‘ಅಪಾಯಕಾರಿ ಅನಿಲ ಒಳಗಿದೆ, ಹುಷಾರು’: ದೆಹಲಿ ವಸಂತ್ ವಿಹಾರ ಆತ್ಮಹತ್ಯಾ ಪ್ರಕರಣದಲ್ಲಿ ಆತ್ಮಹತ್ಯಾ ಟಿಪ್ಪಣಿ ಪತ್ತೆ
ಪಿಟಿಐ ಪ್ರಕಾರ ಮಹಿಳೆಯರನ್ನು ಮಂಜು ಮತ್ತು ಅವರ ಪುತ್ರಿಯರಾದ ಅಂಶಿಕಾ ಮತ್ತು ಅಂಕು ಎಂದು ಗುರುತಿಸಲಾಗಿದೆ. ಕೊವಿಡ್ -19 ಗೆ ಧನಾತ್ಮಕ ಪರೀಕ್ಷೆಯ ನಂತರ ಮಂಜು ಅವರ ಪತಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಗಳು ಸೂಚಿಸುತ್ತವೆ.
ಶನಿವಾರ ಸಂಜೆ ದೆಹಲಿಯ (Delhi) ವಸಂತ್ ವಿಹಾರ್‌ನಲ್ಲಿ (Vasant Vihar) 55 ವರ್ಷ ವಯಸ್ಸಿನ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಶವವಾಗಿ ಪತ್ತೆಯಾಗಿದ್ದರು. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಹೇಳಲಾಗುತ್ತಿದ್ದು, ಆತ್ಮಹತ್ಯಾ ಟಿಪ್ಪಣಿಯೊಂದು (suicide note) ಪತ್ತೆಯಾಗಿದೆ. ಇದರಲ್ಲಿ ಮಾರಣಾಂತಿಕ ಅನಿಲ ಇದು. ಬೆಂಕಿಕಡ್ಡಿ, ಮೇಣದಬತ್ತಿ ಅಥವಾ ಯಾವುದನ್ನಾದರೂ ಬೆಳಗಿಸಬೇಡಿ… ಜಾಗರೂಕರಾಗಿರಿ… ಅಪಾಯಕಾರಿ ಅನಿಲ’ ಎಂದು ಬರೆಯಲಾಗಿದೆ. ಒಳಗಿನಿಂದ ಲಾಕ್ ಮಾಡಿದ ಕೋಣೆಯನ್ನು ದೆಹಲಿ ಪೊಲೀಸರು ತೆರೆದಿದ್ದು ಭಾಗಶಃ ತೆರೆದ ಗ್ಯಾಸ್ ಸಿಲಿಂಡರ್ ಅಲ್ಲಿ ಸಿಕ್ಕಿದೆ. ಒಳಗಿನ ಕೋಣೆಯಲ್ಲಿ ಪೊಲೀಸರು ಮೂವರು ಮಹಿಳೆಯರ ಶವಗಳನ್ನು ಪತ್ತೆ ಮಾಡಿದರು. ಈ ಮೂವರ ಶವ ಹಾಸಿಗೆಯ ಮೇಲೆ ಇತ್ತು. ಮೂರು ಸಣ್ಣ, ಪರಿಮಳಯುಕ್ತ ಮೇಣದಬತ್ತಿಗಳು ಸಹ ಅಲ್ಲಿತ್ತು. ಅವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದೆ” ಎಂದು ಡಿಸಿಪಿ (ದೆಹಲಿ ಪೊಲೀಸ್, ನೈಋತ್ಯ) ಮನೋಜ್ ಸಿ ಹೇಳಿದ್ದಾರೆ.
ಯಾರಿವರು?
ಪಿಟಿಐ ಪ್ರಕಾರ ಮಹಿಳೆಯರನ್ನು ಮಂಜು ಮತ್ತು ಅವರ ಪುತ್ರಿಯರಾದ ಅಂಶಿಕಾ ಮತ್ತು ಅಂಕು ಎಂದು ಗುರುತಿಸಲಾಗಿದೆ. ಕೊವಿಡ್ -19 ಗೆ ಧನಾತ್ಮಕ ಪರೀಕ್ಷೆಯ ನಂತರ ಮಂಜು ಅವರ ಪತಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಗಳು ಸೂಚಿಸುತ್ತವೆ. ಈ ಕುಟುಂಬವು ಖಿನ್ನತೆಯಿಂದ ಬಳಲುತ್ತಿತ್ತು. “ಮಹಿಳೆ (ತಾಯಿ) ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸ್ಥಳೀಯರು ಹೇಳಿರುವುದಾಗಿ ಡಿಸಿಪಿ ಮನೋಜ್ ಹೇಳಿದರು. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಣದಬತ್ತಿಯ ಹೊಗೆ ಮತ್ತು ಗ್ಯಾಸ್ ಸಿಲಿಂಡರ್ ಅನಿಲ ಹೊರಹೋಗದಂತೆ ಕಿಟಕಿ ಮತ್ತು ಬಾಗಿಲುಗಳನ್ನು ಬಿಗಿಯಾಗಿ ಮುಚ್ಚಲಾಗಿದೆ. ಇದು ಕಾರ್ಬನ್ ಮೋನೋಕ್ಸೈಡ್‌ನ ಹೆಚ್ಚಳಕ್ಕೆ ಕಾರಣವಾಯಿತು. ಇದರಿಂದ ಇವರು ಉಸಿರುಗಟ್ಟಿ ಸತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆತ್ಮಹತ್ಯಾ ಟಿಪ್ಪಣಿ
ಮೃತದೇಹಗಳನ್ನು ಪತ್ತೆ ಹಚ್ಚಿದ ಬಳಿಕ ಪೊಲೀಸರಿಗೆ ಮೂರು ಆತ್ಮಹತ್ಯಾ ಟಿಪ್ಪಣಿಗಳೂ ದೊರೆತಿವೆ. ಒಂದನ್ನು ಒಳಗಿನ ಗೋಡೆಯ ಮೇಲೆ ಅಂಟಿಸಲಾಗಿದೆ. “ತುಂಬಾ ಮಾರಣಾಂತಿಕ ಅನಿಲ… ಒಳಗೆ ಕಾರ್ಬನ್ ಮೋನೋಕ್ಸೈಡ್ . ಇದು ಸುಡುವಂತಿದೆ. ದಯವಿಟ್ಟು ಕಿಟಕಿ ತೆರೆದು ಫ್ಯಾನ್ ತೆರೆಯುವ ಮೂಲಕ ಕೊಠಡಿಯಲ್ಲಿ ಗಾಳಿಯಾಡಲು ಬಿಡಿ. ಬೆಂಕಿಕಡ್ಡಿ, ಕ್ಯಾಂಡಲ್ ಅಥವಾ ಯಾವುದನ್ನಾದರೂ ಬೆಳಗಿಸಬೇಡಿ !! ಪರದೆಯನ್ನು ತೆಗೆಯುವಾಗ ಜಾಗರೂಕರಾಗಿರಿ ಏಕೆಂದರೆ ಕೊಠಡಿ ಅಪಾಯಕಾರಿ ಅನಿಲದಿಂದ ತುಂಬಿದೆ. ಉಸಿರಾಡ ಬೇಡಿ. ಹೊರಗಿನಿಂದ ಒಳಗಿನ ಕಿಟಕಿಯನ್ನು ತೆರೆಯಿರಿ ಎಂದು ಬರೆಯಲಾಗಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ