Oxygen Shortage: ಆಕ್ಸಿಜನ್ ದಿಢೀರ್ ಸ್ಥಗಿತ, ಐವರ ಸಾವು
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿರುವ ಮಹಾರಾಜ ಕೇಂದ್ರ ಆಸ್ಪತ್ರೆಯಲ್ಲಿ ದಿಢೀರ್ ಆಕ್ಸಿಜನ್ ಸ್ಥಗಿತಗೊಂಡಿದ್ದು ಐವರು ರೋಗಿಗಳು ಮೃತಪಟ್ಟಿರುವ ಘಟನೆ ನಡೆದಿದೆ. ಧಿಡೀರ್ ಆಕ್ಸಿಜನ್ ಸ್ಥಗಿತದಿಂದ ಐವರು ರೋಗಿಗಳು ವಿಲವಿಲ ಒದ್ದಾಡಿ ಮೃತಪಟ್ಟಿದ್ದಾರೆ.
ಹೈದರಾಬಾದ್: ಸದ್ಯ ದೇಶ ಆಕ್ಸಿಜನ್ ಸಮಸ್ಯೆಯನ್ನು ಎದುರಿಸುತ್ತಿದೆ. ಆಮ್ಲಜನಕದ ಕೊರತೆಯಿಂದಾಗಿ ಕೊರೊನಾ ಶಕ್ತಿ ಮತ್ತಷ್ಟು ಬಲಿಷ್ಠವಾಗಿ ಜನರನ್ನು ನರಕಕ್ಕೆ ತಳ್ಳುತ್ತಿದೆ. ದೇಶದಲ್ಲಿ ಆಕ್ಸಿಜನ್ ಸರಿಯಾಗಿ, ಬೇಕಾದಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ ಎಂದು ಆಸ್ಪತ್ರೆಗಳು ಆರೋಪಿಸುತ್ತಿವೆ. ಈಗ ಆಕ್ಸಿಜನ್ ಕೊರತೆಯಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿರುವ ಮಹಾರಾಜ ಕೇಂದ್ರ ಆಸ್ಪತ್ರೆಯಲ್ಲಿ ದಿಢೀರ್ ಆಕ್ಸಿಜನ್ ಸ್ಥಗಿತಗೊಂಡಿದ್ದು ಐವರು ರೋಗಿಗಳು ಮೃತಪಟ್ಟಿರುವ ಘಟನೆ ನಡೆದಿದೆ. ಧಿಡೀರ್ ಆಕ್ಸಿಜನ್ ಸ್ಥಗಿತದಿಂದ ಐವರು ರೋಗಿಗಳು ವಿಲವಿಲ ಒದ್ದಾಡಿ ಮೃತಪಟ್ಟಿದ್ದಾರೆ. ಕೊರೊನಾ ಮಹಾಮಾರಿಯ ನಡುವೆ ಆಕ್ಸಿಜನ್ ಸಮಸ್ಯೆ ರೋಗಿಗಳನ್ನು ಮತ್ತಷ್ಟು ನರಳುವಂತೆ ಮಡುತ್ತಿದೆ.
ಇನ್ನು ಉಳಿದ ವಾರ್ಡ್ನಲ್ಲಿರುವ ರೋಗಿಗಳ ಸಂಬಂಧಿಕರು ಆಕ್ಸಿಜನ್ ಸ್ಥಗಿತಗೊಳ್ಳುವ ಮುನ್ನ ತಮ್ಮವರನ್ನು ಉಳಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಿಂದ ಆಕ್ಸಿಜನ್ ಸಿಲಿಂಡರ್ಗಾಗಿ ಓಡಾಡುತ್ತಿದ್ದಾರೆ. ಇನ್ನು ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಆಸ್ಪತ್ರೆ ಆವರಣದಲ್ಲಿ ರೋಗಿಗಳ ಸಂಬಂಧಿಕರು ಗೋಳಾಡುತ್ತಿದ್ದಾರೆ.
ಇದನ್ನೂ ಓದಿ: Oxygen Shortage| ಆಕ್ಸಿಜನ್ ಕೊರತೆಯಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಬಲಿ
Published On - 10:53 am, Mon, 26 April 21