ಭಾರತದಲ್ಲಿ ಕೊವಿಡ್ ವಿರುದ್ಧದ ಹೋರಾಟಕ್ಕೆ ಅಮೆರಿಕ ಬೆಂಬಲ; ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯಿಂದ ಕನ್ನಡದಲ್ಲಿ ಟ್ವೀಟ್

ಭೀಕರವಾದ ಕೊವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಭಾರತ ಸರ್ಕಾರದೊಂದಿಗೆ ಕೈಜೋಡಿಸಿ ನಿಕಟ ಬೆಂಬಲ ನೀಡುತ್ತಿದ್ದೇವೆ. ಭಾರತದ ನಾಗರಿಕರು ಮತ್ತು ಆರೋಗ್ಯ ಕ್ಷೇತ್ರದ ಹೋರಾಟಗಾರರಿಗೆ ಹೆಚ್ಚಿನ ಬೆಂಬಲವನ್ನು ಕ್ಷಿಪ್ರವಾಗಿ ನಿಯೋಜಿಸುತ್ತೇವೆ ಎಂದು ಆಂಟನಿ ಬ್ಲಿಂಕೆನ್ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಕೊವಿಡ್ ವಿರುದ್ಧದ ಹೋರಾಟಕ್ಕೆ ಅಮೆರಿಕ ಬೆಂಬಲ; ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯಿಂದ ಕನ್ನಡದಲ್ಲಿ ಟ್ವೀಟ್
ಸಲ್ಲಿವಾನ್ ಟ್ವೀಟ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 26, 2021 | 12:08 PM

ದೆಹಲಿ: ಭಾರತದಲ್ಲಿ ತೀವ್ರವಾದ ಕೊವಿಡ್ ರೋಗ ಉಲ್ಬಣದ ಬಗ್ಗೆ ಅಮೆರಿಕ ಅತೀವ ಕಳಕಳಿ ಹೊಂದಿದೆ. ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ಮತ್ತು ಸಹಭಾಗಿಗಳಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯದಿಂದ ಹೋರಾಡುವಾಗ ಹೆಚ್ಚಿನ ಸಾಮಾಗ್ರಿ  ಮತ್ತು ಬೆಂಬಲ ನೀಡಲು ನಾವು ದಿನರಾತ್ರಿ ಶ್ರಮಿಸುತ್ತಿದ್ದೇವೆ .ಶೀಘ್ರದಲ್ಲಿಯೇ ಹೆಚ್ಚಿನದ್ದು ಕಳುಹಿಸುತ್ತೇವೆ ಎಂದು ಅಮೆರಿಕದ ಭದ್ರತಾ ಸಲಹೆಗಾರ ಜೇಕ್ ಸಲ್ಲಿವಾನ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ನ್ನು ರೀಟ್ವೀಟ್ ಮಾಡಿದ ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಅನುವಾದ ಮಾಡಿ ಟ್ವೀಟ್ ಮಾಡಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರ ಟ್ವೀಟ್​ನ್ನೂ ಅಮೆರಿಕ ರಾಯಭಾರಿ ಕಚೇರಿ ಮೂರು ಭಾಷೆಗಳಲ್ಲಿ ಅನುವಾದ ಮಾಡಿ ಟ್ವೀಟ್ ಮಾಡಿದೆ.

ಭೀಕರವಾದ ಕೊವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಭಾರತ ಸರ್ಕಾರದೊಂದಿಗೆ ಕೈಜೋಡಿಸಿ ನಿಕಟ ಬೆಂಬಲ ನೀಡುತ್ತಿದ್ದೇವೆ. ಭಾರತದ ನಾಗರಿಕರು ಮತ್ತು ಆರೋಗ್ಯ ಕ್ಷೇತ್ರದ ಹೋರಾಟಗಾರರಿಗೆ ಹೆಚ್ಚಿನ ಬೆಂಬಲವನ್ನು ಕ್ಷಿಪ್ರವಾಗಿ ನಿಯೋಜಿಸುತ್ತೇವೆ ಎಂದು ಆಂಟನಿ ಬ್ಲಿಂಕೆನ್ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಒಂದೇ ದಿನ 3,52,991  ಪ್ರಕರಣ ದಾಖಲು

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3,52,991 ಪ್ರಕರಣಗಳು ದಾಖಲಾಗಿದ್ದು, 2,891 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ಕೂಡ ದೇಶದಲ್ಲಿ 3.55 ಹೊಸ ಕೇಸ್ಗಳು, 2,807 ಸಾವುಗಳು ದಾಖಲಾಗಿದ್ದವು. ಈ ಎರಡೂ ಸಂಖ್ಯೆಗಳು ಜಗತ್ತಿನ ಉಳಿದೆಲ್ಲ ರಾಷ್ಟ್ರಗಳಲ್ಲಿ ದಾಖಲಾದ ಕೊರೊನಾ ಸೋಂಕಿತರ ಸಂಖ್ಯೆಗಿಂತ ಜಾಸ್ತಿ. ದೇಶದಲ್ಲಿ ಕೇವಲ 7ದಿನಗಳಲ್ಲಿ ಅಂದರೆ ಏಪ್ರಿಲ್ 18-25ರವರೆಗೆ 22.49 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಏಳುದಿನಗಳಲ್ಲಿ 22 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲು ಮತ್ತು ಅದೂ ಭಾರತದಲ್ಲೇ ಆಗಿದೆ.

ಜ.10ರ ಸಮಯದಲ್ಲಿ ಏಳುದಿನಗಳ ಅವಧಿಯಲ್ಲಿ ಅಮೆರಿಕ 17.9 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದು ಬಿಟ್ಟರೆ ಇನ್ಯಾವ ದೇಶಗಳಲ್ಲೂ ಅಷ್ಟು ಪ್ರಮಾಣದ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿಲ್ಲ. ಕಳೆದ ಅಲೆಯಲ್ಲಿ ಉತ್ತುಂಗದಲ್ಲಿದ್ದ ಬ್ರೆಜಿಲ್ ಒಂದು ವಾರದಲ್ಲಿ 5.4 ಲಕ್ಷ, ಬ್ರಿಟನ್ ನಲ್ಲಿ   4.3 ಲಕ್ಷ, ಟರ್ಕಿಯಲ್ಲಿ 4.2 ಲಕ್ಷ ದಾಖಲಾಗಿದ್ದೇ ಹೆಚ್ಚು. ಉಳಿದಂತೆ ಇನ್ಯಾವ ದೇಶಗಳಲ್ಲೂ ಏಳು ದಿನಲ್ಲಿ 4 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಈ ಅಂಕಿ-ಅಂಶ ನೋಡಿದರೆ ಭಾರತದಲ್ಲಿ ಕೊರೊನಾ ಉಲ್ಬಣತೆಯ ಭೀಕರತೆ ಸ್ಪಷ್ಟವಾಗುತ್ತದೆ.

ಕೊರೊನಾ ಸೋಂಕಿತರ ಪ್ರಮಾಣದೊಂದಿಗೆ ಸಾವಿನ ಸಂಖ್ಯೆಯನ್ನೂ ಏರಿಕೆಯಾಗುತ್ತಿದೆ. ಏಪ್ರಿಲ್ 18ರಂದು ಕೊನೆಯಾಗುವಂತೆ ಏಳುದಿನಗಳ ಅವಧಿಯಲ್ಲಿ ದೇಶದಲ್ಲಿ 8,588 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಆದರೆ 18ರಿಂದ ಈಚೆಗೆ ಒಂದು ವಾರದಲ್ಲಿ ದಾಖಲಾದ ಸಾವಿನ ಸಂಖ್ಯೆ ಬರೋಬ್ಬರಿ 16,257. ದೇಶದಲ್ಲಿ ಸೋಂಕಿತರ ಏರಿಕೆಯ ಪ್ರಮಾಣ ಶೇ.47 ಇದ್ದರೆ, ಸಾವಿನ ಪ್ರಮಾಣ ಅದರ 2ರಷ್ಟು, ಅಂದರೆ ಶೇ.89ರಷ್ಟಿದೆ.

ಇದನ್ನೂ  ಓದಿ: ಭಾರತದಲ್ಲಿ ಇಂದು 3,52,991 ಕೊರೊನಾ ಕೇಸ್​ಗಳು ದಾಖಲು, ಒಂದೇ ವಾರದಲ್ಲಿ 22.49 ಲಕ್ಷ ಪ್ರಕರಣಗಳು; ಉಳಿದ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹೇಗಿದೆ?..

(Our hearts go out to the Indian people in the midst of the horrific COVID 19 says USA consulates in Chennai tweets in kannada)

Published On - 11:56 am, Mon, 26 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ