West Bengal Assembly Elections 2021: 7ನೇ ಹಂತದ ಚುನಾವಣೆಯ ಮತದಾನ ಅಂತ್ಯ; ಶೇ 75.06 ಮತದಾನ ದಾಖಲು

West Bengal Voting: 11, 376 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 5 ಗಂಟೆಯವರೆಗೆ ಶೇ 75.06 ಮತದಾನವಾಗಿದೆ. ಈ ಹಂತದ ಚುನಾವಣೆ ವೇೆಳೆ  ₹332.94 ಕೋಟಿ  ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

West Bengal Assembly Elections 2021: 7ನೇ ಹಂತದ ಚುನಾವಣೆಯ ಮತದಾನ ಅಂತ್ಯ; ಶೇ 75.06 ಮತದಾನ ದಾಖಲು
ಪಶ್ಚಿಮ ಬಂಗಾಳ ಚುನಾವಣೆ (ಕೃಪೆ: ಚುನಾವಣಾ ಆಯೋಗ)
Follow us
ರಶ್ಮಿ ಕಲ್ಲಕಟ್ಟ
|

Updated on: Apr 26, 2021 | 8:20 PM

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಏಳನೇ ಹಂತದ ಚುನಾವಣೆಗೆ ಮತದಾನ ಮುಕ್ತಾಯವಾಗಿದೆೆ. 11, 376 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 5 ಗಂಟೆಯವರೆಗೆ ಶೇ 75.06 ಮತದಾನವಾಗಿದೆ. ಈ ಹಂತದ ಚುನಾವಣೆ ವೇೆಳೆ  ₹332.94 ಕೋಟಿ  ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.  ಪಶ್ಚಿಮ ಬರ್ಧಮಾನ್, ದಕ್ಷಿಣ ದಿನಜ್​ಪುರ್, ಮಾಲ್ಡಾ ಮತ್ತು ಕೊಲ್ಕತ್ತಾ ಸೇರಿದಂತೆ 34 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆದಿದ್ದು, ಶಾಂತಿಯುತ ಮತದಾನ ನಡೆದಿದೆ. ಬೆಳಗ್ಗೆ7 ಗಂಟೆಗೆ ಮತದಾನ ಆರಂಭವಾಗಿದ್ದು 9.30ರ ಹೊತ್ತಿಗೆ ಶೇ17.47 ಮತದಾನವಾಗಿದೆ. ಬೆಳಗ್ಗೆ 11.30ರ ಹೊತ್ತಿಗೆ ಶೇ 37.72 ಮತದಾನ ದಾಖಲು ಆಗಿದೆ. ಮಧ್ಯಾಹ್ನ 1.30ರ ಹೊತ್ತಿಗೆ ಶೇ 55.12 ಮತದಾನ ದಾಖಲಾಗಿದ್ದು ಸಂಜೆ 3.31ರ  ಹೊತ್ತಿಗೆ ಶೇ 67. 27 ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ಟ್ವೀಟ್ ಮಾಡಿದೆ.

ಬಂಗಾಳದಿಂದ ಪೊಲೀಸ್ ಅಧಿಕಾರಿಗಳ ವರ್ಗ ಪಶ್ಚಿಮ ಬಂಗಾಳದಲ್ಲಿ ಏಳನೇ ಹಂತದ ಚುನಾವಣೆ ನಡೆಯುತ್ತಿದ್ದಂತೆ ಚುನಾವಣಾ ಆಯೋಗವು ಕೆಲವು ಪೊಲೀಸ್ ಅಧಿಕಾರಿಗಳನ್ನು ಬಂಗಾಳದಿಂದ ವರ್ಗಾವಣೆ ಮಾಡಿದೆ. ಆರ್ಥಿಕ ಅಪರಾಧಗಳ ಇಲಾಖೆಯ ನಿರ್ದೇಶನಾಲಯದ ಪೊಲೀಸ್ ಇನ್ಸ್ ಪೆಕ್ಟರ್ ಶಂತನು ಸಿನ್ಹಾ ಬಿಸ್ವಾಸ್ ಅವರನ್ನು ಕ್ರೈಂ ಇನ್ಸ್ ಪೆಕ್ಟರ್ ಆಗಿ ಡಿಐಡಿ ಜಲ್ಪೈಗುರಿ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.

ಅಂಚೆ ಮತಗಳಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಬಿಜೆಪಿ ಸಿನ್ಹಾ ಅವರ ಮೇಲೆ ಆರೋಪ ಹೊರಿಸಿತ್ತು.ಅ ಅಸಾನ್ಸಲ್- ದುರ್ಗಾಪುರ್ ಪೊಲೀಸ್ ಸಹಾಯಕ ಆಯುಕ್ತ ಶ್ರೀಮಂತ ಕುಮಾರ್ ಬಂದೋಪಾಧ್ಯಾಯ್ ಅವರನ್ನು ಬೊಲಾಪುರ್​ನ ಸಬ್ ಡಿವಿಷನಲ್ ಪೊಲೀಸ್ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಶುಬೇಂದ್ರ ಕುಮಾರ್ ಅವರು ಬೊಲಾಪುರ್​ನಲ್ಲಿ ಪ್ರಸ್ತುತ ಸಬ್ ಡಿವಿಷನಲ್ ಪೊಲೀಸ್ ಅಧಿಕಾರಿಯಾದ್ದು, ಕೊವಿಡ್ ರೋಗಕ್ಕೊಳಗಾಗಿದ್ದಾರೆ. ಕೃಷ್ಣನಗರ ಪೊಲೀಸ್ ಜಿಲ್ಲೆಯ ಕೃಷ್ಣಗಂಜ್‌ನ ಸರ್ಕಲ್ ಇನ್ಸ್‌ಪೆಕ್ಟರ್ ನಿಹಾರ್ ರಂಜನ್ ರಾಯ್ ಅವರನ್ನು ಮುರ್ಷಿದಾಬಾದ್ ಪೊಲೀಸ್ ಠಾಣೆಯ ಉಸ್ತುವಾರಿ ಹೊಸ ಇನ್ಸ್‌ಪೆಕ್ಟರ್ ಆಗಿ ನೇಮಕ ಮಾಡಲಾಗಿದೆ.

ಅಸನ್ಸೋಲ್ ಕ್ಷೇತ್ರದಲ್ಲಿ ಗಲಭೆ ಅಸನ್ಸೋಲ್ ಪ್ರದೇಶದಿಂದ ಕೆಲವು ಅಹಿತಕರ ಘಟನೆ ವರದಿಯಾಗಿವೆ. ಟಿಎಂಸಿ ಅಭ್ಯರ್ಥಿ ಸಯೋನಿ ಘೋಷ್ ಬಿಜೆಪಿ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಮತಗಟ್ಟೆಗಳ ನಿರ್ವಹಣೆಗೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪೌಲ್ ಆಧಾರರಹಿತ ಎಂದಿದ್ದಾರೆ. ಘೋಷ್ ಪರಾಭವಗೊಳ್ಳುವ  ಭಯದಿಂದ  ಈ ರೀತಿ ಮಾಡುತ್ತಿದ್ದಾರೆ ಎಂದು ಪೌಲ್ ಹೇಳಿದ್ದಾರೆ.

ಜಮುರಿಯಾ ಕ್ಷೇತ್ರದಲ್ಲಿ, ಎಡಪಕ್ಷದ ಅಭ್ಯರ್ಥಿ ಆಯಿಷೆ ಘೋಷ್, ತಮ್ಮ ಪಕ್ಷದ ಏಜೆಂಟರನ್ನು ಟಿಎಂಸಿ ಕಾರ್ಯಕರ್ತರು ಬೂತ್‌ಗೆ ಪ್ರವೇಶಿಸುವುದನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದು ಇದನ್ನು ಟಿಎಂಸಿ ನಿರಾಕರಿಸಿದೆ.

ಬಿಜೆಪಿ ಅಭ್ಯರ್ಥಿಯ ಮತಗಟ್ಟೆ ಏಜೆಂಟ್ ಬಂಧನ ನಗರದ ನ್ಯೂ ಅಲಿಪೋರ್ ಪ್ರದೇಶದ ಮತದಾನ ಕೇಂದ್ರದೊಳಗೆ ಕೆಲವು ಮಹಿಳಾ ಮತದಾರರನ್ನು ಕಿರುಕುಳ ನೀಡಿದ ಆರೋಪದ ಮೇಲೆ ರಾಶ್‌ಬೆಹರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಾಹ ಅವರ ಏಜೆಂಟ್ ಮೋಹನ್ ರಾವ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಿದ್ಯಾ ಭಾರತಿ ಶಾಲೆಯೊಳಗೆ ತಮ್ಮ ಕೈಗಳನ್ನು ಹಿಡಿದು ಎಳೆಯಲು ಪ್ರಯತ್ನಿಸಿದರು ಎಂದು ಹಲವಾರು ಮಹಿಳಾ ಮತದಾರರು ದೂರು ನೀಡಿದ ಹಿನ್ನೆಲೆಯಲ್ಲಿ ಮೋಹನ್ ರಾವ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ರಾವ್ ಆರೋಪಗಳನ್ನು ನಿರಾಕರಿಸಿದ್ದು ಮತ್ತು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.

ಟಿಎಂಸಿ ಕಾರ್ಯಕರ್ತರು ಈ ಪ್ರದೇಶದಲ್ಲಿ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಮತದಾನಕ್ಕೆ ಅಡ್ಡಿಪಡಿಸುವ ಉದ್ದೇಶ ಇದು ಎಂದು ಸಾಹಾ ಆರೋಪಿಸಿದ್ದಾರೆ.

ಇದನ್ನೂ ಓದಿ: West Bengal Assembly Elections 2021: 7ನೇ ಹಂತದ ಚುನಾವಣೆ; ರಾಶ್‌ಬೆಹರಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಬಿಜೆಪಿಯ ಮತಗಟ್ಟೆ ಏಜೆಂಟ್ ಬಂಧನ

(Voting concluded for the seventh phase of the West Bengal Assembly elections 2021)

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ