ಬಿಗ್​ ರಿಲೀಫ್! EMI ಮೇಲಿನ ಚಕ್ರಬಡ್ಡಿ ಮನ್ನಾಗೆ ಕೇಂದ್ರ ಸರ್ಕಾರ ಶಿಫಾರಸ್ಸು

ಬೆಂಗಳೂರು: ಕೊರೊನಾ ವೇಳೆ ವಿಧಿಸಿದ್ದ ಬಡ್ಡಿಯ ಮೇಲಿನ ಬಡ್ಡಿ ಮನ್ನಾಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಗ್ರಾಹಕರು, ಎಂಎಸ್​ಎಂಇ ವಲಯಕ್ಕೆ ಕೇಂದ್ರದಿಂದ ಬಿಗ್​ ರಿಲೀಫ್​ ಸಿಕ್ಕಂತಾಗಿದೆ. ಇದರಿಂದ ರೂ 2 ಕೋಟಿವರೆಗಿನ ಸಾಲದ ಚಕ್ರಬಡ್ಡಿ ಮನ್ನಾ ಆಗಲಿದೆ. ಸಾಲ ಮರುಪಾವತಿ ಮಾಡಿರುವವರಿಗೂ ಕೇಂದ್ರದಿಂದ ರಿಲೀಫ್ ಸಿಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಬಗ್ಗೆ ಸುಪ್ರೀಂಕೋರ್ಟ್​​ಗೆ ಅಫಿಡವಿಟ್​ ಸಲ್ಲಿಸಿದೆ. ಎಂಎಸ್​ಎಂಇ, ಶೈಕ್ಷಣಿಕ ಸಾಲ, ಗೃಹ ಸಾಲ, ವಾಹನ ಸಾಲ, ಕ್ರೆಡಿಟ್​ ಕಾರ್ಡ್​ ಬಿಲ್, ಗೃಹೋಪಯೋಗಿ ವಸ್ತು ಕೊಳ್ಳಲು ವೈಯಕ್ತಿಕ […]

ಬಿಗ್​ ರಿಲೀಫ್! EMI ಮೇಲಿನ ಚಕ್ರಬಡ್ಡಿ ಮನ್ನಾಗೆ ಕೇಂದ್ರ ಸರ್ಕಾರ ಶಿಫಾರಸ್ಸು
ಶೇ 16,000ದಷ್ಟು ಏರಿಕೆ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Oct 03, 2020 | 9:36 AM

ಬೆಂಗಳೂರು: ಕೊರೊನಾ ವೇಳೆ ವಿಧಿಸಿದ್ದ ಬಡ್ಡಿಯ ಮೇಲಿನ ಬಡ್ಡಿ ಮನ್ನಾಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಗ್ರಾಹಕರು, ಎಂಎಸ್​ಎಂಇ ವಲಯಕ್ಕೆ ಕೇಂದ್ರದಿಂದ ಬಿಗ್​ ರಿಲೀಫ್​ ಸಿಕ್ಕಂತಾಗಿದೆ.

ಇದರಿಂದ ರೂ 2 ಕೋಟಿವರೆಗಿನ ಸಾಲದ ಚಕ್ರಬಡ್ಡಿ ಮನ್ನಾ ಆಗಲಿದೆ. ಸಾಲ ಮರುಪಾವತಿ ಮಾಡಿರುವವರಿಗೂ ಕೇಂದ್ರದಿಂದ ರಿಲೀಫ್ ಸಿಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ಬಗ್ಗೆ ಸುಪ್ರೀಂಕೋರ್ಟ್​​ಗೆ ಅಫಿಡವಿಟ್​ ಸಲ್ಲಿಸಿದೆ.

ಎಂಎಸ್​ಎಂಇ, ಶೈಕ್ಷಣಿಕ ಸಾಲ, ಗೃಹ ಸಾಲ, ವಾಹನ ಸಾಲ, ಕ್ರೆಡಿಟ್​ ಕಾರ್ಡ್​ ಬಿಲ್, ಗೃಹೋಪಯೋಗಿ ವಸ್ತು ಕೊಳ್ಳಲು ವೈಯಕ್ತಿಕ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಲು ನಿರ್ಧರಿಸಲಾಗಿದೆ.

Published On - 9:30 am, Sat, 3 October 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us