ಓಟಿಟಿ ವೇದಿಕೆಗಳಿಗೆ ನಿಯಂತ್ರಣ ವಿಧಿಸುವ ಯೋಚನೆ ಸರ್ಕಾರಕ್ಕಿದೆ: ಕೇಂದ್ರ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Feb 16, 2021 | 6:32 PM

Regulate OTT: ಕೇಂದ್ರ ಸರ್ಕಾರಕ್ಕೆ ಓಟಿಟಿ ವೇದಿಕೆಗಳನ್ನು ನಿಯಂತ್ರಿಸಲು ನಿಯಮಗಳನ್ನು ವಿಧಿಸುವ ಯೋಚನೆಯಿದೆ ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರದ ಪ್ರತಿನಿಧಿ ಸಾಲಿಟೇಟರ್ ಜನರಲ್ ಸಂಜಯ್ ಜೈನ್ ತಿಳಿಸಿದ್ದಾರೆ.

ಓಟಿಟಿ ವೇದಿಕೆಗಳಿಗೆ ನಿಯಂತ್ರಣ ವಿಧಿಸುವ ಯೋಚನೆ ಸರ್ಕಾರಕ್ಕಿದೆ: ಕೇಂದ್ರ ಸರ್ಕಾರ
ಓಟಿಟಿ ವೇದಿಕೆಗಳಿಗೆ ನಿರ್ಬಂಧ ವಿಧಿಸುವ ಯೋಚನೆ ಸರ್ಕಾರಕ್ಕಿದೆ; ಕೇಂದ್ರ ಸರ್ಕಾರ
Follow us on

ದೆಹಲಿ: ಓಟಿಟಿ ವೇದಿಕೆಗಳ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಲು ಯೋಚಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಓಟಿಟಿ ವೇದಿಕೆಗಳ ಕುರಿತು ಕೇಂದ್ರ ಸರ್ಕಾರದ ನಿಲುವು ತಿಳಿಸಲು ಸೂಚಿಸಿದ್ದ ಸುಪ್ರೀಂ ಕೋರ್ಟ್​ನ ಮುಖ್ಯ ನಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎ. ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಹ್ಮಣ್ಯನ್ ಅವರಿದ್ದ ತ್ರಿಸದಸ್ಯ ಪೀಠಕ್ಕೆ ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸಿದೆ.

ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೋರ್ಟ್​ನಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಟೇಟರ್ ಜನರಲ್ ಸಂಜಯ್ ಜೈನ್ ಈ ವಿಷಯ ತಿಳಿಸಿದ್ದು, ಸರ್ಕಾರಕ್ಕೆ ಓಟಿಟಿ ವೇದಿಕೆಗಳನ್ನು ನಿಯಂತ್ರಿಸಲು ನಿಯಮಗಳನ್ನು ವಿಧಿಸುವ ಯೋಚನೆಯಿದೆ ಎಂದು ತಿಳಿಸಿದ್ದಾರೆ. ಅಲ್ಲದೇ 6 ವಾರಗಳ ಒಳಗೆ ತನ್ನ ನಿಲುವನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.

ವಕೀಲ ಶಶಾಂಕ್ ಶೇಖರ್ ಮತ್ತು ಅಪೂರ್ವಾ ಅರ್ಹಿತಾ ಅವರುಗಳು ಸಲ್ಲಿಸಿದ್ದ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಓಟಿಟಿ ವೇದಿಕೆಗಳ ಮೇಲೆ ನಿರ್ಬಂಧ ಹೇರಬೇಕೆಂದು ಅರ್ಜಿ ಸಲ್ಲಿಸಿದ್ದರು.  ಕಳೆದ ವರ್ಷ ಅಕ್ಟೋಬರ್ 15ಕ್ಕೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಇಂಟರ್​ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾಗೆ ನೋಟಿಸ್ ನೀಡಿತ್ತು.

ಇದನ್ನೂ ಓದಿ:   OTT Platforms ‘ಮುಚ್ಚುಮರೆ ಇಲ್ಲದ’ ಆನ್​ಲೈನ್ ವೇದಿಕೆಗಳಿಗೆ ಮೂಗುದಾರ ಹಾಕಬೇಕಾ?!

ಅರ್ಜಿಯಲ್ಲಿ ಏನಿದೆ? 
ದೇಶದಲ್ಲಿ ಸಿನಿಮಾ ಥಿಯೇಟರ್ ಶೀಘ್ರವೇ ತೆರೆಯುವ ಸಾಧ್ಯತೆ ಇಲ್ಲ, ಓಟಿಟಿ ಅಥವಾ ಇತರ ಡಿಜಿಟಲ್ ಮೀಡಿಯಾ ವೇದಿಕೆಗಳಲ್ಲಿ ಸಿನಿಮಾ ನಿರ್ಮಾಪಕರು ಮತ್ತು ಕಲಾವಿದರು ತಮ್ಮ ಕಲೆಯನ್ನು ಬಿಡುಗಡೆ ಮಾಡುತ್ತಾರೆ. ಸೆನ್ಸಾರ್ ಮಂಡಳಿಯಿಂದ ಸಿನಿಮಾ ಅಥವಾ ಸರಣಿಗಾಗಿ ಪ್ರಮಾಣಪತ್ರವನ್ನು ಪಡೆಯಬೇಕು ಎಂಬುದರ ಬಗ್ಗೆ ಅವರು ಯೋಚಿಸುವುದಿಲ್ಲ. ಆದಾಗ್ಯೂ, ಡಿಜಿಟಲ್ ವಿಷಯದ ಮೇಲೆ ನಿಗಾ ಇರಿಸುವ ಮತ್ತು ನಿರ್ವಹಿಸುವ ಸಂಸ್ಥೆ ಅಥವಾ ಯಾವುದೇ ಕಾನೂನು ದೇಶದಲ್ಲಿ ಇಲ್ಲ. ಯಾವುದೇ ರೀತಿಯ ಫಿಲ್ಟರ್ ಅಥವಾ ಸ್ಕ್ರೀನಿಂಗ್ ಇಲ್ಲದೆಯೇ ಈ ಮಾಧ್ಯಮಗಳು ಜನರಲ್ಲಿಗೆ ತಲುಪುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.