೇರಿ ರೈತರ ಹತ್ಯೆ: ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಸಚಿವರ ಮಗನನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸ್

Ashish Mishra ಕೊಲೆಗಳು ನಡೆದಾಗ ತಾನು ಅಪರಾಧ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದು, ನಾನು ಸುಮಾರು ಎರಡು ಕಿಮೀ ದೂರದಲ್ಲಿರುವ ನನ್ನ ತಂದೆಯ ಹಳ್ಳಿಯಲ್ಲಿದ್ದೆ. ದಿನವಿಡೀ ಅಲ್ಲೇ ಇದ್ದೆ ಎಂದು ಆಶಿಶ್ ಮಿಶ್ರಾ ಹೇಳಿಕೆ ನೀಡಿದ್ದಾರೆ.

Lakhimpur Kheri ಲಖಿಂಪುರ್ ಖೇರಿ ರೈತರ ಹತ್ಯೆ: ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಸಚಿವರ ಮಗನನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸ್
ಲಖಿಂಪುರ್ ಖೇರಿ ಘಟನೆ ಮರುಸೃಷ್ಟಿಸುತ್ತಿರುವ ಪೊಲೀಸರು
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 14, 2021 | 8:05 PM

Share

ಲಖಿಂಪುರ್ ಖೇರಿ (ಉತ್ತರ ಪ್ರದೇಶ): ಈ ತಿಂಗಳ ಆರಂಭದಲ್ಲಿ ಲಖಿಂಪುರ್ ಖೇರಿಯಲ್ಲಿ (Lakhimpur Kheri) ನಡೆದ ರೈತ್ಯ ಹತ್ಯೆ ಘಟನೆಗಳನ್ನು “ಮರುಸೃಷ್ಟಿಸಲು” ಉತ್ತರ ಪ್ರದೇಶ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಬೆಂಗಾವಲು ವಾಹನ ಹರಿದಿತ್ತು. ಆ ಪೈಕಿ ಒಂದು ವಾಹನದಲ್ಲಿ ಸಚಿವರ ಪುತ್ರ ಆಶಿಶ್ ಮಿಶ್ರಾಗೆ (Ashish Mishra) ಸೇರಿದ್ದಾಗಿದೆ. ಪೊಲೀಸರು  ರೈತರ ಹತ್ಯೆಯ ಆರೋಪಿ ಆಶಿಶ್​​, ಆತನ ಸ್ನೇಹಿತ ಮತ್ತು ಸಹ ಆರೋಪಿ ಅಂಕಿತ್ ದಾಸ್ ರೊಂದಿಗೆ ಸ್ಥಳಕ್ಕೆ ಕರೆತಂದರು. ಆ ದಿನದ ಘಟನೆಗಳನ್ನು ಮರುಸೃಷ್ಟಿಸಲು ಪೊಲೀಸರ ಕಾರುಗಳನ್ನು ಬಳಸಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಕೊಲೆಗಳು ನಡೆದಾಗ ತಾನು ಅಪರಾಧ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದು, ನಾನು ಸುಮಾರು ಎರಡು ಕಿಮೀ ದೂರದಲ್ಲಿರುವ ನನ್ನ ತಂದೆಯ ಹಳ್ಳಿಯಲ್ಲಿದ್ದೆ. ದಿನವಿಡೀ ಅಲ್ಲೇ ಇದ್ದೆ ಎಂದು ಆಶಿಶ್ ಮಿಶ್ರಾ ಹೇಳಿಕೆ ನೀಡಿದ್ದಾರೆ.

ಮರುಸೃಷ್ಟಿ ಮಾಡುತ್ತಿರುವುದನ್ನು ಪತ್ರಕರ್ತರು ಚಿತ್ರೀಕರಿಸಿದ್ದು, ಈ ದೃಶ್ಯಗಳಲ್ಲಿ ರಸ್ತೆಯಲ್ಲಿ ಪೊಲೀಸ್ ಜೀಪ್ ಅತಿವೇಗದಲ್ಲಿ ಚಲಿಸುತ್ತಿರುವುದನ್ನು ಮತ್ತು ಡುಮ್ಮಿಗಳನ್ನು (ರೈತರನ್ನು ಪ್ರತಿನಿಧೀಕರಿಸುವುದಕ್ಕಾಗಿ) ಪುಡಿ ಮಾಡುತ್ತಿರುವುದು ಕಾಣುತ್ತದೆ. ಇನ್ನೊಂದು ವಿಡಿಯೊದಲ್ಲಿ ಅಪರಾಧದ ದೃಶ್ಯವನ್ನು ಪೊಲೀಸ್ ಟೇಪ್‌ನೊಂದಿಗೆ ಭದ್ರಪಡಿಸಲಾಗಿದೆ ಎಂದು ತೋರಿಸಿದೆ. ಆದರೂ, ಈ ಘಟನೆಯ ನಂತರ ಪೊಲೀಸರು ತಕ್ಷಣವೇ ದೃಶ್ಯವನ್ನು ಏಕೆ ಭದ್ರಪಡಿಸಲಿಲ್ಲ ಮತ್ತು ಮಾಧ್ಯಮಗಳು ಸೇರಿದಂತೆ ಎಲ್ಲರಿಗೂ ಕನಿಷ್ಠ 48 ಗಂಟೆಗಳ ಕಾಲ ಫಿಲ್ಟರ್ ಮಾಡದ ಪ್ರವೇಶವನ್ನು ಏಕೆ ನೀಡಿದರು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಶಿಶ್ ಮಿಶ್ರಾ ಅವರನ್ನು ಕಳೆದ ವಾರ ಬಂಧಿಸಲಾಯಿತು. ಎಫ್ಐಆರ್ (ಮೊದಲ ಮಾಹಿತಿ ವರದಿ) ಯಲ್ಲಿ ಹೆಸರಿಸಲಾಗಿದ್ದರೂ ಸುಮಾರು ಏಳು ದಿನಗಳ ಕಾಲ ಸ್ವತಂತ್ರವಾಗಿ ಇದ್ದ ಅವರಿಗೆ ನಿನ್ನೆ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಪೋಲಿಸ್ ರಿಮಾಂಡ್ ಇಂದಿಗೆ ಕೊನೆಗೊಳ್ಳುತ್ತದೆ ಆದರೆ ಅವರು ಹೆಚ್ಚಿನ ವಿಚಾರಣೆಯನ್ನು ಪಡೆಯುವ ಸಾಧ್ಯತೆಯಿದೆ. ಹಾಗಾಗಿ ಅವರು ಆತನನ್ನು ವಿಚಾರಣೆ ಮಾಡಬಹುದು. ಆಶಿಶ್ ಬಂಧನವು ಲಖಿಂಪುರ್ ಘಟನೆಯನ್ನು ತನಿಖೆ ಮಾಡಲು ರಚಿಸಲಾದ ಪೊಲೀಸ್ ತಂಡದ ಸದಸ್ಯರು 12 ಗಂಟೆಗಳ ವಿಚಾರಣೆಯ ನಂತರ ಮತ್ತು ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ನಡೆದಿದೆ. ಇದು ಆಶಿಶ್ ಮಿಶ್ರಾ ಅವರ ಅಪ್ಪ ಕೇಂದ್ರ ಸಚಿವರಾಗಿರುವುದರಿಂದ ವಿಭಿನ್ನವಾಗಿ ಪರಿಗಣಿಲಸುತ್ತಿದ್ದೀರಾ ಎಂದು ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಪೊಲೀಸರಲ್ಲಿ ಕೇಳಿತ್ತು.

ಆಶಿಶ್ ಮಿಶ್ರಾ ಅವರ ಕುಟುಂಬ ಸಂಪರ್ಕಗಳು ತಮ್ಮ ಮೇಲೆ ಪ್ರಭಾವ ಬೀರಿವೆ ಎಂದು ಪೊಲೀಸರು ಈ ಹಿಂದೆ ನಿರಾಕರಿಸಿದ್ದರು.

ನಿನ್ನೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ, ಈ ವಿಷಯದ ಬಗ್ಗೆ ಸರ್ಕಾರದೊಂದಿಗೆ ಮಾತನಾಡಲು ಒತ್ತಾಯಿಸಿತು. ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಕಿರಿಯ ಗೃಹ ಸಚಿವರಾಗಿ, ರಾಷ್ಟ್ರೀಯ ಪೊಲೀಸ್ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡುವ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಒತ್ತಾಯಿಸಿವೆ.

“ಅವರ ತಂದೆ ಸಚಿವ ಸ್ಥಾನದಲ್ಲಿರುವವರೆಗೂ ನ್ಯಾಯ ಸಿಗುವುದಿಲ್ಲ ಎಂದು ಕುಟುಂಬಗಳು ನಂಬಿವೆ . ಇದು ಉತ್ತರ ಪ್ರದೇಶದ ಜನರ ಮತ್ತು ದೇಶದ ಎಲ್ಲಾ ನೇರ ಚಿಂತನೆ ಜನರ ಬೇಡಿಕೆಯಾಗಿದೆ. ರಾಷ್ಟ್ರಪತಿ ಅವರು ಸರ್ಕಾರವನ್ನು ಸಂಪರ್ಕಿಸುವುದಾಗಿ ಹೇಳಿದ್ದಾರೆ ಎಂದು ನಿಯೋಗದ ಭಾಗವಾಗಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

ಇಬ್ಬರು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಲಖಿಂಪುರ್ ಘಟನೆಯನ್ನು ತನಿಖೆ ಮಾಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಪ್ರಸ್ತುತ ಯುಪಿ ಪೊಲೀಸರಿಂದ ಎಸ್ಐಟಿ ತನಿಖೆ ನಡೆಸುತ್ತಿದೆ. ಏತನ್ಮಧ್ಯೆ, ಸುಪ್ರೀಂ ಕೋರ್ಟ್ ಈ ಮೊದಲು ಸಾವಿನ ಸಿಬಿಐ ತನಿಖೆಯನ್ನು ತಳ್ಳಿಹಾಕಿತು. ಆಶಿಶ್ ಮಿಶ್ರಾ ಮತ್ತು ಆತನ ಅಪ್ಪ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಎನ್‌ಡಿಟಿವಿ ಜತೆ ಮಾತನಾಡಿದ ಮಿಶ್ರಾ ಕಾರು ತನ್ನ ಕುಟುಂಬಕ್ಕೆ ಸೇರಿದ್ದು ಆದರೆ ಆ ಸಮಯದಲ್ಲಿ ಅವರಾಗಲಿ ಅಥವಾ ಅವರ ಮಗನಾಗಲಿ ಇರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Lakhimpur Kheri Violence: ಕೇಂದ್ರ ಸಚಿವರ ಪುತ್ರ ಆಶೀಶ್​ ಮಿಶ್ರಾಗೆ ಜಾಮೀನು ನಿರಾಕರಿಸಿದ ಕೋರ್ಟ್​; ಇನ್ನಿಬ್ಬರ ಬಂಧನ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!