ದೆಹಲಿ: ಕೊವಿಡ್ ಲಸಿಕೆಯ ದರ ಹೆಚ್ಚಾಯಿತೆಂದು ಹಲವಾರು ವರ್ಗದ ಜನ ಹೇಳಿರುವ ಹಿನ್ನೆಲೆಯಲ್ಲಿ, ಮೇ 1 ರಿಂದ ರಾಷ್ಟ್ರವ್ಯಾಪಿ ಜಾರಿಗೊಳ್ಳಲಿರುವ ಮೂರನೇ ಹಂತದ ಕೊವಿಡ್ ಲಸಿಕಾ ಅಭಿಯಾನಕ್ಕೆ ಮುಂಚಿತವಾಗಿ ಕೋವಿಡ್ -19 ವಿರುದ್ಧದ ಲಸಿಕೆಗಳ ಬೆಲೆಯನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಸೋಮವಾರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್‌ಗೆ ಸೂಚಿಸಿದೆ. ಮೇ 1 ರಿಂದ 18 ವರ್ಷ ವಯಸ್ಸಿನವರಿಗೆ ಡೋಸೇಜ್ ನೀಡಲಾಗುತ್ತದೆ.
ಎಸ್‌ಐಐ ಮತ್ತು ಬ್ರಿಟಿಷ್ ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಅನ್ನು ಉತ್ಪಾದಿಸುತ್ತಿದ್ದರೆ , ಭಾರತ್ ಬಯೋಟೆಕ್ ಕಂಪೆನಿಯು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಕೊವಾಕ್ಸಿನ್ ಅನ್ನು ಉತ್ಪಾದಿಸುತ್ತಿದೆ. ಎರಡೂ ಲಸಿಕೆಗಳಿಗೆ ಈ ವರ್ಷದ ಜನವರಿ 3 ರಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ತುರ್ತು ಬಳಕೆಗಾಗಿ ಅನುಮೋದನೆ ನೀಡಿತು.
ಲಸಿಕೆ ಅಭಿಯಾನದ ಮೂರನೇ ಹಂತಕ್ಕಿಂತ ಮುಂಚಿತವಾಗಿ ಲಸಿಕೆ ಬೆಲೆಗಳ ಬಗ್ಗೆ ಸತತವಾಗಿ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಈ ಸೂಚನೆ ಮಹತ್ವ ಪಡೆದಿದೆ. ಮೂರನೇ ಹಂತದ ಅಡಿಯಲ್ಲಿ, ಲಸಿಕೆ ತಯಾರಕರು ತಮ್ಮ ಮಾಸಿಕ ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿ (ಸಿಡಿಎಲ್) ಪ್ರಮಾಣವನ್ನು ಶೇ 50 ರಷ್ಟು ಕೇಂದ್ರ ಸರ್ಕಾರಕ್ಕೆ ಪೂರೈಸುತ್ತಾರೆ ಮತ್ತು ಉಳಿದ ಶೇ 50ರಷ್ಟು ಪ್ರಮಾಣವನ್ನು ರಾಜ್ಯಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಪೂರೈಸಲು ಅವಕಾಶವಿದೆ.
ಎಸ್‌ಐಐನ ಕೋವಿಶೀಲ್ಡ್ ಅನ್ನು ಪ್ರತಿ ಡೋಸ್‌ಗೆ ₹ 400 ರಂತೆ ರಾಜ್ಯಗಳಿಗೆ ಮಾರಾಟ ಮಾಡಲಾಗುವುದು ಮತ್ತು ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್‌ಗೆ ₹ 600 ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ಕೊವಾಕ್ಸಿನ್ ಅನ್ನು ಪ್ರತಿ ಸರ್ಕಾರಿ ಆಸ್ಪತ್ರೆಗಳಿಗೆ ರೂ. 600 ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ಕ್ಕೆ ಮಾರಾಟ ಮಾಡಲು ನಿರ್ಧರಿಸಿದೆ. ಆದಾಗ್ಯೂ, ಎರಡೂ ಲಸಿಕೆಗಳನ್ನು ಕೇಂದ್ರ ಸರ್ಕಾರವು ಪ್ರತಿ ಡೋಸ್‌ಗೆ ₹ 150 ದರದಲ್ಲಿ ಖರೀದಿಸುತ್ತದೆ. ಕೇಂದ್ರ ಸರಕಾರದ ಈ ಕೋರಿಕೆಗೆ ಎರಡೂ ಸಂಸ್ಥೆಗಳು ಇನ್ನು ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ
(Central government asks Serum Institute and Bharat Biotech to reduce the prices of Covid 19 vaccine)