ಪಾಸ್ಪೋರ್ಟ್ನಲ್ಲಿದ್ದ ರಾಷ್ಟ್ರೀಯತೆ (nationality) ಕಾಲಂನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ ಎಂಬ ಸಂದೇಶವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.. ಫೇಸ್ಬುಕ್ನಲ್ಲಷ್ಟೇ ಅಲ್ಲದೆ, ವಾಟ್ಸಾಪ್ನಲ್ಲೂ ಈ ಮೆಸೇಜ್ ಓಡಾಡುತ್ತಿದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಪಾಸ್ಪೋರ್ಟ್ನಲ್ಲಿದ್ದ ರಾಷ್ಟ್ರೀಯತೆ ಎಂಬ ಕಾಲಂನ್ನು ತೆಗದುಹಾಕಿಬಿಟ್ಟಿದೆ. ಹಾಗಾಗಿ ನಿಮ್ಮ ಹಳೆಯ ಪಾಸ್ಪೋರ್ಟ್ಗಳನ್ನು ಕಳೆದುಕೊಳ್ಳಬೇಡಿ.. ಹಾಳು ಮಾಡಿಕೊಳ್ಳಬೇಡಿ ಎಂಬ ಮೆಸೇಜ್ ಸೈಯದ್ ಎಟೆಮಡ್ ಉದ್ದೀನ್ ಎಂಬುವರ ವಾಟ್ಸಾಪ್ನಿಂದ ಶೇರ್ ಆಗಿದೆ. ಅವರು ತಮ್ಮನ್ನು ತಾವು ವಕೀಲ ಎಂದು ಹೇಳಿಕೊಂಡು, ಕಾನೂನು ಸಲಹೆ ಎಂಬರ್ಥದಲ್ಲಿ ಈ ಸಂದೇಶವನ್ನು ಕಳಿಸಿದ್ದರಿಂದ, ಸಹಜವಾಗಿಯೇ ಹಲವರು ಇದನ್ನು ಶೇರ್ ಮಾಡಿದ್ದಾರೆ.
ವಾಸ್ತವ ಏನು?
ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ (AFWA) ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಈ ಸಂದೇಶದ ವಾಸ್ತವ ಹೊರಬಿದ್ದಿದೆ. ಪಾಸ್ಪೋರ್ಟ್ ಸೇರಿ, ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲ ರೀತಿಯ ದಾಖಲೆಗಳಲ್ಲಿ ರಾಷ್ಟ್ರೀಯತೆ (nationality) ಕಾಲಂ ಹಾಗೇ ಇದೆ. ಅದನ್ನು ತೆಗೆದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಸ್ಪಷ್ಟಪಡಿಸಿದ್ದಾರೆ ಎಂದು ಇಂಡಿಯಾ ಟುಡೆ ತಿಳಿಸಿದೆ.
ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಬೇಕಿತ್ತು !
ಪಾಸ್ಪೋರ್ಟ್ನಲ್ಲಿರುವ ರಾಷ್ಟ್ರೀಯತೆ ಕಾಲಂನ್ನು ತೆಗೆದುಹಾಕುವುದು ಸಣ್ಣ ವಿಷಯವಲ್ಲ. ಹಾಗೊಮ್ಮೆ ಸರ್ಕಾರ ಮಾಡಿದ್ದರೆ, ಅದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಬೇಕಿತ್ತು. ಆದರೆ ಎಷ್ಟೇ ಹುಡುಕಿದರೂ ಇದಕ್ಕೆ ಸಂಬಂಧಪಟ್ಟ ಒಂದು ಸುದ್ದಿಯೂ ಸಿಕ್ಕಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಪಾಸ್ಪೋರ್ಟ್ ಹೊಣೆ ಹೊತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA)ದ ಪಾಸ್ಪೋರ್ಟ್ ಸೇವಾ ವೆಬ್ಸೈಟ್ನಲ್ಲಿ ಕೂಡ ರಾಷ್ಟ್ರೀಯತೆ ಕಾಲಂ ತೆಗೆದು ಹಾಕಿರುವ ಬಗ್ಗೆ ಯಾವುದೇ ಅಧಿಸೂಚನೆಯೂ ಇಲ್ಲ. ಹಾಗೇ, ಈ ವೆಬ್ಸೈಟ್ನಲ್ಲಿ ಇರುವ ಪಾಸ್ಪೋರ್ಟ್ ಅರ್ಜಿಯಲ್ಲೂ ರಾಷ್ಟ್ರೀಯತೆಯನ್ನು ನಮೂದಿಸಲು ಕಾಲಂ ಇಡಲಾಗಿದೆ. ಹಾಗೇ, ಇತ್ತೀಚೆಗಷ್ಟೇ ಒಬ್ಬರಿಗೆ ನೀಡಲಾದ ಪಾಸ್ಪೋರ್ಟ್ ಕೂಡ ಚೆಕ್ ಮಾಡಲಾಗಿದ್ದು, ಅದರಲ್ಲೂ ನ್ಯಾಷನಾಲಿಟಿ ಕಾಲಂ ಹಾಗೇ ಇದೆ.
ಹಾಗಾಗಿ ಪಾಸ್ಪೋರ್ಟ್ನಲ್ಲಿ ರಾಷ್ಟ್ರೀಯತೆ ಕಾಲಂ ಇರುವುದಿಲ್ಲ ಎಂಬ ಮೆಸೇಜ್ ನಿಮಗೂ ಬಂದಿದ್ದರೆ ಅದನ್ನು ನಂಬಬೇಡಿ..
ಸುಳ್ಳು ಮಾಹಿತಿಯನ್ನು ಒಳಗೊಂಡ ಸಂದೇಶ
ಇತ್ತೀಚಿನ ಪಾಸ್ಪೋರ್ಟ್ನಲ್ಲಿ ರಾಷ್ಟ್ರೀಯತೆ ಕಾಲಂ ಇದೆ..