6ವರ್ಷಕ್ಕಿಂತಲೂ ಹೆಚ್ಚಿನ ಶಿಕ್ಷಾರ್ಹ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆ ಕಡ್ಡಾಯಗೊಳಿಸಲು ಚಿಂತನೆ: ಅಮಿತ್ ಶಾ
ವಿಧಿ ವಿಜ್ಞಾನ ತಂಡಗಳ ಕಾರ್ಯವ್ಯಾಪ್ತಿ ಹೆಚ್ಚಿಸಿ, 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಯೋಗಾಲಯ ನಿರ್ಮಾಣಗೊಂಡರೆ, ಸುಮಾರು 30ರಿಂದ 40 ಸಾವಿರ ವಿಧಿ ವಿಜ್ಞಾನಿಗಳ ಅಗತ್ಯ ಬೀಳುತ್ತದೆ.
ಆರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಶಿಕ್ಷೆಯನ್ನು ಒಳಗೊಂಡಿರುವ ಯಾವುದೇ ವಿಧದ ಅಪರಾಧ ನಡೆದಾಗ, ಅದರ ತನಿಖೆ ಪ್ರಕ್ರಿಯೆ ವಿಧಿವಿಜ್ಞಾನ ತನಿಖೆಯನ್ನು ಒಳಗೊಂಡಿರಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ಇಂದು ಗೋವಾದಲ್ಲಿ ಮಾತನಾಡಿದ ಅವರು, ಆರು ಮತ್ತು ಅದಕ್ಕೂ ಹೆಚ್ಚಿನ ಅವಧಿಯ ಶಿಕ್ಷಾರ್ಹ ಅಪರಾಧಗಳು (ಗಂಭೀರ ಅಪರಾಧಗಳು) ನಡೆದಾಗ, ಆ ಸ್ಥಳಗಳಿಗೆ ವಿಧಿ ವಿಜ್ಞಾನ ತಂಡಗಳು ಕಡ್ಡಾಯವಾಗಿ ಭೇಟಿ ನೀಡಿವೆ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳುವತ್ತ ಗಮನಹರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಯಾವುದೇ ಗಂಭೀರ ಪ್ರಕರಣದ ಸಂದರ್ಭದಲ್ಲಿ ವಿಧಿವಿಜ್ಞಾನ ಸಾಕ್ಷ್ಯವು ಪ್ರಾಸಿಕ್ಯೂಷನ್ನ್ನು ಬಲಪಡಿಸುತ್ತದೆ.ಹಾಗೇ, ಈ ಸಾಕ್ಷ್ಯಗಳು ಆರೋಪಿಯ ಶಿಕ್ಷೆಯ ಪ್ರಮಾಣವನ್ನು ಸರಿಯಾಗಿ ತಿಳಿಸುತ್ತವೆ. ಹೆಚ್ಚಿಸಲೂ ಬಹುದು ಎಂದು ಅಮಿತ್ ಶಾ ಹೇಳಿದರು. ಹೀಗೆ ವಿಧಿ ವಿಜ್ಞಾನ ತಂಡಗಳ ಭೇಟಿ, ತನಿಖೆ ಕಡ್ಡಾಯಗೊಂಡರೆ ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಂದು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿತವಾಗಬೇಕಾಗುತ್ತದೆ. ಚಿಕ್ಕಾದರೂ ಸರಿ, ಮೊಬೈಲ್ ಫೊರೆನ್ಸಿಕ್ ವ್ಯಾನ್ಗಳ ರಚನೆಯಾಗಲೇಬೇಕಾಗುತ್ತದೆ ಎಂದು ತಿಳಿಸಿದರು.
ಹೀಗೆ ವಿಧಿ ವಿಜ್ಞಾನ ತಂಡಗಳ ಕಾರ್ಯವ್ಯಾಪ್ತಿ ಹೆಚ್ಚಿಸಿ, 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಯೋಗಾಲಯ ನಿರ್ಮಾಣಗೊಂಡರೆ, ಸುಮಾರು 30ರಿಂದ 40 ಸಾವಿರ ವಿಧಿ ವಿಜ್ಞಾನಿಗಳ ಅಗತ್ಯ ಬೀಳುತ್ತದೆ. ನಿರುದ್ಯೋಗ ಸಮಸ್ಯೆ ನೀಗುತ್ತದೆ..ಹಾಗೇ ಈ ವಿಭಾಗದಲ್ಲಿ ಕೌಶಲತೆ ಹೆಚ್ಚಿಸಲು ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದ್ದೇವೆ ಎಂದೂ ಅವರು ತಿಳಿಸಿದರು.
ಗೋವಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಅಡಿಗಲ್ಲು ಸ್ಥಾಪನೆ ಮಾಡಲಿರುವ ಅಮಿತ್ ಶಾ, ಗೋವಾದಲ್ಲಿ ಹೀಗೊಂದು ಯೂನಿರ್ವಸಿಟಿ ನಿರ್ಮಾಣ ಆಗುತ್ತಿರುವುದು ಯುವಜನರಿಗೆ ಸಿಕ್ಕ ಬಹುದೊಡ್ಡ ಕೊಡುಗೆಯಾಗಿದೆ. ಇಲ್ಲಿ ಸಾಮಾನ್ಯ ವಿಧಿ ವಿಜ್ಞಾನ, ವಿಧಿ ವಿಜ್ಞಾನ ರಸಾಯನ ಶಾಸ್ತ್ರ, ಟಾಕ್ಸಿಕಾಲಜಿ, ಜೈವಿಕ ತಂತ್ರಜ್ಞಾನ,ಬೆರಳಚ್ಚು, ಡಿಎನ್ಎ ವಿಜ್ಞಾನ, ಹಣಕಾಸು ಅಪರಾಧಗಳ ತನಿಖೆ, ಸೈಬರ್-ಭದ್ರತೆ ವಿಶ್ಲೇಷಣೆ, ಡಿಜಿಟಲ್ ವಿಧಿ ವಿಜ್ಞಾನ ಮತ್ತು ವನ್ಯಜೀವಿ ವಿಧಿ ವಿಜ್ಞಾನ ಕೋರ್ಸ್ಗಳು ಲಭ್ಯವಿದೆ. ಈ ಕೋರ್ಸ್ಗಳಿಗೆ ಹೆಚ್ಚೆಚ್ಚು ವಿದ್ಯಾರ್ಥಿಗಳು ಸೇರಿಕೊಳ್ಳಿ. ನಿಮಗೆ ಖಂಡಿತ ಮುಂದೆ ಉದ್ಯೋಗಾವಕಾಶ ಇದೆ ಎಂದು ಅಮಿತ್ ಶಾ ಕರೆ ನೀಡಿದರು.
ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಹೊಗಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
Reliance Industries: ಫೋರ್ಬ್ಸ್ನಿಂದ ಭಾರತದ ಟಾಪ್ 1 ಉದ್ಯೋಗದಾತ ಸಂಸ್ಥೆಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಆಯ್ಕೆ
Published On - 7:12 pm, Thu, 14 October 21