AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajya Sabha Bypolls: ರಾಜ್ಯಸಭೆಯ 7 ಸ್ಥಾನಕ್ಕೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ ಮತ್ತು ಅಸ್ಸಾಂ ನಿಂದ ಆಯ್ಕೆಯಾಗಿದ್ದ ರಾಜ್ಯ ಸಭಾ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಖಾಲಿ ಆಗಿದ್ದರೆ, ಮಹಾರಾಷ್ಟ್ರದಲ್ಲಿ, ರಾಜ್ಯಸಭಾ ಸದಸ್ಯ ರಾಜೀವ್ ಶಂಕರರಾವ್ ಸತಾವ್ ಮೃತರಾದ ಹಿನ್ನೆಲೆಯಲ್ಲಿ ಖಾಲಿಯಾಗಿತ್ತು.

Rajya Sabha Bypolls: ರಾಜ್ಯಸಭೆಯ 7 ಸ್ಥಾನಕ್ಕೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ
ರಾಜ್ಯಸಭೆ
TV9 Web
| Edited By: |

Updated on:Sep 09, 2021 | 1:12 PM

Share

ರಾಜ್ಯಸಭೆಯಲ್ಲಿ ಖಾಲಿ ಇರುವ 6 ಸ್ಥಾನಗಳಿಗೆ ಅಕ್ಟೋಬರ್​ 4ರಂದು ಉಪಚುನಾವಣೆ (Rajya Sabha Bypolls) ನಡೆಸಲಾಗುವುದು ಎಂದು ಇಂದು ಚುನಾವಣಾ ಆಯೋಗ (Election Commission) ಘೋಷಿಸಿದೆ.  ತಮಿಳುನಾಡಿನ ಎರಡು ರಾಜ್ಯಸಭಾ ಸ್ಥಾನ, ಪಶ್ಚಿಮ ಬಂಗಾಳದ ಒಂದು, ಅಸ್ಸಾಂ, ಮಧ್ಯಪ್ರದೇಶ, ಪುದುಚೇರಿ ಮತ್ತು ಮಹಾರಾಷ್ಟ್ರಗಳ ತಲಾ ಒಂದು ಸೀಟ್​ಗಾಗಿ ಅಕ್ಟೋಬರ್​ 4ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.  ಇದರಲ್ಲೀಗ ಆರು ಸೀಟುಗಳು ಈಗಾಗಲೇ ಖಾಲಿ ಇದೆ. ಅದರಲ್ಲಿ ಪುದುಚೇರಿಯಲ್ಲಿ ಇನ್ನೂ ಖಾಲಿ ಆಗಿಲ್ಲ. ಆದರೆ ಪುದುಚೇರಿ ರಾಜ್ಯಸಭಾ ಸದಸ್ಯ ಎನ್​. ಗೋಪಾಲಕೃಷ್ಣ ಅಕ್ಟೋಬರ್​ 6ರಂದು ನಿವೃತ್ತ ಗೊಳ್ಳಲಿದ್ದು, ಆ ಸ್ಥಾನಕ್ಕೂ ಕೂಡ ಮುಂಚಿತವಾಗಿಯೇ, ಅಂದರೆ ಅಕ್ಟೋಬರ್​ 4ರಂದು ಚುನಾವಣೆ ನಡೆಯಲಿದೆ ಎಂದು ಎಲೆಕ್ಷನ್​ ಕಮಿಷನ್​ ತಿಳಿಸಿದೆ. 

ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ ಮತ್ತು ಅಸ್ಸಾಂ ನಿಂದ ಆಯ್ಕೆಯಾಗಿದ್ದ ರಾಜ್ಯ ಸಭಾ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಖಾಲಿ ಆಗಿದ್ದರೆ, ಮಹಾರಾಷ್ಟ್ರದಲ್ಲಿ, ರಾಜ್ಯಸಭಾ ಸದಸ್ಯ ರಾಜೀವ್ ಶಂಕರರಾವ್ ಸತಾವ್ ಮೃತರಾದ ಹಿನ್ನೆಲೆಯಲ್ಲಿ ಖಾಲಿಯಾಗಿತ್ತು. ಪಶ್ಚಿಮ ಬಂಗಾಳದ ಮಾನಸ್​ ರಂಜನ್​ ಭುನಿಯಾ, ಅಸ್ಸಾಂ ರಾಜ್ಯ ಸಭಾ ಸದಸ್ಯ ಬಿಸ್ವಜಿತ್ ದೈರ್ಮರ್ಯ, ತಮಿಳುನಾಡಿನ ಕೆ.ಪಿ.ಮುನುಸಾಮಿ ಮತ್ತು ಆರ್​.ವೈಥಿಲಿಂಗಮ್​ ಮತ್ತು ಮಧ್ಯಪ್ರದೇಶದ ಥಾವರ್​ಚಾಂದ್ ಗೆಹ್ಲೋಟ್​ ರಾಜೀನಾಮೆ ನೀಡಿದವರಾಗಿದ್ದಾರೆ.

ರಾಜ್ಯಸಭೆಯ ಒಟ್ಟು 7 ಸ್ಥಾನಗಳಿಗೆ ಉಪಚುನಾವಣೆ ನಡೆಯುವ ಜತೆಗೆ, ಬಿಹಾರದ ವಿಧಾನಪರಿಷತ್​​ನಲ್ಲಿರುವ ಒಂದು ಖಾಲಿ ಸ್ಥಾನಕ್ಕೂ ಅಕ್ಟೋಬರ್​ 4ರಂದೇ ಉಪಚುನಾವಣೆ ನಡೆಯಲಿದೆ ಎಂದು ಇಸಿ ತಿಳಿಸಿದೆ. ಎಂಎಲ್​ಸಿ ತನ್ವೀರ್ ಅಕ್ತರ್​ ಮೇ 9ರಂದು ಮೃತರಾದ ಬಳಿಕ ಈ ಸೀಟ್​ ಖಾಲಿಯಾಗಿತ್ತು. ಈ ಎಲ್ಲ ಉಪಚುನಾವಣೆಗಳ ಫಲಿತಾಂಶ ಅಕ್ಟೋಬರ್ 4ರಂದು ಸಂಜೆಯೇ ಘೋಷಣೆಯಾಗಲಿದೆ.

ಇದನ್ನೂ ಓದಿ: ಕಿರಿಕ್​ ಪಾರ್ಟಿ ರೀತಿ ಡಿಸೆಂಬರ್​ನಲ್ಲಿ ರಕ್ಷಿತ್​ ಶೆಟ್ಟಿ ಅದೃಷ್ಟ ಪರೀಕ್ಷೆ; ‘777 ಚಾರ್ಲಿ’ ಟಾರ್ಚರ್​ಗೆ ಧರ್ಮ ಸುಸ್ತೋ ಸುಸ್ತು​

‘ದೇಶವಿರೋಧಿ’ ಉಪನ್ಯಾಸ, ಟೀಕೆಗಳು ಬೇಡ: ಸಿಬ್ಬಂದಿಗಳಿಗೆ ಸೂಚನೆ ನೀಡಿದ ಕೇರಳದ ಸೆಂಟ್ರಲ್ ಯುನಿವರ್ಸಿಟಿ

(Bypolls to 7 Rajya Sabha seats on October 4 announced By Election Commission)

Published On - 12:50 pm, Thu, 9 September 21

ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್