‘ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ..’-ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಅಮಿತ್ ಶಾ
ಭಾರತ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಇಂದಿಗೂ ಮೈನವಿರೇಳಿಸುವ ಒಂದು ಸಂದರ್ಭ. ಉರಿಯಲ್ಲಿ ಯೋಧರ ಮೇಲೆ ನಡೆದ ಉಗ್ರದಾಳಿಗೆ ಪ್ರತೀಕಾರವಾಗಿ 2016ರ ಸೆಪ್ಟೆಂಬರ್ 29ರಂದು ಭಾರತ ಪಾಕಿಸ್ತಾನದ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು.
ಗೃಹಸಚಿವ ಅಮಿತ್ ಶಾ ಪಾಕಿಸ್ತಾನಕ್ಕೊಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ಗಡಿಯಲ್ಲಿ ಯಾವುದೇ ರೀತಿಯ ಉಪಟಳ, ದಾಳಿಗಳನ್ನೂ ನಾವು ಸಹಿಸುವುದಿಲ್ಲ. ನೀವು ಪದೇಪದೆ ನಿಯಮ ಉಲ್ಲಂಘನೆ ಮಾಡಿದರೆ, ನಾವು ಇನ್ನಷ್ಟು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ’ ಎಂದು ನೆರೆರಾಷ್ಟ್ರಕ್ಕೆ ಕಟುವಾಗಿ ಎಚ್ಚರಿಸಿದ್ದಾರೆ. ಗೋವಾದ ಧರ್‌ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿಕ್ರಮಣ, ನಿಯಮ ಉಲ್ಲಂಘನೆ, ಕಾಶ್ಮೀರದಲ್ಲಿ ನಾಗರಿಕರ ಹತ್ಯೆಯಂಥ ಕೃತ್ಯಗಳು ಮುಂದುವರಿದರೆ ಇನ್ನೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಿಶ್ಚಿತ ಎಂದಿದ್ದಾರೆ.
#WATCH | “Another important step was surgical strike under PM Modi & former Defence Minister Manohar Parrikar. We sent out a message that one should not disrupt India’s borders…There was a time when talks happened, but now is the time to reciprocate,” says Home Min Amit Shah pic.twitter.com/BrMFUfzLRT
— ANI (@ANI) October 14, 2021
ಮನೋಹರ್ ಪರಿಕ್ಕರ್ ಅವರು ರಕ್ಷಣಾ ಮಂತ್ರಿಯಾಗಿದ್ದಾಗ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಒಂದು ಮಹತ್ವದ ಹೆಜ್ಜೆ. ಭಾರತದ ಗಡಿ ಪ್ರದೇಶಕ್ಕೆ ತೊಂದರೆ ನೀಡುವ ಯಾರನ್ನೂ ಬಿಡುವುದಿಲ್ಲ ಎಂದು ಆ ಸರ್ಜಿಕಲ್ ಸ್ಟ್ರೈಕ್ ಮೂಲಕ ಸಂದೇಶ ನೀಡಿದ್ದೇವೆ. ಹಿಂದೆ ಮಾತುಕತೆಗೆ ಸಮಯವಿತ್ತು. ಆದರೆ ಈಗ ಏನಿದ್ದರೂ ತೆಗೆದುಕೊಂಡಿದ್ದನ್ನು ಕೊಡುವುದಷ್ಟೇ ನಮಗೆ ಗೊತ್ತಿದೆ ಎಂದು ಶಾ ಹೇಳಿದ್ದಾರೆ.
ಭಾರತ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಇಂದಿಗೂ ಮೈನವಿರೇಳಿಸುವ ಒಂದು ಸಂದರ್ಭ. ಉರಿಯಲ್ಲಿ ಯೋಧರ ಮೇಲೆ ನಡೆದ ಉಗ್ರದಾಳಿಗೆ ಪ್ರತೀಕಾರವಾಗಿ 2016ರ ಸೆಪ್ಟೆಂಬರ್ 29ರಂದು ಭಾರತ ಪಾಕಿಸ್ತಾನದ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು. ಉರಿಯಲ್ಲಿ ದಾಳಿ ನಡೆಸಿದ್ದು ಜೈಷ್ ಎ ಮೊಹಮ್ಮದ್ ಸಂಘಟನೆ ಎಂಬುದು ಸಾಬೀತಾಗಿತ್ತು. ಇವರ ದಾಳಿಗೆ ಸುಮಾರು 19 ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಸೇನೆ ನಡೆಸಿದ ದಾಳಿಯಲ್ಲಿ 20ಕ್ಕೂ ಹೆಚ್ಚಿನ ಉಗ್ರರು ಮೃತರಾಗಿದ್ದರು. ಅದಾದ ನಂತರ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ, ಸುಮಾರು 40 ಸೈನಿಕರನ್ನು ಹತ್ಯೆ ಮಾಡಿದ್ದ ಉಗ್ರರಿಗೆ ಭಾರತ ಬಾಲಾಕೋಟ್ ಏರ್ಸ್ಟ್ರೈಕ್ ಮೂಲಕ ಪಾಠ ಕಲಿಸಿತ್ತು. ಇದೀಗ ಪಾಕ್ ಅಂಥ ಕೃತ್ಯ ಮುಂದುವರಿಸಿದರೆ ಸರ್ಜಿಕಲ್ ಸ್ಟ್ರೈಕ್ ಮುಂದುವರಿಯುತ್ತದೆ ಎಂದು ಅಮಿತ್ ಶಾ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಅರ್ಚಕನನ್ನು ದೇಗುಲದ ಆವರಣದಲ್ಲೇ ಹತ್ಯೆಗೈದ ದುಷ್ಕರ್ಮಿಗಳು; ಪುತ್ರನೇ ಕಾರಣವಂತೆ ತಂದೆಯ ಕೊಲೆಗೆ !
T20 World Cup: ಭಾರತ ಫೈನಲ್‌ನಲ್ಲಿರುತ್ತದೆ; ಟಿ20 ವಿಶ್ವಕಪ್‌ನಲ್ಲಿ ಕನ್ನಡಿಗ ಮಿಂಚಲಿದ್ದಾರೆ ಎಂದ ಬ್ರೆಟ್ ಲೀ!
Published On - 3:37 pm, Thu, 14 October 21