ಉಪ ರಾಷ್ಟ್ರಪತಿ ಕರ್ನಾಟಕ ಭೇಟಿ ಅಂತ್ಯ; ತಾವು ಹೇಳಿದ ಮಾತಿನಂತೆ ನಡೆದುಕೊಂಡ ಸಿಎಂ ಬಸವರಾಜ ಬೊಮ್ಮಾಯಿ!

ಶಿಷ್ಟಾಚಾರದಂತೆ ಉಪ ರಾಷ್ಟ್ರಪತಿಯನ್ನು ಸ್ವಾಗಿತಿಸಿದ ಸಿಎಂ ಬೊಮ್ಮಾಯಿ ಹಳೆಯ ಶೈಲಿಯಲ್ಲಿ ಪೇಟ- ಗಂಧದ ಹಾರ ಹಾಕಿ ವೆಲ್ಕಂ ಹೇಳಿದ್ದರು. ಆದರೆ ಒಂದಷ್ಟು ಜನ ಅದಕ್ಕೆ ಆಕ್ಷೇಪ ಎತ್ತಿದರು. ನಮ್ಮದು ಗಂಧದ ನಾಡು, ಮೈಸೂರು ರಾಜರು ಆಳಿದ ನಾಡು. ಅದಕ್ಕೆ ತಕ್ಕಂತೆ ಪೇಟ ತೊಡಿಸಿ, ಗಂಧದ ಹಾರ ಹಾಕಿದ್ದು ಸರಿ. ಆದರೆ ತಾವೇ ತಂದಿದ್ದ ನೂತನ ಸಂಪ್ರದಾಯ ಎಲ್ಲಿ ಹೋಯಿತು ಎಂದು ಆಕ್ಷೇಪಣೆ ವ್ಯಕ್ತಪಡಿಸಿದ್ದರು.

ಉಪ ರಾಷ್ಟ್ರಪತಿ ಕರ್ನಾಟಕ ಭೇಟಿ ಅಂತ್ಯ; ತಾವು ಹೇಳಿದ ಮಾತಿನಂತೆ ನಡೆದುಕೊಂಡ ಸಿಎಂ ಬಸವರಾಜ ಬೊಮ್ಮಾಯಿ!
ಉಪ ರಾಷ್ಟ್ರಪತಿ ಕರ್ನಾಟಕ ಭೇಟಿ ಅಂತ್ಯ; ತಾವು ಹೇಳಿದ ಮಾತಿನಂತೆ ನಡೆದುಕೊಂಡ ಸಿಎಂ ಬೊಮ್ಮಾಯಿ!
TV9kannada Web Team

| Edited By: sadhu srinath

Aug 26, 2021 | 11:22 AM


ಬೆಂಗಳೂರು: ಹತ್ತು ದಿನಗಳ ಕರ್ನಾಟಕ ರಾಜ್ಯ ಪ್ರವಾಸ ಮುಗಿಸಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ನಿನ್ನೆ ದೆಹಲಿಗೆ ಹಿಂದಿರುಗಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುಧಾಕರ್​ ಅವರುಗಳು ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ಅವರನ್ನು ಬೀಳ್ಕೊಟ್ಟಿದ್ದಾರೆ.

ಆದರೆ ಇಲ್ಲಿನ ವಿಷಯ ಅದಲ್ಲ! ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುತ್ತಿದ್ದಂತೆ ಒಂದುಹೊಸ ಸಂಪ್ರದಾಯ ಹುಟ್ಟುಹಾಕಿದರು. ಏನೆಂದರೆ ಸಭೆ ಸಮಾರಂಭಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಯಾವುದೇ ವಿಐಪಿಗಳಿಗೆ ಹಾರತುರಾಯಿ ನೀಡಬೇಡಿ. ಅದರ ಬದಲು, ಒಂದು ಒಳ್ಳೆಯ ಪುಸ್ತಕ ನೀಡಿ ಸಾಕು ಎಂದು ಕರೆಕೊಟ್ಟಿದ್ದರು. ಸಿಎಂ ಬೊಮ್ಮಾಯಿ ಹೀಗೆ ಹೊಸ ಸಂಪ್ರದಾಯ ಹುಟ್ಟುಹಾಕಿದ್ದು ಅನೇಕರ ಪ್ರಶಂಸೆಗೆ ಪಾತ್ರವಾಯಿತು. ಅದೇ ವೇಳೆ ಹೂ ಬೆಳೆಗಾರರು, ಮಾರಾಟಗಾರರಿಂದ ವಿರೋಧವೂ ವ್ಯಕ್ತವಾಯಿತು ಅನ್ನೀ.

ಆದರೆ ಇಲ್ಲಿನ ವಿಷಯ ಅದಲ್ಲ! ಏನಂದ್ರೆ ಹಾರ ತುರಾಯಿ ವೆಲ್ಕಂ ಬೇಡ ಎಂದಿದ್ದ ಸಿಎಂ ಬೊಮ್ಮಾಯಿ 75ನೇ ಸ್ವಾತಂತ್ರ್ಯೋತ್ಸವದ ಮಾರನೆಯ ದಿನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 10 ದಿನಗಳ ಭೇಟಿಗೆಂದು ಬೆಂಗಳೂರಿಗೆ ಬಂದಿದ್ದರು. ಆ ವೇಳೆ ಶಿಷ್ಟಾಚಾರದಂತೆ ಉಪ ರಾಷ್ಟ್ರಪತಿಯನ್ನು ಸ್ವಾಗಿತಿಸಿದ ಸಿಎಂ ಬೊಮ್ಮಾಯಿ ಹಳೆಯ ಶೈಲಿಯಲ್ಲಿ ಪೇಟ- ಗಂಧದ ಹಾರ ಹಾಕಿ ವೆಲ್ಕಂ ಹೇಳಿದ್ದರು. ಆದರೆ ಒಂದಷ್ಟು ಜನ ಅದಕ್ಕೆ ಆಕ್ಷೇಪ ಎತ್ತಿದರು. ನಮ್ಮದು ಗಂಧದ ನಾಡು, ಮೈಸೂರು ರಾಜರು ಆಳಿದ ನಾಡು. ಅದಕ್ಕೆ ತಕ್ಕಂತೆ ಪೇಟ ತೊಡಿಸಿ, ಗಂಧದ ಹಾರ ಹಾಕಿದ್ದು ಸರಿ. ಆದರೆ ತಾವೇ ತಂದಿದ್ದ ನೂತನ ಸಂಪ್ರದಾಯ ಎಲ್ಲಿ ಹೋಯಿತು ಎಂದು ಆಕ್ಷೇಪಣೆ ವ್ಯಕ್ತಪಡಿಸಿದ್ದರು.

ಅದಕ್ಕೆ ಉತ್ತರವೆಂಬಂತೆ, ನಿನ್ನೆ ಹತ್ತು ದಿನಗಳ ಪ್ರವಾಸ ಮುಗಿಸಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ದೆಹಲಿಗೆ ತೆರಳುವಾಗ ಸಿಎಂ ಬೊಮ್ಮಾಯಿ ಹೆಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು. ಆದರೆ ಆ ವೇಳೆ ನಾಡಿನ ಜನರಲ್ಲಿ ಗೊಂದಲವುಂಡು ಮಾಡುವುದು ಬೇಡ ಎಂದು ಒಂದು ದಪ್ಪನೆಯ ಪುಸ್ತಕವನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಕೈಗಿತ್ತು, ವಿನಮ್ರವಾಗಿ ಬೀಳ್ಕೊಟ್ಟರು. ಅಲ್ಲಿಗೆ ತಾವೇ ಆಚರಣೆಗೆ ತಂದಿದ್ದ ಹಾರ ತುರಾಯಿ ಬದಲು ಪುಸ್ತಕ ನೀಡುವ ಸಂಪ್ರದಾಯವನ್ನು ಪಾಲಿಸಿದರು! ತನ್ಮೂಲಕ ತಾವು ಕೊಟ್ಟ ಮಾತಿಗೆ ಬದ್ಧವಾಗಿರುವುದಾಗಿ ತೋರಿಸಿಕೊಟ್ಟರು.

ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಾರ ಹಾಕಿ, ಪುಸ್ತಕ ನೀಡಿ ಸಿಎಂ ಸ್ವಾಗತ

(Karnataka CM Basavaraj Bommai sends off President M Venkaiah Naidu with a book but not flower bouquet)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada