ಬಿಜೆಪಿಗೆ ಸೇರಿದ ನಂತರ ಸುಖವಾಗಿ ನಿದ್ರಿಸುತ್ತಿದ್ದೇನೆ, ವಿಚಾರಣೆಗಳೇನೂ ಇಲ್ಲ: ಮಾಜಿ ಕಾಂಗ್ರೆಸ್ ನಾಯಕ
ವಿರೋಧ ಪಕ್ಷಗಳನ್ನು ಗುರಿಯಾಗಿರಿಸಲು ಬಿಜೆಪಿ ಸಿಬಿಐ, ಇಡಿ ಮತ್ತು ಎನ್ಸಿಬಿಯನ್ನು ಬಳಸುತ್ತಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ ಬೆನ್ನಲ್ಲೇ ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಬಿಜೆಪಿಗೆ ಸೇರಿದ ನಂತರ ಸುಖವಾಗಿ ನಿದ್ರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಪುಣೆ: ಬಿಜೆಪಿ ಸೇರಿದ ನಂತರ ಸುಖವಾಗಿ ನಿದ್ರಿಸುತ್ತಿದ್ದೇನೆ, ಯಾವುದೇ ವಿಚಾರಣೆಗಳಿಲ್ಲ ಎಂದು ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ (Harshvardhan Patil) ಹೇಳಿದ್ದಾರೆ. ವಿರೋಧ ಪಕ್ಷಗಳನ್ನು ಗುರಿಯಾಗಿರಿಸಲು ಬಿಜೆಪಿ ಸಿಬಿಐ, ಇಡಿ ಮತ್ತು ಎನ್ಸಿಬಿಯನ್ನು ಬಳಸುತ್ತಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ ಬೆನ್ನಲ್ಲೇ ಪಾಟೀಲ್ ಈ ರೀತಿ ಹೇಳಿದ್ದಾರೆ. ಪುಣೆ ಜಿಲ್ಲೆಯ ಇಂದಾಪುರದ ಮಾಜಿ ಶಾಸಕರಾದ ಪಾಟೀಲ್ ಅವರು 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು.
“ನಾವೂ ಬಿಜೆಪಿಗೆ ಹೋಗಬೇಕಿತ್ತು. ಅವರು (ವಿರೋಧ ಪಕ್ಷದ ಯಾರೋ ವೇದಿಕೆಯಲ್ಲಿ ಅವರ ಪಕ್ಕದಲ್ಲಿ ಕುಳಿತಿದ್ದನ್ನು ಉಲ್ಲೇಖಿಸಿ) ನಾನು ಯಾಕೆ ಬಿಜೆಪಿ ಸೇರಿಕೊಂಡೆ ಎಂದು ಕೇಳಿದರು. ನಾನು ಯಾಕೆ ಬಿಜೆಪಿಗೆ ಹೋದೆ ಎಂದು ಅವರ ನಾಯಕನನ್ನು ಕೇಳಲು ಹೇಳಿದೆ. ಬಿಜೆಪಿಯಲ್ಲಿ ಎಲ್ಲವೂ ಸುಲಭ ಮತ್ತು ಶಾಂತಿಯುತವಾಗಿ ನಡೆಯುತ್ತಿದೆ, ಯಾವುದೇ ವಿಚಾರಣೆಗಳಿಲ್ಲದ ಕಾರಣ ನನಗೆ ಉತ್ತಮ ನಿದ್ರೆ ಬರುತ್ತದೆ ” ಎಂದು ಪಾಟೀಲ್ ಪುಣೆ ಜಿಲ್ಲೆಯ ಮಾವಳದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕ್ಲಾಸ್ ತಪ್ಪಿಸಿಕೊಂಡಿದ್ದಕ್ಕೆ ವಿದ್ಯಾರ್ಥಿಗೆ ಕ್ರೂರವಾಗಿ ಥಳಿಸಿದ ಶಿಕ್ಷಕ; ಅಮಾನವೀಯ ವರ್ತನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ
ಇದನ್ನೂ ಓದಿ: ‘ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ..’-ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಅಮಿತ್ ಶಾ