ತಿರುವನಂತಪುರಂ: ಕೇರಳದ ಸೆಂಟ್ರಲ್ ಯುನಿವರ್ಸಿಟಿ (Central University of Kerala) ತನ್ನ ಅಧ್ಯಾಪಕರು ಮತ್ತು ಸಿಬ್ಬಂದಿಗೆ ದೇಶ ವಿರೋಧಿ ಮತ್ತು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆಗಳು ಅಥವಾ ಉಪನ್ಯಾಸಗಳನ್ನು ನೀಡದಂತೆ ಆದೇಶಿಸಿದೆ. ರಿಜಿಸ್ಟ್ರಾರ್ ರಾಜೇಂದ್ರ ಪಿಲಂಕಟ್ಟಾ ಹೊರಡಿಸಿದ ಸುತ್ತೋಲೆಯಲ್ಲಿ ವಿಶ್ವವಿದ್ಯಾಲಯವು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವವರ ವಿರುದ್ಧ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಸೆಪ್ಟೆಂಬರ್ 2 ರಂದು ಹೊರಡಿಸಿದ ಸುತ್ತೋಲೆ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಿಲ್ಬರ್ಟ್ ಸೆಬಾಸ್ಟಿಯನ್ ಅವರನ್ನು ಅಮಾನತುಗೊಳಿಸಿದ ಭಾಗವಾಗಿದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
ಏಪ್ರಿಲ್ 19 ರಂದು “ಫ್ಯಾಸಿಸಂ ಮತ್ತು ನಾಜಿಸಂ” ಕುರಿತು ಮೊದಲ ವರ್ಷದ ಎಂಎ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಾಗ ಗಿಲ್ಬರ್ಟ್ ಸಂಘ ಪರಿವಾರದ ಸಂಘಟನೆಗಳು ಮತ್ತು ನರೇಂದ್ರ ಮೋದಿ ಸರ್ಕಾರವನ್ನು ಮೂಲ ಫ್ಯಾಸಿಸ್ಟ್ ಎಂದು ವಿವರಿಸಿದ್ದರು. ಕೊವಿಡ್ -19 ಲಸಿಕೆಗಳನ್ನು ರಫ್ತು ಮಾಡುವ ಕೇಂದ್ರದ ನಿರ್ಧಾರವನ್ನು ಅವರು ಟೀಕಿಸಿದ್ದರು, ಇದನ್ನು ದೇಶಭಕ್ತಿಯಲ್ಲ ಎಂದು ಕರೆದಿದ್ದರು.
ವಿಶ್ವವಿದ್ಯಾಲಯವು ಈ ಬಗ್ಗೆ ತನಿಖೆ ನಡೆಸಲು ವಿಚಾರಣಾ ಸಮಿತಿಯನ್ನು ರಚಿಸಿ ವಿವರಣೆಯನ್ನು ಕೋರಿತು. ನಂತರ ಗಿಲ್ಬರ್ಟ್‌ನನ್ನು ಅಮಾನತುಗೊಳಿಸಲಾಯಿತು. ಗಿಲ್ಬರ್ಟ್ ವಿವರಣೆ ನೀಡಿದ ನಂತರ ಅವರನ್ನು ಜೂನ್ 10 ರಂದು ಹಿಂತೆಗೆದುಕೊಳ್ಳಲಾಗಿತ್ತು.
ಜೂನ್ 24 ರಂದು ಸಭೆ ಸೇರಿದ್ದ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯು ಗಿಲ್ಬರ್ಟ್ ಹೇಳಿಕೆಗಳನ್ನು ದೇಶ ವಿರೋಧಿ ಎಂದು ಕರೆದಿದೆ. ಕೌನ್ಸಿಲ್ ಸದಸ್ಯರು ಉಪಕುಲಪತಿ ಪ್ರೊ.ಎಚ್. ವೆಂಕಟೇಶ್ವರ್ಲು ಅವರಿಗೆ ಸುತ್ತೋಲೆ ಹೊರಡಿಸಿ, ಅಧ್ಯಾಪಕರು ಮತ್ತು ಸಿಬ್ಬಂದಿಗೆ ದೇಶವಿರೋಧಿ ಹೇಳಿಕೆಗಳು ಅಥವಾ ಉಪನ್ಯಾಸಗಳನ್ನು ಮಾಡದಂತೆ ದೂರವಿರಲು ಕೇಳಿದರು. ಸೆಪ್ಟೆಂಬರ್ 2 ರ ಸುತ್ತೋಲೆ ಈ ನಿರ್ದೇಶನದ ಭಾಗವಾಗಿದೆ.
“ಗಿಲ್ಬರ್ಟ್ ವಿಷಾದ ಪತ್ರವನ್ನು ನೀಡಿದ್ದರು. ತರಗತಿಯಲ್ಲಿ ಮಾಡಿದ ಮಾತುಗಳನ್ನು ಹಿಂತೆಗೆದುಕೊಂಡರು. ಮತ್ತು ಮುಂದೆ ಇದೇ ತಪ್ಪು ಮರುಕಳಿಸದಂತೆ ಭರವಸೆ ನೀಡಿದ್ದಾರೆ ಎಂದು ಕೌನ್ಸಿಲ್ ಮಿನಿಟ್ಸ್ ನಲ್ಲಿ ಬರೆದಿದ್ದು ಮೂಲಗಳ ಪ್ರಕಾರ ಗಿಲ್ಬರ್ಟ್ ಕೌನ್ಸಿಲ್ ಮಿನಿಟ್ಸ್ ವಿರುದ್ಧ ವಿಸಿಗೆ ಪತ್ರ ಬರೆದಿದ್ದಾರೆ.
ತನ್ನ ಅಮಾನತು ಹಿಂಪಡೆಯುವುದಾಗಿ ಹೇಳಿರುವ ವಿಷ.ತಪ್ಪಾಗಿದೆ ಮತ್ತು ನನಗೆ ಅದುಸ್ವೀ ಕಾರಾರ್ಹವಲ್ಲ ಗಿಲ್ಬರ್ಟ್ ವಿಸಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. “ನಾನು ಪತ್ರದಲ್ಲಿ ವ್ಯಕ್ತಪಡಿಸಿದ್ದು ಸ್ಪಷ್ಟವಾಗಿ ತರಗತಿಯಲ್ಲಿ ನನ್ನ ಅಭಿಪ್ರಾಯಗಳನ್ನು ಇತರರು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ವಿಷಾದವನ್ನು ಒಪ್ಪಿಕೊಳ್ಳದಿರುವುದು. ನಾನು ಹಿಂತೆಗೆದುಕೊಂಡದ್ದು ಯಾವುದೇ ಪ್ರಾಸಂಗಿಕ ಟೀಕೆಗಳನ್ನು ಎಂದಿದ್ದಾರೆ ಗಿಲ್ಬರ್ಟ್. ಈ ಸುತ್ತೋಲೆ ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಸಮುದಾಯದ ನಡುವೆ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: Nipah Virus: ಅಕ್ಟೋಬರ್ವರೆಗೆ ಕೇರಳದಿಂದ ಕರ್ನಾಟಕಕ್ಕೆ ಆಗಮಿಸಬೇಡಿ; ಮನವಿಪೂರ್ವಕ ಸೂಚನೆ ನೀಡಿದ ಕರ್ನಾಟಕ ಸರ್ಕಾರ
(Central University of Kerala has asked its faculty members No anti-national lecture or provoking statements )