ನಕಲಿ ಟ್ವಿಟರ್ ಖಾತೆ: ಪೊಲೀಸರಿಗೆ ದೂರು ಸಲ್ಲಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ

Chief Justice of India NV Ramana: ರಮಣ ಅವರ ಹೆಸರಿನಲ್ಲಿರುವ @NVRamanna ಎಂಬ ನಕಲಿ ಖಾತೆಯ ಟ್ವೀಟ್ ಅಳಿಸಲಾಗಿದ್ದು,ಖಾತೆಯನ್ನು ರದ್ದು ಮಾಡಲಾಗಿದೆ. ಅಜಿತ್ ಡೊವಲ್ ಅವರ ರಾಜತಾಂತ್ರಿಕತೆಯಿಂದ ಅಮೆರಿಕ ಕೊವಿಡ್ ಲಸಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಸರಬರಜು ಮಾಡಲು ನಿರ್ಧರಿಸಿದೆ ಎಂದು ಈ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು

ನಕಲಿ ಟ್ವಿಟರ್ ಖಾತೆ: ಪೊಲೀಸರಿಗೆ ದೂರು ಸಲ್ಲಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ
ನ್ಯಾಯಮೂರ್ತಿ ರಮಣ
Follow us
ರಶ್ಮಿ ಕಲ್ಲಕಟ್ಟ
|

Updated on: Apr 26, 2021 | 7:55 PM

ದೆಹಲಿ: ತಮ್ಮ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರೆದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ  ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದ ರಮಣ ಅವರಿಗೆ ಟ್ವಿಟರ್ ಖಾತೆ ಇಲ್ಲ. ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಖಾತೆ ಹೊಂದಿಲ್ಲ.

ರಮಣ ಅವರ ಹೆಸರಿನಲ್ಲಿರುವ @NVRamanna ಎಂಬ ನಕಲಿ ಖಾತೆಯ ಟ್ವೀಟ್ ಅಳಿಸಲಾಗಿದ್ದು,ಖಾತೆಯನ್ನು ರದ್ದು ಮಾಡಲಾಗಿದೆ. ಅಜಿತ್ ಡೊವಲ್ ಅವರ ರಾಜತಾಂತ್ರಿಕತೆಯಿಂದ ಅಮೆರಿಕ ಕೊವಿಡ್ ಲಸಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಸರಬರಜು ಮಾಡಲು ನಿರ್ಧರಿಸಿದೆ ಎಂದು ಈ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಭಾರತಕ್ಕೆ ಸಹಾಯ ಮಾಡುವುದಾಗಿ ಅಮೆರಿಕ ಭಾನುವಾರ ಘೋಷಿಸಿದ ಬೆನ್ನಲ್ಲೇ ಈ ಟ್ವೀಟ್ ಪೋಸ್ಟ್ ಆಗಿದೆ.

ಕೊವಿಶೀಲ್ಡ್ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ತಕ್ಷಣ ಲಭ್ಯವಾಗುವಂತೆ ಮಾಡುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.

ಫೆಬ್ರವರಿಯ ನಿರ್ಬಂಧದಿಂದ ಲಸಿಕೆ ಕಚ್ಚಾ ವಸ್ತುಗಳನ್ನು ಬಿಡುಗಡೆ ಮಾಡುವ ಅಮೆರಿಕದ ನಿರ್ಧಾರದ ದೃಢೀಕರಣವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕದ ಭದ್ರತಾ ಸಲಹೆಗಾರ ಜೇಕ್ ಸಲ್ಲಿವಾನ್ ಅವರೊಂದಿಗೆ ಮಾತನಾಡಿದ ನಂತರ ಲಭಿಸಿತ್ತು.

ನ್ಯಾಯಮೂರ್ತಿ ರಮಣ ಅವರು ಕಳೆದ ವಾರ ಭಾರತದ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.

ವ್ಯಕ್ತಿ ಪರಿಚಯ

ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆ ಪೊನ್ನವರಮ್ ಗ್ರಾಮದಲ್ಲಿ ಜನಿಸಿದ ರಮಣ ಅವರಿಗೆ ಈಗ 63ರ ಹರೆಯ. ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿ ನಡೆದ ಹೋರಾಟಗಳಲ್ಲಿ ರಮಣ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಇದೇ ಕಾರಣಕ್ಕೆ ಅವರ ಒಂದು ವರ್ಷದ ಓದು ಹಿಂದಕ್ಕೆ ಬಿತ್ತು. ಆಂಧ್ರ ಪ್ರದೇಶದ ಕರಾವಳಿ ಮತ್ತು ರಾಯಲಸೀಮಾ ಪ್ರದೇಶಗಳ ಜನರಿಗೆ ಆಗುತ್ತಿದ್ದ ಅನ್ಯಾಯ ವಿರೋಧಿಸಿ 1970ರ ದಶಕದಲ್ಲಿ ಮುನ್ನೆಲೆಗೆ ಬಂದ ‘ಜೈ ಆಂಧ್ರ’ ಚಳವಳಿಯಲ್ಲಿಯೂ ರಮಣ ಭಾಗವಹಿಸಿದ್ದರು. ಇದೀಗ ಉಪರಾಷ್ಟ್ರಪತಿ ಆಗಿರುವ ಎಂ.ವೆಂಕಯ್ಯನಾಯ್ಡು ಸಹ ಈ ಹೋರಾಟದಲ್ಲಿ ಭಾಗಿಯಾಗಿದ್ದರು.

‘ಈನಾಡು’ ದಿನಪತ್ರಿಕೆಯ ವರದಿಗಾರರಾಗಿ 1979-1980ರ ಅವಧಿಯಲ್ಲಿ ರಮಣ ಕೆಲಸ ಮಾಡಿದ್ದರು. ರಾಜಕೀಯ ಮತ್ತು ನ್ಯಾಯಾಲಯಗಳಿಗೆ ಸಂಬಂಧಿಸಿದ ವರದಿಗಳನ್ನು ಬರೆಯುತ್ತಿದ್ದರು. 1983ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಸಂವಿಧಾನ, ಅಪರಾಧ ಪ್ರಕರಣಗಳು, ಸೇವಾ ಕ್ಷೇತ್ರ (ಸರ್ವೀಸ್​ ಸೆಕ್ಟರ್) ಮತ್ತು ಅಂತರರಾಜ್ಯ ನದಿ ಕಾನೂನುಗಳ ಬಗ್ಗೆ ಆಂಧ್ರ ಪ್ರದೇಶ ಹೈಕೋರ್ಟ್​ನಲ್ಲಿ ಹಲವು ಪ್ರಕರಣಗಳನ್ನು ಮುನ್ನಡೆಸಿದ್ದರು. 2000ನೇ ಇಸವಿಯಲ್ಲಿ ರಮಣ ಅವರನ್ನು ಆಂಧ್ರ ಹೈಕೋರ್ಟ್​ನ ಕಾಯಂ ನ್ಯಾಯಾಧೀಶರಾಗಿ ನೇಮಿಸಲಾಯಿತು. 2013ರಲ್ಲಿ ದೆಹಲಿ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಸಿಕ್ಕಿತು. 2014ರಲ್ಲಿ ರಮಣ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಯಾದರು.

ಖಚಿತ ನಿಲುವಿನ ತೀರ್ಪುಗಳಿಗೆ ಹೆಸರುವಾಸಿ ರಮಣ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವ ನ್ಯಾಯಾಧೀಶರು. ಬಹಿರಂಗವಾಗಿ ಮಾತನಾಡಿದ್ದು ಬಹಳ ಕಡಿಮೆ. ಇವರು ನೀಡುವ ತೀರ್ಪುಗಳೂ ಅಷ್ಟೇ, ಆಲೋಚನೆಗಳನ್ನು ಖಚಿತವಾಗಿ ವ್ಯಕ್ತಪಡಿಸಿರುತ್ತಾರೆ. ನ್ಯಾಯಾಂಗದ ಶಿಸ್ತು ಮತ್ತು ಹಿಂದಿನ ತೀರ್ಪುಗಳ ಆಶಯಕ್ಕೆ ಅನುಗುಣವಾಗಿ ನಿರ್ದೇಶನಗಳನ್ನು ನೀಡುವುದು ರಮಣ ಅವರ ಶೈಲಿ. ದೇಶದ ಇತಿಹಾಸದಲ್ಲಿ ಮೈಲಿಗಲ್ಲಾಗುವ ಹಲವು ತೀರ್ಪುಗಳನ್ನು ರಮಣ ನೀಡಿದ್ದಾರೆ. ಸಂವಿಧಾನಾತ್ಮಕ ಹಕ್ಕುಗಳು, ಪ್ರಜಾಸತ್ತಾತ್ಮಕ ಮೌಲ್ಯಗಳು, ಉತ್ತರದಾಯಿತ್ವದ ವಿಚಾರದಲ್ಲಿ ರಮಣ ಅವರು ನೀಡಿರುವ ಹಲವು ತೀರ್ಪುಗಳು ದೇಶವನ್ನು ಬಹುಕಾಲ ಪ್ರಭಾವಿಸಲಿದೆ.

ಅನುರಾಧಾ ಭಾಸಿನ್ ಮತ್ತು ಫೌಂಡೇಷನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್​ ನಡುವಣ ಪ್ರಕರಣದಲ್ಲಿ ತೀರ್ಪು ನೀಡಿದ್ದ ರಮಣ, ಇಂಟರ್ನೆಟ್​ ಸೌಲಭ್ಯವು ಮೂಲಭೂತ ಹಕ್ಕಿನ ವಿಸ್ತರಣೆ. ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ಅರೆ-ಸ್ವಾಯುತ್ತ ರಾಜ್ಯದ ಮಾನ್ಯತೆಯನ್ನು ಹಿಂಪಡೆದ ನಂತರ ಹಲವು ಬಾರಿ ಇಂಟರ್ನೆಟ್ ನಿರ್ಬಂಧಿಸಿದ್ದ ಸರ್ಕಾರದ ಕ್ರಮವನ್ನು ಅವರು ಒಪ್ಪಿರಲಿಲ್ಲ. ಕರ್ಫ್ಯೂ ವಿಧಿಸಲು ಕೆಲ ಮಾನದಂಡಗಳನ್ನೂ ರಮಣ ನಿಗದಿಪಡಿಸಿದರು. ಸಿಆರ್​ಪಿಸಿ 144ನೇ ಸೆಕ್ಷನ್ ಅನ್ವಯ ಹೇರುವ ನಿಷೇಧಾಜ್ಞೆಯ ಅನ್ವಯ ಐದಕ್ಕಿಂತ ಹೆಚ್ಚು ಜನರು ಒಂದು ಸ್ಥಳದಲ್ಲಿ ಸೇರುವಂತಿಲ್ಲ ಎಂಬ ನಿಯಮವಿದೆ. ಆದರೆ ಈ ನಿಯಮವನ್ನು ಬಳಸಿ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು, ಅಭಿಪ್ರಾಯಗಳನ್ನು ಸರಿಯಾದ ಕ್ರಮದಲ್ಲಿ ವ್ಯಕ್ತಪಡಿಸುವುದನ್ನು ತಡೆಯುವುದು ತಪ್ಪು ಎಂದು ರಮಣ ವಿಶ್ಲೇಷಿಸಿದ್ದರು. ಸುಭಾಷ್ ಚಂದ್ರ ಅಗರ್​ವಾಲ್​ ಪ್ರಕರಣದ ವಿಚಾರಣೆ ನಡೆಸಿದ ಐವರು ಸದಸ್ಯರ ನ್ಯಾಯಪೀಠದಲ್ಲಿದ್ದ ರಮಣ, ಮಾಹಿತಿ ಹಕ್ಕು ಮತ್ತು ಖಾಸಗಿತನದ ಹಕ್ಕನ್ನು ತೂಕದಲ್ಲಿ ಪರಿಗಣಿಸಿದ್ದರು. ಸ್ವರಾಜ್ ಅಭಿಯಾನ್ Vs ಭಾರತ ಸರ್ಕಾರದ ಪ್ರಕರಣದಲ್ಲಿ ತೀರ್ಪು ನೀಡುವಾಗ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನದ ವೇಳೆ ಒಕ್ಕೂಟ ಪದ್ಧತಿಯಲ್ಲಿ ಸಹಕಾರದ ಮಹತ್ವವವನ್ನು ಒತ್ತಿಹೇಳಿದ್ದರು.

ಇದನ್ನೂ ಓದಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್​.ವಿ.ರಮಣ ಪ್ರಮಾಣವಚನ ಸ್ವೀಕಾರ 

ವ್ಯಕ್ತಿ-ವ್ಯಕ್ತಿತ್ವ: ಕಡಿಮೆ ಮಾತು, ಖಚಿತ ನಿಲುವು- ಇದು ಸುಪ್ರೀಂಕೋರ್ಟ್​ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರ ಕಾರ್ಯಶೈಲಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ