ಹನಿಟ್ರ್ಯಾಪ್: ಪಾಕಿಸ್ತಾನಕ್ಕೆ ಸೇನಾ ಮಾಹಿತಿ ಸೋರಿಕೆ ಮಾಡಿದ ಭಾರತೀಯ ಸೇನಾ ಸಿಬ್ಬಂದಿ ಬಂಧನ

ಡಿಜಿ ಇಂಟೆಲಿಜೆನ್ಸ್ ಉಮೇಶ್ ಮಿಶ್ರಾ ಪ್ರಕಾರ, ಕುಮಾರ್ ಅವರು ಪಾಕ್ ಏಜೆಂಟ್‌ನೊಂದಿಗೆ ರಹಸ್ಯ ದಾಖಲೆಗಳ ಚಿತ್ರಗಳನ್ನು ವಾಟ್ಸಾಪ್ ಮೂಲಕ ವಿನಿಮಯ ಮಾಡಿಕೊಂಡಿದ್ದು ಇತರ ಸೈನಿಕರನ್ನು ಕೂಡಾ ಬಲಿಪಶು ಮಾಡಲು ಪ್ರಯತ್ನಿಸಲಾಯಿತು

ಹನಿಟ್ರ್ಯಾಪ್: ಪಾಕಿಸ್ತಾನಕ್ಕೆ ಸೇನಾ ಮಾಹಿತಿ ಸೋರಿಕೆ ಮಾಡಿದ ಭಾರತೀಯ ಸೇನಾ ಸಿಬ್ಬಂದಿ ಬಂಧನ
ಪ್ರದೀಪ್ ಕುಮಾರ್
Image Credit source: India Today
Updated By: ರಶ್ಮಿ ಕಲ್ಲಕಟ್ಟ

Updated on: May 22, 2022 | 6:01 PM

ದೆಹಲಿ: ಪಾಕಿಸ್ತಾನಕ್ಕೆ ಸೇನಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ಭಾರತೀಯ ಸೇನಾ ಸಿಬ್ಬಂದಿ (Indian Army) ಪ್ರದೀಪ್ ಕುಮಾರ್​​ನ್ನು (Pradeep Kumar) ರಾಜಸ್ಥಾನ ಪೊಲೀಸರು ಮೇ 21 ರಂದು ಶನಿವಾರ ಬಂಧಿಸಿದ್ದಾರೆ. ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ 24 ವರ್ಷದ ಸೇನಾ ಸಿಬ್ಬಂದಿಯನ್ನು ಪಾಕಿಸ್ತಾನಿ ಮಹಿಳೆಯೊಬ್ಬರು ಹನಿಟ್ರ್ಯಾಪ್ (honeytrap) ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜೋಧ್‌ಪುರದಲ್ಲಿ ನೆಲೆಸಿದ್ದ ಕುಮಾರ್ ಫೇಸ್‌ಬುಕ್ ಮೂಲಕ ಪಾಕಿಸ್ತಾನಿ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದನು. ಪ್ರದೀಪ್ ಜೊತೆ ಸಂಪರ್ಕ ಸಾಧಿಸಲು ಆಕೆ ಹಿಂದೂ ಮಹಿಳೆಯಂತೆ ಪೋಸ್ ನೀಡಿದ್ದಳು ಎಂದು ಹೇಳಲಾಗಿದ್ದು ಈಕೆ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಛದಮ್ ಎಂದು ಗುರುತಿಸಿಕೊಂಡಿದ್ದಳು. ಆಕೆ ಬೆಂಗಳೂರಿನ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಪಾಕಿಸ್ತಾನಿ ಏಜೆಂಟ್ ಕುಮಾರ್ ಅವರಿಗೆ ನಂಬಿಸಿದ್ದಾಳೆ. ಹಲವಾರು ತಿಂಗಳ ನಂತರ ಕುಮಾರ್ ಮದುವೆಯ ನೆಪದಲ್ಲಿ ದೆಹಲಿಗೆ ಬಂದಿದ್ದು ಭಾರತೀಯ ಸೇನೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ವಿನಿಮಯ ಮಾಡಿದ್ದಾರೆ. ಮಿಲಿಟರಿ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯ ಚಿತ್ರಗಳನ್ನು ಕುಮಾರ್ ಪಾಕಿಸ್ತಾನಿ ಮಹಿಳೆಗೆ ಕಳುಹಿಸಿದ್ದರು. ಈಕೆ ಇಂಟರ್-ಸರ್ವೀಸ್ ಇಂಟೆಲಿಜೆನ್ಸ್ (ISI) ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಕುಮಾರ್ ಮತ್ತು ಪಾಕಿಸ್ತಾನಿ ಮಹಿಳೆ ಆರು ತಿಂಗಳ ಹಿಂದೆ ವಾಟ್ಸಾಪ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಜಿ ಇಂಟೆಲಿಜೆನ್ಸ್ ಉಮೇಶ್ ಮಿಶ್ರಾ ಪ್ರಕಾರ, ಕುಮಾರ್ ಅವರು ಪಾಕ್ ಏಜೆಂಟ್‌ನೊಂದಿಗೆ ರಹಸ್ಯ ದಾಖಲೆಗಳ ಚಿತ್ರಗಳನ್ನು ವಾಟ್ಸಾಪ್ ಮೂಲಕ ವಿನಿಮಯ ಮಾಡಿಕೊಂಡಿದ್ದು ಇತರ ಸೈನಿಕರನ್ನು ಕೂಡಾ ಬಲಿಪಶು ಮಾಡಲು ಪ್ರಯತ್ನಿಸಲಾಯಿತು. ಕುಮಾರ್‌ನ ಇನ್ನೊಬ್ಬ ಮಹಿಳಾ ಸ್ನೇಹಿತೆ ಕೂಡ ಅಪರಾಧದಲ್ಲಿ ಭಾಗಿಯಾಗಿದ್ದಳು ಎಂದಿದ್ದಾರೆ.

ಗೂಢಚರ್ಯೆಯ ಶಂಕೆಯ ಮೇರೆಗೆ ವಿಚಾರಣೆಗಾಗಿ ಮೇ 18 ರಂದು ರಾಜಸ್ಥಾನ ಪೊಲೀಸರು ಕುಮಾರ್ ಅವರನ್ನು ವಶಕ್ಕೆ ತೆಗೆದುಕೊಂಡರು ಮತ್ತು ಮೇ 21 ರಂದು ಅವರ ಬಂಧನ ನಡೆದಿದೆ.

ಇದನ್ನೂ ಓದಿ
ಇಂಧನ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಮೋದಿ ಸರ್ಕಾರದ ನಿರ್ಧಾರ ಶ್ಲಾಘಿಸಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
ಬಿಜೆಪಿ ನಾಯಕ ಅನಂತರಾಜು ಆತ್ಮಹತ್ಯೆ ಪ್ರಕರಣ; ಹನಿಟ್ರ್ಯಾಪ್ ಬ್ಲಾಕ್ಮೇಲ್ ಆರೋಪಿ ರೇಖಾ ಬಂಧನ
ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ 49 ಲಕ್ಷ ಹಣ ಕಳೆದುಕೊಂಡ ಪುರೋಹಿತ, ವಂಚಕ ದಂಪತಿಯ ಬಂಧಿಸಿದ ಸಿಸಿಬಿ ಪೊಲೀಸರು

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ