Lakhimpur Kheri Violence: ಕೇಂದ್ರ ಸಚಿವರ ಪುತ್ರ ಆಶೀಶ್​ ಮಿಶ್ರಾಗೆ ಜಾಮೀನು ನಿರಾಕರಿಸಿದ ಕೋರ್ಟ್​; ಇನ್ನಿಬ್ಬರ ಬಂಧನ

ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಎರಡು ವಾಹನಗಳು ಹರಿದು, ಇಬ್ಬರು ರೈತರು ಮೃತಪಟ್ಟಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದ್ದರು.

Lakhimpur Kheri Violence: ಕೇಂದ್ರ ಸಚಿವರ ಪುತ್ರ ಆಶೀಶ್​ ಮಿಶ್ರಾಗೆ ಜಾಮೀನು ನಿರಾಕರಿಸಿದ ಕೋರ್ಟ್​; ಇನ್ನಿಬ್ಬರ ಬಂಧನ
ಆಶೀಶ್​ ಮಿಶ್ರಾ
Follow us
TV9 Web
| Updated By: Lakshmi Hegde

Updated on: Oct 14, 2021 | 1:47 PM

ಲಖಿಂಪುರ ಖೇರಿ: ಇಲ್ಲಿನ ಹಿಂಸಾಚಾರದಲ್ಲಿ (Lakhimpur Kheri violence) ಪ್ರಮುಖ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ (Ashish Mishra)ರಿಗೆ ಜಾಮೀನು ನೀಡಲು ಸೆಷನ್ಸ್​ ಕೋರ್ಟ್​ ನಿರಾಕರಿಸಿದೆ. ಹಾಗೇ, ಅಕ್ಟೋಬರ್​ 3ರ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಂದು ಇನ್ನಿಬ್ಬರನ್ನೂ ಬಂಧಿಸಿದ್ದಾರೆ.  ಘಟನೆಗೆ ಸಂಬಂಧಪಟ್ಟಂತೆ ಬಂಧಿತರಾಗಿರುವ ಆಶೀಶ್​ ಮಿಶ್ರಾ ಮತ್ತು ಅವರ ಸಹಚರರಾರ ಆಶಿಶ್​ ಪಾಂಡೆ  ಅವರ ಅರ್ಜಿ ವಿಚಾರಣೆ ಇಂದು ಇತ್ತು. ಆದರೆ ಸೆಷನ್ಸ್​ ಕೋರ್ಟ್​​​ನ ಮುಖ್ಯ ಮ್ಯಾಜಿಸ್ಟ್ರೇಟ್​ ಚಿಂತಾರಾಮ್​ ಜಾಮೀನು ನಿರಾಕರಿಸಿದ್ದಾರೆ ಎಂದು ಪ್ರಾಸಿಕ್ಯೂಷನ್​ ಹಿರಿಯ ಅಧಿಕಾರಿ ಎಸ್​.ಪಿ.ಯಾದವ್​ ತಿಳಿಸಿದ್ದಾರೆ.  

ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಹರಿದು ರೈತರು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಆಶೀಶ್​ ಮಿಶ್ರಾರನ್ನು ಅಕ್ಟೋಬರ್​9ರಂದು ರಾಜ್ಯದ ವಿಶೇಷ ತನಿಖಾ ತಂಡ (SIT) ಬಂಧಿಸಿದೆ.  ಅದರೊಂದಿಗೆ ಎಸ್​ಐಟಿ ಎದುರು ವಿಚಾರಣೆಗೆ ಹಾಜರಾಗಿದ್ದ ಅಂಕಿತ್ ದಾಸ್​​ ಮತ್ತು ಲತೀಫ್​ ಕಾಳೆ ಎಂಬುವರನ್ನೂ ಬಂಧಿಸಲಾಗಿದ್ದು, ಅವರನ್ನು 14ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.  ಅಲ್ಲಿಗೆ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಆಶೀಶ್​ ಮಿಶ್ರಾ, ಆಶೀಶ್​ ಪಾಂಡೆ, ಲವಕುಶ್​​, ಶೇಖರ್​ ಭಾರ್ತಿ, ಅಂಕಿತ್​ ಮತ್ತು ಲತೀಫ್​ ಕಾಳೆ ಬಂಧಿತರಾಗಿದ್ದು, ಸದ್ಯಕ್ಕಂತೂ ಯಾರಿಗೂ ಜಾಮೀನು ಸಿಕ್ಕಿಲ್ಲ.

ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಎರಡು ವಾಹನಗಳು ಹರಿದು, ಇಬ್ಬರು ರೈತರು ಮೃತಪಟ್ಟಿದ್ದರು. ಅದಾದ ಬಳಿಕ ನಡೆದ ಹಿಂಸಾಚಾರದಲ್ಲಿ ಒಟ್ಟು 8 ಜನರು ಸಾವನ್ನಪ್ಪಿದ್ದರು. ಹೀಗೆ ರೈತರ ಮೇಲೆ ಹರಿದ ವಾಹನದಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ಇದ್ದರು ಎಂದು ಸ್ಥಳದಲ್ಲಿದ್ದ ರೈತರು ಪ್ರತಿಪಾದಿಸಿದ್ದರು. ಆದರೆ ನಾನು ಇರಲಿಲ್ಲ ಎಂದು ಆಶೀಶ್​ ಮಿಶ್ರಾ ಹೇಳಿಕೊಂಡಿದ್ದರು.  ಆಶೀಶ್​ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದರೂ ಅವರ ಬಂಧನ ಆಗಿರಲಿಲ್ಲ. ನಂತರ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಎತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೊಲೆ ಕೇಸ್​ ದಾಖಲಾದ ಆರೋಪಿಗೆ ಸಮನ್ಸ್​ ನೀಡುವ ಅಗತ್ಯವೇನಿದೆ? ಉಳಿದವರಂತೆ ಅವರನ್ನೂ ನಡೆಸಿಕೊಳ್ಳಿ ಎಂದು ಹೇಳಿತ್ತು. ಅದಾದ ಮರುದಿನವೇ ಆಶೀಶ್​ ಮಿಶ್ರಾ ಎಸ್​ಐಟಿ ಎದುರು ಹಾಜರಾಗಿ, ವಿಚಾರಣೆ ಎದುರಿಸಿದ್ದರು. ನಂತರ ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ದಸರಾ ಸಂಭ್ರಮ ಕಿತ್ತುಕೊಂಡ ಮಳೆ; ಅಬ್ಬಯ್ಯ ಲೇಔಟ್‌ನ ಮನೆಗಳಿಗೆ ನುಗ್ಗಿದ ಮಳೆ ನೀರು, ಮುಳುಗಿದ ವಾಹನಗಳು

Nirmala Sitharaman In US: ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕದ ಸಿಇಒಗಳಿಗೆ ನಿರ್ಮಲಾ ಸೀತಾರಾಮನ್ ಆಹ್ವಾನ