ದೆಹಲಿ: ಹೆಸರು ಕಾಳು ಮತ್ತು ಉದ್ದನ್ನು ಎಂಎಸ್ಪಿಯಲ್ಲಿ ಖರೀದಿ ಮಾಡಬೇಕು ಅಂತ ರಾಜ್ಯದ ರೈತರು ಮನವಿ ಮಾಡಿದ್ದರು. 30 ಸಾವಿರ ಮಿಲಿಯನ್ ಮೆಟ್ರಿಕ್ ಟನ್ ಹೆಸರು ಮತ್ತು 10 ಸಾವಿರ ಮಿಲಿಯನ್ ಮೆಟ್ರಿಕ್ ಟನ್ ಉದ್ದನ್ನು ಎಂಎಸ್ಪಿಯಲ್ಲಿ ಖರೀದಿ ಮಾಡಲು ಕೇಂದ್ರ ಸರ್ಕಾರ ಅದೇಶ ನೀಡಿದೆ ಎಂದು ದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಯಾವಾಗ ಖರೀದಿ ಮಾಡಬೇಕು ಎನ್ನುವುದು ರಾಜ್ಯ ಸರ್ಕಾರ ನಿರ್ಧಾರ ಮಾಡಿದ ನಂತರ ಆಗುತ್ತದೆ. ಎರಡು ಬೆಳೆಗಳನ್ನು ಬೆಳೆಯುವ ರೈತರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವೆ ಹೇಳಿದರು.
ಎಂಎಸ್ಪಿಯಲ್ಲಿ ಖರೀದಿ ಮಾಡುವುದರಿಂದ ಮಾರ್ಕೆಟ್ ರೇಟ್ಗೆ ಅನುಗುಣವಾಗಿ ದರ ನಿಗದಿ ಆಗುತ್ತದೆ. ಕಬ್ಬನ್ನು ಎಥೆನಾಲ್ಗೆ ಹೆಚ್ಚು ಬಳಕೆ ಮಾಡಬೇಕು ಅಂತಲೂ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇದರಿಂದ ಪೆಟ್ರೋಲ್ ಆಮದಿನ ಮೇಲೆ ಅವಲಂಬನೆ ಮಾಡುವುದು ಕಡಿಮೆ ಆಗುತ್ತದೆ. ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡುವ ನಿರ್ಧಾರವನ್ನೂ ಕೇಂದ್ರ ಕೈಗೊಂಡಿದೆ. ಕಬ್ಬಿನ ಮೇಲಿನ ಎಫ್ಆರ್ಪಿಯನ್ನು ಹೆಚ್ಚಳ ಮಾಡಲಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಹಿಂದೆ ಒಂದು ಕ್ವಿಂಟಾಲ್ ಕಬ್ಬಿಗೆ ಎಫ್ಆರ್ಪಿಯನ್ನು (FRP) ಶೇ.10ರಷ್ಟು ಏರಿಕೆ ಮಾಡಲಾಗಿದೆ. ಈವರೆಗಿನ ಗರಿಷ್ಠ ಲಾಭಕರ ಬೆಲೆ 290 ರೂ. ಪ್ರತಿ ಕ್ವಿಂಟಲ್ಗೆ ಕಬ್ಬು ಬೆಳೆಗಾರರಿಗೆ ನೀಡಲು ಒಪ್ಪಿಗೆ ನೀಡಿದೆ. ಈ ತೀರ್ಮಾನದಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ ಲಾಭ ಸಿಗುತ್ತದೆ. 2021- 2022ರ ಸಾಲಿನಲ್ಲಿ ಕಬ್ಬು ಉತ್ಪಾದನಾ ವೆಚ್ಚವನ್ನು 155 ರೂ. ಎಂದು ತೀರ್ಮಾನಿಸಲಾಗಿದೆ. ಪ್ರತಿ ಕ್ವಿಂಟಾಲ್ಗೆ 290 ರೂ. ಕೊಡುವುದರಿಂದ ಶೇ.10ರಷ್ಟು ಚೇತರಿಕೆ ದರ ನೀಡಲಾಗುವುದು. ಒಟ್ಟಾರೆ ಉತ್ಪಾದನಾ ವೆಚ್ಚಕ್ಕಿಂತ ಶೇ.87.1ರಷ್ಟು ಹೆಚ್ಚುವರಿ ಬೆಲೆ ನಿಗದಿಯಾದಂತಿದೆ.
Protecting our farmers against the Economical Loss in Farming.
Thank you PM Sri @narendramodi Ji & Sri @nstomar Ji for approving the implementation of Price Support Scheme to procure, Green Gram&Black Gram in Karnataka.
This will greatly benefit our farmers.#AatmaNirbharKrishi pic.twitter.com/M4NaXXab86
— Shobha Karandlaje (@ShobhaBJP) August 25, 2021
ಇದನ್ನೂ ಓದಿ
ಸುಪ್ರೀಂಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರಾ ಕರ್ನಾಟಕ ಮೂಲದ ನ್ಯಾ. ಬಿ.ವಿ.ನಾಗರತ್ನ?
ಉಪ ರಾಷ್ಟ್ರಪತಿ ಕರ್ನಾಟಕ ಭೇಟಿ ಅಂತ್ಯ; ತಾವು ಹೇಳಿದ ಮಾತಿನಂತೆ ನಡೆದುಕೊಂಡ ಸಿಎಂ ಬಸವರಾಜ ಬೊಮ್ಮಾಯಿ!
(central government has instructed to buy Vigna Mungo and Mung Bean in MSP)
Published On - 1:00 pm, Thu, 26 August 21