ಇತಿಹಾಸದ ಪಠ್ಯಪುಸ್ತಕಗಳನ್ನು ಪುನಃ ಬರೆಯಬೇಕು, ವಾಸ್ತವ ಸಂಗತಿಗಳು ಹೈಲೈಟ್ ಆಗಲಿ: ಪರಿಶೀಲನಾ ಸಮಿತಿ ಸದಸ್ಯ

ಇಂದು ಕಲಿಸುತ್ತಿರುವ ಇತಿಹಾಸವು ಹಮ್ ಯಹಾನ್ ಹಾರ್ ಗಯೇ, ಹಮ್ ವಹಾ ಹಾರ್ ಗಯೇ (ನಾವು ಇಲ್ಲಿ ಸೋತಿದ್ದೇವೆ, ನಾವು ಅಲ್ಲಿ ಸೋತಿದ್ದೇವೆ) ಎಂದು ಹೇಳುತ್ತದೆ. ಆದರೆ ನಾವು ಹೋರಾಟಗಳನ್ನು ಚರ್ಚಿಸಬೇಕಾಗಿದೆ, ಯುದ್ಧಗಳ ಸಮಯದಲ್ಲಿ ವಿದೇಶಿ ಆಕ್ರಮಣಕಾರರ ವಿರುದ್ಧದ ಧೀರತೆಯ ಹೋರಾಟಗಳನ್ನು ಹೇಳಬೇಕು. ನಾವು ಅದನ್ನು ಸಾಕಷ್ಟು ಹೈಲೈಟ್ ಮಾಡುತ್ತಿಲ್ಲ

ಇತಿಹಾಸದ ಪಠ್ಯಪುಸ್ತಕಗಳನ್ನು ಪುನಃ ಬರೆಯಬೇಕು, ವಾಸ್ತವ ಸಂಗತಿಗಳು ಹೈಲೈಟ್ ಆಗಲಿ: ಪರಿಶೀಲನಾ ಸಮಿತಿ ಸದಸ್ಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 14, 2021 | 3:20 PM

ದೆಹಲಿ: ಶಾಲೆಗಳಲ್ಲಿ ಈಗಿರುವ ಪಠ್ಯಕ್ರಮವು “ಸೋಲುಗಳ ಬಗ್ಗೆ” ಹೆಚ್ಚು ಹೇಳುತ್ತದೆ ಎಂದ ನ್ಯಾಷನಲ್ ಬುಕ್ ಟ್ರಸ್ಟ್ (National Book Trust ) ಅಧ್ಯಕ್ಷ ಗೋವಿಂದ್ ಪ್ರಸಾದ್ ಶರ್ಮಾ (Govind Prasad Sharma) “ಹೊಸ ಸಂಗತಿಗಳನ್ನು ಉಲ್ಲೇಖಿಸಿ ಇತಿಹಾಸವನ್ನು ಪುನಃ ಬರೆಯಬೇಕು. ಪಠ್ಯಪುಸ್ತಕಗಳು ವಿದೇಶಿ ಆಕ್ರಮಣಕಾರರ ವಿರುದ್ಧ ಯುದ್ಧಗಳಲ್ಲಿ ಮಹಾರಾಣಾ ಪ್ರತಾಪನಂತಹ ಆಡಳಿತಗಾರರ “ಹೋರಾಟದ ಮನೋಭಾವ” ದ ಬಗ್ಗೆ ಮಾತನಾಡಬೇಕು ಎಂದು ಹೇಳಿದ್ದಾರೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಪರಿಷ್ಕರಿಸಲು ಸೆಪ್ಟೆಂಬರ್ 21 ರಂದು ಕೇಂದ್ರವು ಸ್ಥಾಪಿಸಿದ ಕೆ ಕಸ್ತೂರಿರಂಗನ್ ನೇತೃತ್ವದ ಸಮಿತಿಯಲ್ಲಿ ಶರ್ಮಾ ಸದಸ್ಯರಾಗಿದ್ದಾರೆ. ಇದು ಶಾಲಾ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳಿಗೆ ವಿಶಾಲ ಮಾರ್ಗಸೂಚಿಗಳನ್ನು ರೂಪಿಸುತ್ತದೆ. ಮಂಗಳವಾರ 12 ಸದಸ್ಯರ ಸಮಿತಿಯು ಎನ್‌ಸಿಎಫ್ ಅನ್ನು ರಚಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಅದರ ಮೊದಲ ಸಭೆಯನ್ನು ನಡೆಸಲಾಯಿತು. ಇದರಲ್ಲಿ ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಕೂಡ ಭಾಗವಹಿಸಿದ್ದರು. ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ನಿಬಂಧನೆಗಳನ್ನು ಚರ್ಚಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಮಂಗಳವಾರ ಟ್ವೀಟ್ ಮಾಡಿದೆ.

ಬುಧವಾರ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಶರ್ಮಾ, “ಇಂದು ಕಲಿಸುತ್ತಿರುವ ಇತಿಹಾಸವು ಹಮ್ ಯಹಾನ್ ಹಾರ್ ಗಯೇ, ಹಮ್ ವಹಾ ಹಾರ್ ಗಯೇ (ನಾವು ಇಲ್ಲಿ ಸೋತಿದ್ದೇವೆ, ನಾವು ಅಲ್ಲಿ ಸೋತಿದ್ದೇವೆ) ಎಂದು ಹೇಳುತ್ತದೆ. ಆದರೆ ನಾವು ಹೋರಾಟಗಳನ್ನು ಚರ್ಚಿಸಬೇಕಾಗಿದೆ, ಯುದ್ಧಗಳ ಸಮಯದಲ್ಲಿ ವಿದೇಶಿ ಆಕ್ರಮಣಕಾರರ ವಿರುದ್ಧದ ಧೀರತೆಯ ಹೋರಾಟಗಳನ್ನು ಹೇಳಬೇಕು. ನಾವು ಅದನ್ನು ಸಾಕಷ್ಟು ಹೈಲೈಟ್ ಮಾಡುತ್ತಿಲ್ಲ ಎಂದಿದ್ದಾರೆ.

” ಬಲವಾದ ಪ್ರತಿರೋಧವನ್ನು ಒಡ್ಡಿದ್ದರಿಂದ ಮಾತ್ರ ಅನೇಕ ಯುದ್ಧಗಳು ನಡೆದಿವೆ. ಉದಾಹರಣೆಗೆ, (ಮೊಘಲ್ ಚಕ್ರವರ್ತಿ) ಅಕ್ಬರ್ ಮಹಾರಾಣಾ ಪ್ರತಾಪನನ್ನು ಸೋಲಿಸಿದ ಕಥೆಯನ್ನು ರಚಿಸಲಾಗಿದೆ ಆದರೆ ವಾಸ್ತವವೆಂದರೆ ಇಬ್ಬರೂ ಮುಖಾಮುಖಿ ಯುದ್ಧವನ್ನು ಮಾಡಲಿಲ್ಲ. ಹೊಸ ಸಂಗತಿಗಳ ಅರಿವಿನಲ್ಲಿ ಇತಿಹಾಸವನ್ನು ಪುನಃ ಬರೆಯಬೇಕು ಅಥವಾ ಪಠ್ಯಪುಸ್ತಕಗಳಲ್ಲಿ ಹೊಸ ಸಂಗತಿಗಳನ್ನು ಸೇರಿಸಬೇಕು . ಪರಿಷ್ಕೃತ ಪಠ್ಯಕ್ರಮವು ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸಲು ಸಹಾಯ ಮಾಡಬೇಕು ”ಎಂದು ಅವರು ಹೇಳಿದರು.

ದೇಶದಾದ್ಯಂತ ಸಿಬಿಎಸ್‌ಇ-ಅಂಗೀಕೃತ ಶಾಲೆಗಳಲ್ಲಿ ಕಲಿಸಲಾಗುತ್ತಿರುವ ಪ್ರಸ್ತುತ ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿನ ನ್ಯೂನತೆಗಳನ್ನು ಹೇಗೆ ಗುರುತಿಸುತ್ತೀರಿ ಎಂಬ ಪ್ರಶ್ನೆಗೆ ಎನ್​​ಬಿಟಿ ಅಧ್ಯಕ್ಷರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಶರ್ಮಾ ಆರ್‌ಎಸ್‌ಎಸ್ ಶಿಕ್ಷಣ ವಿಭಾಗ ವಿದ್ಯಾ ಭಾರತಿಯ ಮಾಜಿ ಅಧ್ಯಕ್ಷರಾಗಿದ್ದಾರೆ. ಇದು ಭಾರತದಾದ್ಯಂತ ಶಾಲೆಗಳನ್ನು ನಡೆಸುತ್ತಿದೆ. ಶರ್ಮಾ ಈ ಹಿಂದೆ ಮಧ್ಯಪ್ರದೇಶ ಸರ್ಕಾರದ ಪಠ್ಯಪುಸ್ತಕ ಬರೆಯುವ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು.

ಶರ್ಮಾ ಸಮಿತಿಯು ತನ್ನ ಮೊದಲ ಸಭೆಯಲ್ಲಿ ತಂತ್ರಜ್ಞಾನ, ಪರಿಸರ, ಭಾರತದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆ ಮತ್ತು ಸಂಸ್ಕೃತಿಯ ವಿಕಾಸದಂತಹ ಕ್ಷೇತ್ರಗಳನ್ನು ಒಳಗೊಂಡ 25 ಕೇಂದ್ರೀಕೃತ ಕ್ಷೇತ್ರಗಳಲ್ಲಿ ಕೆಲಸ ಮಾಡಲು ನಿರ್ಧರಿಸಿದೆ ಎಂದು ಹೇಳಿದರು. ಪಠ್ಯಕ್ರಮವು ಪ್ರಾಚೀನ ಭಾರತದಲ್ಲಿ ವೈಜ್ಞಾನಿಕ ಸಾಧನೆಗಳನ್ನು ಸಹ ಒಳಗೊಳ್ಳಬೇಕು ಎಂದು ಅವರು ಹೇಳಿದರು.

“ಅಲ್ಲಿ ವೇದ ಗಣಿತವಿರಬೇಕು. ಅಲ್ಲದೆ, ಪ್ರಾಚೀನ ಭಾರತದಲ್ಲಿ ಭೌತಶಾಸ್ತ್ರ ಮತ್ತು ವಿಜ್ಞಾನಕ್ಕೆ ದೇಶದ ಒಟ್ಟಾರೆ ಕೊಡುಗೆ,” ಪಠ್ಯಕ್ರಮವು ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ನಾವು ನ್ಯೂನತೆಗಳ ಮೇಲೆ ಸಮಯ ಕಳೆಯುವ ಬದಲು ಮುಂದೆ ನೋಡುವ ವಿಧಾನವನ್ನು ತೆಗೆದುಕೊಳ್ಳುತ್ತೇವೆ.

ರಾಷ್ಟ್ರೀಯ ಶಿಕ್ಷಣ ನೀತಿ 2020, ಪ್ರಾಚೀನ ಭಾರತೀಯ ಜ್ಞಾನವನ್ನು “ಎಲ್ಲೆಲ್ಲಿ ಸಂಬಂಧಿತವೋ ಅಲ್ಲಿ ಶಾಲೆಯ ಪಠ್ಯಕ್ರಮದಲ್ಲಿ ನಿಖರ ಮತ್ತು ವೈಜ್ಞಾನಿಕ ರೀತಿಯಲ್ಲಿ ಸೇರಿಸಲಾಗುವುದು” ಎಂದು ವಿವರಿಸುತ್ತದೆ. ಯುಪಿಎ ಸರ್ಕಾರದ ಅಡಿಯಲ್ಲಿ 2005 ರಲ್ಲಿ ಎನ್​​ಸಿಎಫ್ ಅನ್ನು ಕೊನೆಯದಾಗಿ ಸಿದ್ಧಪಡಿಸಲಾಯಿತು. ಅದಕ್ಕೂ ಮೊದಲು ಇದನ್ನು 1975, 1988 ಮತ್ತು 2000 ರಲ್ಲಿ ಪರಿಷ್ಕರಿಸಲಾಯಿತು.

ಇಸ್ರೋ ಮಾಜಿ ಮುಖ್ಯಸ್ಥ ಕಸ್ತೂರಿರಂಗನ್ ನೇತೃತ್ವದ ಸಮಿತಿಯಲ್ಲಿ ಶರ್ಮಾ ಜತೆ ಫೀಲ್ಡ್ಸ್ ಮೆಡಲ್ ವಿಜೇತ ಮಂಜುಲ್ ಭಾರ್ಗವ,’ದಿ ಲಾಸ್ಟ್ ರಿವರ್: ಆನ್ ದಿ ಟ್ರಯಲ್ ಆಫ್ ಸರಸ್ವತಿ’ ಲೇಖಕ ಮೈಕೆಲ್ ಡಾನಿನೊ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಉಪಕುಲಪತಿ ನಜ್ಮಾ ಅಖ್ತರ್ ಮತ್ತು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಉಪಕುಲಪತಿ ಟಿ ವಿ ಕಟ್ಟಿಮನಿ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: Navjot Singh Sidhu ಹೈಕಮಾಂಡ್‌ಗೆ ಆಭಾರಿ, ಆದರೆ ರಾಜಿ ಮಾಡಿಕೊಳ್ಳುವುದಿಲ್ಲ: ನವಜೋತ್ ಸಿಂಗ್ ಸಿಧು

ಇದನ್ನೂ ಓದಿ: Manmohan Singh ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿತಿ ಸ್ಥಿರ; ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಮೋದಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್