Delhi Chalo | ಡಿ.30ರಂದು ರೈತ ಒಕ್ಕೂಟಗಳ ಜೊತೆ ಸಭೆ ನಡೆಸಲಿದೆ ಕೇಂದ್ರ
ಡಿಸೆಂಬರ್ 29ರ ಬದಲಿಗೆ ಡಿಸೆಂಬರ್ 30ರಂದು ರೈತ ಒಕ್ಕೂಟಗಳ ಜೊತೆ ಕೇಂದ್ರ ಸರ್ಕಾರ ಸಭೆ ನಡೆಸಲಿದೆ. ಸಭೆಯಲ್ಲಿ ಪಾಲ್ಗೊಳ್ಳಲು 40 ರೈತ ಒಕ್ಕೂಟಗಳಿಗೆ ಸರ್ಕಾರ ಆಹ್ವಾನ ನೀಡಿದೆ.
ದೆಹಲಿ: ರೈತ ನಾಯಕರ ಜೊತೆ ಡಿ.30ರಂದು ಮಧ್ಯಾಹ್ನ 2 ಗಂಟೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಲಿದೆ. ಈ ಮೊದಲು ಡಿಸೆಂಬರ್ 29ರಂದು ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈ ದಿನಾಂಕವನ್ನು ಒಂದು ದಿನದ ಮಟ್ಟಿಗೆ ಮುಂದೂಡಿರುವ ಕೇಂದ್ರ ಸರ್ಕಾರ ಡಿಸೆಂಬರ್ 30 ರಂದು ಸಭೆ ನಡೆಸಲಿದೆ.
ಸಭೆಯಲ್ಲಿ ಪಾಲ್ಗೊಳ್ಳಲು 40 ರೈತ ಒಕ್ಕೂಟಗಳಿಗೆ ಆಹ್ವಾನ ನೀಡಿದೆ. ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದ್ದರೂ, ಯಾವುದೇ ಸಭೆ ಯಶ ಕಂಡಿಲ್ಲ.
#FarmLaws: Central Government calls farmers for meeting on 30th December, 2pm at Vigyan Bhawan in Delhi pic.twitter.com/VqFxj9thZF
— ANI (@ANI) December 28, 2020
ನಿರಂಕಾರಿ ಮೈದಾನವೀಗ ‘ಕಿಸಾನ್ ಪುರ’! Delhi Chalo ಚಳುವಳಿಕಾರರಿಂದ ಮರು ನಾಮಕರಣ