ಮಹತ್ವದ ನೂತನ ಸಂಸತ್ ಭವನ ‘ಸೆಂಟ್ರಲ್ ವಿಸ್ತಾ’ ನಿರ್ಮಾಣಕ್ಕೆ ಸುಪ್ರಿಂ ಕೋರ್ಟ್ ಅಸ್ತು!
ನೂತನ ಸಂಸತ್ ಭವನ ನಿರ್ಮಾಣದ ಸೆಂಟ್ರಲ್ ವಿಸ್ತಾ ಯೋಜನೆಗೆ ಸುಪ್ರೀಂಕೋರ್ಟ್ ಕೆಲವು ಷರತ್ತುಗಳೊಂದಿಗೆ ಹಸಿರು ನಿಶಾನೆ ಸೂಚಿಸಿದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ನೂತನ ಸಂಸತ್ ಭವನ ನಿರ್ಮಾಣದ ಸಲುವಾಗಿ ಸೆಂಟ್ರಲ್ ವಿಸ್ತಾ ಯೋಜನೆಗೆ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳೊಂದಿಗೆ ಹಸಿರು ನಿಶಾನೆ ನೀಡಿದೆ.
ಯೋಜನೆ ಜಾರಿ ಸಂಬಂಧ ಕೇಂದ್ರ ಪರಿಸರ ಮಂಡಳಿ ನೀಡಿದ್ದ ಒಪ್ಪಿಗೆಯನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ನ್ಯಾಯಾಧೀಶ ಎಂ.ಎಂ. ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ನೀಡಿರುವ ಈ ಅದೇಶದಿಂದ ನೂತನ ಸಂಸತ್ ಭವನ ನಿರ್ಮಾಣಕ್ಕೆ ಇದ್ದ ಅಡೆ ತಡೆಗಳು ದೂರವಾಗಿವೆ.
ಪಾರಂಪರಿಕ ಸಂರಕ್ಷಣಾ ಸಮಿತಿಯ ಒಪ್ಪಿಗೆ ಪಡೆದು ಸಂಸತ್ ಭವನದ ನಿರ್ಮಾಣ ಕಾಮಗಾರಿ ಆರಂಭಿಸಬಹುದು. ಸೆಂಟ್ರಲ್ ವಿಸ್ತಾ ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ ನೀಡಿದ್ದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದೂ ನ್ಯಾಯಪೀಠ ತಿಳಿಸಿದೆ.
ಕೇಂದ್ರೀಯ ಕಾರ್ಯದರ್ಶಿಗಳ ಕಟ್ಟಡ ಸೇರಿ ಹಲವು ಕಟ್ಟಡಗಳನ್ನೊಳಗೊಂಡ ಸೆಂಟ್ರಲ್ ವಿಸ್ತಾ ಯೋಜನೆಯನ್ನು 2019ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. 2020ರ ಡಿ. 10ರಂದು ಪ್ರಧಾನಿ ಮೋದಿ ಶಿಲಾನ್ಯಾಸ ಮಾಡಿ, ₹971 ಕೋಟಿ ವೆಚ್ಚದ ಸಂಸತ್ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಾಗ್ಯ ನನ್ನದಾಯಿತಲ್ಲ; ಸುಮಲತಾ ಅಂಬರೀಶ್ ಹೀಗೆ ಹೇಳಿದ್ದೇಕೆ?
Photo Gallery | ಹೇಗಿತ್ತು ಗೊತ್ತಾ ಹೊಸ ಸಂಸತ್ತು ಶಂಕುಸ್ಥಾಪನಾ ಕಾರ್ಯಕ್ರಮ
Published On - 11:09 am, Tue, 5 January 21