ದೆಹಲಿ: ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್‌ನಲ್ಲಿ ಶುಕ್ರವಾರ ಸಂಜೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ (Chief of Defence Staff General Bipin Rawat) ಅವರ ಅಂತ್ಯ ಕ್ರಿಯೆ ನಡೆದಿದೆ. ದೆಹಲಿ ನಿವಾಸದಿಂದ ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್‌ಗೆ (Brar Square) ರಾವತ್ ಮತ್ತು ಪತ್ನಿ ಮಧುಲಿಕಾ ರಾವತ್ (Madhulika Rawat) ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗಿತ್ತು. ಬ್ರಾರ್ ಸ್ಕ್ವೇರ್‌ನಲ್ಲಿ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಅವರಿಗೆ ಸಕಲ ಸೇನಾ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಮಾಡಲಾಗಿದ್ದು ಅವರ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದರು. ಅಂತಿಮಯಾತ್ರೆಗೆ ಮುನ್ನ ಸೇನಾಧಿಕಾರಿಗೆ ಅಂತಿಮ ನಮನ ಸಲ್ಲಿಸಲು ಅವರ ನಿವಾಸದ ಹೊರಗೆ ನೂರಾರು ಜನರು ಜಮಾಯಿಸಿದ್ದರು. ತಮಿಳುನಾಡಿನ ಕುನೂರ್ ಬಳಿ ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಅಪಘಾತದಲ್ಲಿ ರಾಷ್ಟ್ರದ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿ ಜನರಲ್ ರಾವತ್ ಅವರು ತಮ್ಮ ಪತ್ನಿ ಮತ್ತು 11 ಸಶಸ್ತ್ರ ಪಡೆಗಳ ಸಿಬ್ಬಂದಿಯೊಂದಿಗೆ ಸಾವಿಗೀಡಾಗಿದ್ದರು. ಸಿಡಿಎಸ್‌ನ ಸೇನಾ ಅಂತ್ಯಕ್ರಿಯೆಯಲ್ಲಿ ಒಟ್ಟು 800 ಸೇವಾ ಸಿಬ್ಬಂದಿ ಪಾಲ್ಗೊಂಡಿದ್ದಾರೆ. ನಿಗದಿಪಡಿಸಿದ ಪ್ರೋಟೋಕಾಲ್‌ಗಳ ಪ್ರಕಾರ ಅವರಿಗೆ 17-ಗನ್ ಸೆಲ್ಯೂಟ್ ನೀಡಲಾಯಿತು .ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಡಿಎಂಕೆ ನಾಯಕರಾದ ಎ ರಾಜಾ ಮತ್ತು ಕನಿಮೋಳಿ ಮುಂತಾದ ಹಲವಾರು ರಾಜಕೀಯ ಮುಖಂಡರು ಸಿಡಿಎಸ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
#WATCH | Delhi: #CDSGeneralBipinRawat laid to final rest with full military honours, 17-gun salute. His last rites were performed along with his wife Madhulika Rawat, who too lost her life in #TamilNaduChopperCrash.
Their daughters Kritika and Tarini performed their last rites. pic.twitter.com/uTECZlIhI0
— ANI (@ANI) December 10, 2021
ಜಬ್ ತಕ್ ಸೂರಜ್ ಚಾಂದ್ ರಹೇಗಾ, ಬಿಪಿನ್ ಜಿ ಕಾ ನಾಮ್ ರಹೇಗಾ’
ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಪಾರ್ಥಿವ ಶರೀರದ ಮೆರವಣಿಗೆ ದೆಹಲಿ ಕಂಟೋನ್ಮೆಂಟ್‌ನಲ್ಲಿರುವ ಬ್ರಾರ್ ಸ್ಕ್ವೇರ್ ಸ್ಮಶಾನದ ಕಡೆಗೆ ಸಾಗುತ್ತಿರುವಾಗ ಜನರು “ಜಬ್ ತಕ್ ಸೂರಜ್ ಚಾಂದ್ ರಹೇಗಾ, ಬಿಪಿನ್ ಜಿ ಕಾ ನಾಮ್ ರಹೇಗಾ” ಎಂಬ ಘೋಷಣೆಗಳನ್ನು ಕೂಗಿದ್ದಾರೆ.
#WATCH | Delhi: Citizens raise slogans of “Jab tak suraj chaand rahega, Bipin ji ka naam rahega”, as the cortège of #CDSGeneralBipinRawat proceeds towards Brar Square crematorium in Delhi Cantonment. pic.twitter.com/s7sjV4vg73
— ANI (@ANI) December 10, 2021
ಬ್ರಾರ್ ಸ್ಕ್ವೇರ್‌ನಲ್ಲಿ ರಾವತ್ ಮತ್ತು ಪತ್ನಿ ಮಧುಲಿಕಾ ರಾವತ್ ಪಾರ್ಥಿವ ಶರೀರ
Delhi: The mortal remains of #CDSGeneralBipinRawat and his wife Madhulika Rawat brought to Brar Square crematorium, Delhi Cantonment.#TamilNaduChopperCrash pic.twitter.com/ZPyL4FlLHU
— ANI (@ANI) December 10, 2021
ಬ್ರಾರ್ ಸ್ಕ್ವೇರ್‌ನಲ್ಲಿ ಜನರಲ್ ಬಿಪಿನ್ ರಾವತ್ ಅಂತ್ಯಕ್ರಿಯೆ, 17 ಗನ್ ಸೆಲ್ಯೂಟ್
ಬ್ರಾರ್ ಸ್ಕ್ವೇರ್ ಸ್ಮಶಾನ ಮೈದಾನದಲ್ಲಿ ಜನರಲ್ ಬಿಪಿನ್ ರಾವತ್ ಅಂತ್ಯಕ್ರಿಯೆ ನಡೆದಿದೆ. 2233 ಫೀಲ್ಡ್ ರೆಜಿಮೆಂಟ್‌ನ ಸೆರಿಮೋನಿಯಲ್ ಬ್ಯಾಟರಿಯು ಗನ್ ಕ್ಯಾರೇಜ್ ಅನ್ನು ಒದಗಿಸುತ್ತದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ 99 ಎಲ್ಲಾ ಶ್ರೇಣಿಗಳು ಮತ್ತು ತ್ರಿ-ಸೇವಾ ಬ್ಯಾಂಡ್‌ನ 33 ಸದಸ್ಯರು ಮುಂಭಾಗದ ಬೆಂಗಾವಲು ಮತ್ತು ಮೂರು ಸೇವೆಗಳ 99 ಎಲ್ಲಾ ಶ್ರೇಣಿಗಳು ಹಿಂಭಾಗದ ಎಸ್ಕಾರ್ಟ್ ಆಗಿ ಕಾರ್ಯನಿರ್ವಹಿಸುತ್ತವೆ. ಸಿಡಿಎಸ್‌ನ ಸೇನಾ ಅಂತ್ಯಕ್ರಿಯೆಯಲ್ಲಿ ಒಟ್ಟು 800 ಸೇವಾ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ನಿಗದಿಪಡಿಸಿದ ಪ್ರೋಟೋಕಾಲ್‌ಗಳ ಪ್ರಕಾರ ಸಿಡಿಎಸ್‌ಗೆ 17 ಗನ್ ಸೆಲ್ಯೂಟ್ ನೀಡಲಾಗುತ್ತಿದೆ. ಟ್ರೈ-ಸರ್ವಿಸ್ ಬಗ್ಲರ್‌ಗಳಿಂದ ಲಾಸ್ಟ್ ಪೋಸ್ಟ್ ಮತ್ತು ರೋಸ್ ಅನ್ನು ಪ್ಲೇ ಮಾಡಿದ ನಂತರ ಕುಟುಂಬದ ಸದಸ್ಯರು ಚಿತೆಗೆ ಅಗ್ನಿಸ್ಪರ್ಷ ಮಾಡಿದ್ದಾರೆ.
ಇದನ್ನೂ ಓದಿ: CDS Bipin Rawat death: ಬಿಪಿನ್ ರಾವತ್ ಸಾವನ್ನ ಸಂಭ್ರಮಿ ಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ
Published On - 5:10 pm, Fri, 10 December 21