AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

OTT Platforms ‘ಮುಚ್ಚುಮರೆ ಇಲ್ಲದ’ ಆನ್​ಲೈನ್ ವೇದಿಕೆಗಳಿಗೆ ಮೂಗುದಾರ ಹಾಕಬೇಕಾ?!

OTT ವೇದಿಕೆಗಳಿಗೆ ನಿರ್ಬಂಧ ಹೇರುವ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ನೆಟ್​ಫ್ಲಿಕ್ಸ್​ನ A Suitable Boy ಎಂಬ ಸರಣಿಯು ವಿವಾದದ ಅಲೆ ಎಬ್ಬಿಸಿದೆ. ಈ ಬಗ್ಗೆ ತಜ್ಞರು ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ.

OTT Platforms ‘ಮುಚ್ಚುಮರೆ ಇಲ್ಲದ’ ಆನ್​ಲೈನ್ ವೇದಿಕೆಗಳಿಗೆ ಮೂಗುದಾರ ಹಾಕಬೇಕಾ?!
TV9 Web
| Edited By: |

Updated on:Apr 06, 2022 | 8:57 PM

Share

ಆನ್​ಲೈನ್ ಪ್ಲಾಟ್​ಫಾರಂ ವಿಚಾರಗಳ ಬಗ್ಗೆ ಕಳೆದ ಕೆಲವು ವಾರಗಳಿಂದ ಜೋರಾದ ಚರ್ಚೆಗಳು ನಡೆಯುತ್ತಿವೆ. ಅಶ್ಲೀಲತೆ, ಕ್ರೌರ್ಯ, ಕೆಟ್ಟ ಪದಬಳಕೆ ಇಂತಹ ವಿಷಯಗಳಿಂದ ಆಕ್ಷೇಪಾರ್ಹವಾಗಿ ಕಂಡಿರುವ ಆನ್​ಲೈನ್ ವೇದಿಕೆಗಳಿಗೆ ಕೇಂದ್ರವು ನಿಬಂಧ ಹೇರುವ ಆಲೋಚನೆಯಲ್ಲಿದೆ. ಈಗಾಗಲೇ ಸುಪ್ರೀಂ ಕೋರ್ಟ್​ ಮತ್ತು ಹೈಕೋರ್ಟ್​ನಲ್ಲಿ ಈ ಬಗ್ಗೆ ಹಲವು ಕೇಸ್​ಗಳ ವಿಚಾರಣೆ ನಡೆಯುತ್ತಿದೆ. ಭಾರತದಲ್ಲಿ ಒಟ್ಟು ಸುಮಾರು ಹದಿನೈದು OTT ವೇದಿಕೆಗಳಿದ್ದು, ಈವರೆಗೆ ಯಾವುದೇ ನಿರ್ಬಂಧಗಳನ್ನು ಅವು ಹೊಂದಿಲ್ಲ.

ಪ್ರಸ್ತುತ A Suitable Boy ಎಂಬ ನೆಟ್​ಫ್ಲಿಕ್ಸ್ ಸರಣಿಯ ಕಿಸ್ಸಿಂಗ್ ದೃಶ್ಯ ಹೊಸ ವಿವಾದ ಸೃಷ್ಟಿಸಿದ್ದು, ಬ್ಯಾನ್ ನೆಟ್​ಫ್ಲಿಕ್ಸ್ ಎಂಬ ಅಭಿಯಾನವೇ ಶುರುವಾಗುವಂತೆ ಮಾಡಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಆನ್​ಲೈನ್ ವೇದಿಕೆಗಳ ನಿರ್ಬಂಧ ವಿಚಾರಕ್ಕೆ ಇದೀಗ ತುಪ್ಪ ಸುರಿದಂತಾಗಿದೆ.

ತಜ್ಞರು ಏನು ಹೇಳುತ್ತಾರೆ? ಈ ಬಗ್ಗೆ ಟಿವಿ9 ಫೇಸ್ಬುಕ್ ನೇರಪ್ರಸಾರ ಕಾಯರ್ಕ್ರಮದಲ್ಲಿ ಮಾತನಾಡಿರುವ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ, ಅಜಿತ್ ಅಚ್ಚಪ್ಪ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಮೊದಲು ತಾವು ಸ್ವಯಂ ನಿರ್ಬಂಧ ಹೇರಿಕೊಳ್ಳುವ ಬಗ್ಗೆ ಇಂಟರ್ನೆಟ್ ಹಾಗೂ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳಿತ್ತು.

ಆದರೆ ಸ್ವಯಂ ನಿಯಂತ್ರಣವನ್ನು ಅವುಗಳು ಕಳೆದುಕೊಂಡರೆ ಸರ್ಕಾರ ಮಧ್ಯಪ್ರವೇಶಿಸಿ ನಿರ್ಬಂಧ ಹೇರುವುದು ಅನಿವಾರ್ಯವಾಗುತ್ತದೆ ಎಂದ ಅವರು ಈಗೀಗ ಮಕ್ಕಳೂ ಮೊಬೈಲ್ ಹಿಡಿಯುತ್ತಿದ್ದಾರೆ, ಅವರನ್ನು ನಾವು ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಈ ಬಗ್ಗೆ ಸಚಿವರು, ಆಡಳಿತ ವರ್ಗದವರು ಚರ್ಚಿಸಿ ಕ್ರಮ ಕೈಗೊಳ್ಳಬೇಕು. ತಜ್ಞರ ಸಮಿತಿಯನ್ನು ರಚಿಸಬೇಕು ಎಂಬ ಆಶಯ ವ್ಯಕ್ತಪಡಿಸಿ, ಸರ್ಕಾರಕ್ಕೆ ಹೆಚ್ಚು ಅಧಿಕಾರ ಕೊಟ್ಟು ಪ್ರಜಾಪ್ರಭುತ್ವಕ್ಕೆ ತೊಂದರೆ ಆದಂತೆಯೂ ಆಗಬಾರದು ಎಂದಿದ್ದಾರೆ.

ಪರಿಣಾಮಕಾರಿ ನಿರ್ಬಂಧ ಬೇಕು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ OTT ವೇದಿಕೆಗಳಿಗೆ ಪರಿಣಾಮಕಾರಿ ನಿರ್ಬಂಧಗಳನ್ನು ಅಳವಡಿಸಬೇಕೆಂದು ಹೇಳಿದ ಅಜಿತ್, ಸಿನಿಮಾಟೊಗ್ರಫಿ ಆಕ್ಟ್ ಅನ್ವಯ U, UA, A ಎಂಬ ಪ್ರಮಾಣ ಪತ್ರ ನೀಡಲಾಗುತ್ತದೆ. ಅದರಂತೆ OTT ವೇದಿಕೆಗೂ ನಿರ್ಬಂಧ ಬೇಕು ಎಂದಿದ್ದಾರೆ. OTT ವೇದಿಕೆಗಳಲ್ಲಿ 13+, 18+ ಎಂಬ ವಿಭಾಗ ಇದ್ದರೂ ಆ ನಿರ್ಬಂಧ ಪ್ರಾಯೋಗಿಕವಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಪ್ರತಿಭೆಗಳಿಗೆ ವೇದಿಕೆ ಕೊಟ್ಟಿವೆ OTT ಹೊಸ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ಒದಗಿಸಿಕೊಟ್ಟಿದೆ. ಆದರೆ ಅದನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದು ನಮಗೆ ಬಿಟ್ಟ ವಿಚಾರ. ಸ್ವಾತಂತ್ರ್ಯ ಇದೆ ಎಂದು ದುರ್ಬಳಕೆ ಮಾಡಬಾರದು. ಮನರಂಜನೆಯ ಜೊತೆಗೆ ಜನರಿಗೆ ಒಳ್ಳೆಯ ಸಂದೇಶವನ್ನು ಕೊಡಬೇಕು ಎಂದು ಮತ್ತೋರ್ವ ಅತಿಥಿ ನಟಿ ಭವ್ಯಾ ತಿಳಿಸಿದ್ದಾರೆ.

Published On - 7:02 pm, Wed, 25 November 20

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ