ಸರ್ಕಾರ ಮೀಸಲಾತಿ ಪಟ್ಟಿಯನ್ನು ಸಲ್ಲಿಸಿದ ಬಳಿಕ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ: ಆಯುಕ್ತ
ಗ್ರಾಮ ಪಂಚಾಯತಿಗಳ ಅವಧಿ ಡಿಸೆಂಬರ್ ಗೆ ಕೊನೆಗೊಳ್ಳಲಿರುವಿದರಿಂದ ಅವುಗಳಿಗೂ ಚುನಾವಣೆ ನಡೆಸಬೇಕಿದೆ ಎಂದು ಸಂಗ್ರೇಷಿ ಹೇಳಿದರು. ಹಾಗೆಯೇ ಮೈಸೂರು, ದಾವಣಗೆರೆ, ಶಿವಮೊಗ್ಗ, ಮಂಗಳೂರು ಮತ್ತು ತುಮಕೂರು ನಗರಪಾಲಿಕೆಗಳಿಗೆ ಚುನಾವಣೆ ನಡೆಸಬೇಕಿದೆ, ಈ ಚುನಾವಣೆಗಳಲ್ಲಿ ಈವಿಎಂ ಬದಲು ಬ್ಯಾಲಟ್ ಪೇಪರ್ ಬಳಸುವ ಚಿಂತನೆ ಇದೆ, ಅದಿನ್ನೂ ಅಂತಿಮಗೊಂಡಿಲ್ಲ ಎಂದು ಆಯುಕ್ತ ಹೇಳಿದರು.
ಬೆಂಗಳೂರು, ಮಾರ್ಚ್ 26: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಾಜ್ಯ ಚುನಾವಣಾ ಆಯುಕ್ತ ಜಿಎಸ್ ಸಂಗ್ರೇಷಿ ಅವರು, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾಗಿದ್ದ ವ್ಯಾಜ್ಯವೊಂದು ಅಡ್ಡಿಯಾಗಿತ್ತು ಎಂದರು. ಈಗ ಕೇಸ್ ಡಿಸ್ಪೋಸ್ ಅಗಿದೆ ಮತ್ತು ಸರ್ಕಾರವು ಮೇ 31 ರ ಒಳಗಾಗಿ ಮಿಸಲಾತಿ ಪಟ್ಟಿಯನ್ನು ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ಹೇಳಿದೆ. ಪಟ್ಟಿ ಸಲ್ಲಿಕೆಯಾದ ಬಳಿಕ ಚುನಾವಣೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಮಾಡಿಕೊಳ್ಳಲು ಆಯೋಗಕ್ಕೆ ಎರಡು ತಿಂಗಳು ಸಮಯ ಬೇಕಾಗುತ್ತದೆ ಎಂದು ಆಯುಕ್ತ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
Latest Videos