Organ Transportation Guidelines: ಮಾನವ ಅಂಗಾಂಗ ಸುಲಭ ಸಾಗಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಮಾನವ ಅಂಗಾಂಗ ಸಾಗಣೆಯ ಸಮಯದಲ್ಲಾಗುವ ಕೆಲವು ತಪ್ಪುಗಳು ಮರುಕಳಿಸದಂತೆ ಗಮನವಹಿಸಲು ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ವಿಮಾನವಿರಲಿ, ರೈಲಿರಲಿ, ಆಂಬ್ಯುಲೆನ್ಸ್​ ಇರಲಿ ಈ ಕೆಲವು ನಿಯಮಗಳು ಅಪ್ಲೈ ಆಗುವುದು.

Organ Transportation Guidelines: ಮಾನವ ಅಂಗಾಂಗ ಸುಲಭ ಸಾಗಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಅಂಗಾಂಗಗಳು
Image Credit source: Mid Day

Updated on: Aug 05, 2024 | 10:30 AM

ಮೊದಲ ಬಾರಿಗೆ ಕೇಂದ್ರ ಆರೋಗ್ಯ ಸಚಿವಾಲಯವು ವಾಯು, ರಸ್ತೆ, ರೈಲ್ವೆ ಹಾಗೂ ಜಲ ಮಾರ್ಗಗಳ ಮೂಲಕ ಮಾನವ ಅಂಗಾಂಗ ಸಾಗಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅಂಗಾಂಗಗಳ ಸಾಗಣೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಅಮೂಲ್ಯವಾದ ಅಂಗಗಳ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ.

‘ಅಂಗಾಂಗ ಕಸಿಗಾಗಿ ಕಾಯುತ್ತಿರುವ ಅಸಂಖ್ಯಾತ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತಿದ್ದೇವೆ. ಈ ಮಾರ್ಗಸೂಚಿಗಳು ದೇಶಾದ್ಯಂತ ಅಂಗಾಂಗ ಮರುಪಡೆಯುವಿಕೆ ಮತ್ತು ಕಸಿ ಸಂಸ್ಥೆಗಳಿಗೆ ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಖಷಿತಪಡಿಸಿಕೊಳ್ಳಲು ಮಾರ್ಗಸೂಚಿಯಾಗಿದೆ.

ವಾಸ್ತವವಾಗಿ ಅಂಗಾಂಗ ದಾನಿ ಹಾಗೂ ಅಂಗವನ್ನು ಸ್ವೀಕರಿಸುವವರು ಇಬ್ಬರೂ ಒಂದೇ ನಗರದೊಳಗೆ ಅಥವಾ ವಿವಿಧ ನಗರಗಳಲ್ಲಿ ವಿವಿಧ ಆಸ್ಪತ್ರೆಗಳಲ್ಲಿದ್ದಾಗ , ಆಸ್ಪತ್ರೆಗಳ ನಡುವೆ ಜೀವಂತ ಅಂಗವನ್ನು ಸಾಗಿಸಬೇಕಾಗುತ್ತದೆ. ಆದ್ದರಿಂದ ಕೆಲವು ನಿಯಮಗಳ ಅಗತ್ಯವಿರುತ್ತದೆ.

ಮತ್ತಷ್ಟು ಓದಿ: Organ Donation: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

ವಿಮಾನದಲ್ಲಿ ಅಂಗಾಂಗಗಳನ್ನು ಸಾಗಿಸುವುದಾದರೆ ಕ್ಯಾಪ್ಟರ್​ ವಿಮಾನ ಹಾರಾಟದ ಸಮಯದಲ್ಲಿ ಈ ವಿಚಾರವನ್ನು ಎಲ್ಲರಿಗ ತಿಳಿಯುವಂತೆ ಘೋಷಿಸುವುದು. ಅಂಗಾಂಗವಿರುವ ಬಾಕ್ಸ್​ಗಳನ್ನು ಆಂಬ್ಯುಲೆನ್ಸ್​ಗೆ ಕೊಂಡೊಯ್ಯಲು ಏರ್​ಪೋರ್ಟ್​ ಮತ್ತು ಏರ್​ಲೈನ್ಸ್ ಸಿಬ್ಬಂದಿ ಟ್ರಾಲಿಗಳ ವ್ಯವಸ್ಥೆ ಮಾಡುತ್ತಾರೆ. ಯಾವುದೇ ತೊಂದರೆಯಿಲ್ಲದೆ ಹೊರಗೆ ತರಲು ಸಹಾಯವಾಗುತ್ತದೆ.
ಹಸಿರು ಕಾರಿಡಾರ್​ಗೂ ವ್ಯವಸ್ಥೆ

ಎಸ್​ಒಪಿ ಪ್ರಕಾರ, ಆಂಬ್ಯುಲೆನ್ಸ್​ ಮತ್ತು ಇತರೆ ವಾಹನಗಳ ಮೂಲಕ ಅಂಗಾಂಗಗಳನ್ನು ಸಾಗಿಸಲು ಅನುಕೂಲವಾಗುವಂತೆ ನಿರ್ದಿಷ್ಟ ಅಧಿಕಾರಿಗಳು ಅಥವಾ ಏಜೆನ್ಸಿಗಳ ಮನವಿ ಮೇರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಯನ್ನೂ ನೇಮಿಸಲಾಗುವುದು.

ಅಂಗಾಂಗ ವರ್ಗಾವಣೆಗೆ ಸಂಬಂಧಿಸಿದಂತೆ ಮೆಟ್ರೋ ಭದ್ರತಾ ಸಿಬ್ಬಂದಿ ಮೆಟ್ರೋ ನಿಲ್ದಾಣಕ್ಕೆ ಬರುವವರೆಗೆ ಅಂಗಾಂಗ ಪೆಟ್ಟಿಗೆಯನ್ನು ಹೊತ್ತೊಯ್ಯುವ ಕ್ಲಿನಿಕಲ್ ತಂಡದೊಂದಿಗೆ ಇರಬೇಕು. ಭದ್ರತಾ ತಪಾಸಣೆಯಲ್ಲಿ ವಿಳಂಬವನ್ನು ತಪ್ಪಿಸಲು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 10:25 am, Mon, 5 August 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us