Video: ಬಿಪಿನ್​ ರಾವತ್ ಚಿಕ್ಕ ಹುಡುಗನಂತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದ ವಿಡಿಯೋ ವೈರಲ್​; ನ್ಯೂ ಇಯರ್​ ಪಾರ್ಟಿಯ ಸಂಭ್ರಮ ಇದಾಗಿತ್ತು

| Updated By: Lakshmi Hegde

Updated on: Dec 09, 2021 | 11:57 AM

ಬಿಪಿನ್​ ರಾವತ್​ ಮೃತಪಟ್ಟ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಇದರಲ್ಲಿ ರಾವತ್ ಅವರೊಂದಿಗೆ ನೃತ್ಯ ಮಾಡಿದ ಸೇನಾ ಸಿಬ್ಬಂದಿಯ ಕುಟುಂಬದವರೂ ಪಾಲ್ಗೊಂಡಿದ್ದರು.

Video: ಬಿಪಿನ್​ ರಾವತ್ ಚಿಕ್ಕ ಹುಡುಗನಂತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದ ವಿಡಿಯೋ ವೈರಲ್​; ನ್ಯೂ ಇಯರ್​ ಪಾರ್ಟಿಯ ಸಂಭ್ರಮ ಇದಾಗಿತ್ತು
ಬಿಪಿನ್​ ರಾವತ್​
Follow us on

ಭಾರತದ ಮೊದಲ ಸಿಡಿಎಸ್​ (Chief Defence Staff -CDS) ಬಿಪಿನ್​ ರಾವತ್​ ನಿನ್ನೆ ತಮಿಳುನಾಡಿನ ಕೂನೂರ್​​ನಲ್ಲಿ ನಡೆದ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟಿದ್ದಾರೆ. ಅವರ ಪತ್ನಿ ಮಧುಲಿಕಾ ರಾವತ್​ ಮತ್ತಿತರ ಸೇನಾಧಿಕಾರಿಗಳು ಸೇರಿ ಒಟ್ಟು 13 ಮಂದಿ ದುರ್ಮರಣಕ್ಕೀಡಾದ ಬಹುದೊಡ್ಡ ದುರಂತ ಇದು. ಬಿಪಿನ್​ ರಾವತ್​ ಮತ್ತು ಇತರರ ಸಾವಿಗೆ ಇಡೀ ದೇಶ ದುಃಖ ವ್ಯಕ್ತಪಡಿಸುತ್ತಿದೆ. ಅವರ ಹಳೇ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ತುಂಬ ವೈರಲ್ ಆಗುತ್ತಿವೆ. ಅದರಲ್ಲೂ ಬಿಪಿನ್​ ರಾವತ್​ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅದು ಕಳೆದ ಹೊಸವರ್ಷದ ಪಾರ್ಟಿಯದ್ದು ಎಂದು ಹೇಳಲಾಗಿದ್ದು, ಲಖನೌನಲ್ಲಿ ಗೊರ್ಖಾ ರೆಜಿಮೆಂಟ್​​ನ ಸಹೋದ್ಯೋಗಿಗಳೊಂದಿಗೆ ರಾವತ್​ ನೃತ್ಯ ಮಾಡಿದ್ದು. 

ಬಿಪಿನ್​ ರಾವತ್​ ಮೃತಪಟ್ಟ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಇದರಲ್ಲಿ ರಾವತ್ ಅವರೊಂದಿಗೆ ನೃತ್ಯ ಮಾಡಿದ ಸೇನಾ ಸಿಬ್ಬಂದಿಯ ಕುಟುಂಬದವರೂ ಪಾಲ್ಗೊಂಡಿದ್ದರು. ಅವರಂದು ನೇಪಾಳಿ ಸಿನಿಮಾ ಗೋರ್ಖಾ ಪಲ್ಟನ್​​ದ ಹಾಡಿಗೆ ತುಂಬ ಖುಷಿಯಾಗಿ, ನಗುನಗುತ್ತ ನೃತ್ಯ ಮಾಡಿದ್ದನ್ನು ಈ ವಿಡಿಯೋದಲ್ಲಿ ಕಾಣಬಹುದು. 2010ರಲ್ಲಿ ಬಿಡುಗಡೆಯಾಗಿದ್ದ ಗೋರ್ಖಾ ಪಲ್ಟನ್​ ಸಿನಿಮಾದ ಟೈಟಲ್​ ಸಾಂಗ್ ಆದ ಇದನ್ನು ಪ್ರಶಾಂತ್ ತಮಂಗ್ ಹಾಡಿದ್ದಾರೆ. ಅಂದಹಾಗೆ ಇದು ಗೋರ್ಖಾ ರೆಜಿಮೆಂಟ್ ಕುರಿತಾದ ಸಿನಿಮಾವೇ ಆಗಿತ್ತು.

ಬಿಪಿನ್​ ರಾವತ್ ಅವರು 11 ಗೋರ್ಖಾ ರೈಫಲ್ಸ್​ನ 5ನೇ ಬೆಟಾಲಿಯನ್​​ನವರಾಗಿದ್ದಾರೆ. ಅವರ ತಂದೆಯೂ ಕೂಡ ಲೆಫ್ಟಿನೆಂಟ್​ ಜನರಲ್​ ಆಗಿದ್ದವರು ಮತ್ತು ಇದೇ ಘಟಕದಲ್ಲಿ ಇದ್ದವರು. ಸೇನೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ 2019ರ ಡಿಸೆಂಬರ್​ 31ರಿಂದ ಭಾರತದ ಮೊದಲ ಸಿಡಿಎಸ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ತಮಿಳುನಾಡಿನ ವೆಲ್ಲಿಂಗ್ಟನ್​​ಗೆ ಸೇನಾ ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ, ಅದು ಕೂನೂರು ಬಳಿ ಪತನಗೊಂಡು ಮರಣ ಹೊಂದಿದ್ದಾರೆ.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾದ ಅಧಿಕಾರಿ ಕೇರಳದಲ್ಲಿ 2018ರ ಪ್ರವಾಹ ವೇಳೆ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

Published On - 11:52 am, Thu, 9 December 21