ಶೀಘ್ರವೇ ವರ್ಕ್ ಫ್ರಮ್ ಹೋಂ ಅಂತ್ಯ?: ಸೂಚನೆ ಕೊಟ್ಟ ದೊಡ್ಡ ಐಟಿ ಕಂಪೆನಿಗಳು
2020-21ರ ಆರ್ಥಿಕ ವರ್ಷದಲ್ಲಿ ಸಂಪೂರ್ಣವಾಗಿ ವರ್ಕ್ ಫ್ರಮ್ ಹೋಂ ನಡೆದಿದೆ. ಮುಂದಿನ ಆರ್ಥಿಕ ವರ್ಷದ ವೇಳೆಗೆ ಅನೇಕ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಭಾರತದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಬಹುತೇಕ ಐಟಿ ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಮ್ ಹೋಂ) ಆಯ್ಕೆ ನೀಡಿವೆ. ಮನೆಯಿಂದ ಕೆಲಸ ಮಾಡೋದು ತುಂಬಾನೇ ಕಿರಿಕಿರಿಯ ವಿಚಾರ ಅನ್ನೋದು ಅನೇಕರು ಅಭಿಪ್ರಾಯವಾಗಿತ್ತು. ಕೊನೆಗೂ ವರ್ಕ್ ಫ್ರಮ್ ಹೋಂ ಕೊನೆಗೊಳ್ಳುವುದು ಸನ್ನಿಹಿತವಾಗಿದೆ. ದೊಡ್ಡ ಐಟಿ ಕಂಪೆನಿಗಳು ಹೀಗೊಂದು ಸೂಚನೆ ನೀಡಿವೆ.
2020-21ರ ಆರ್ಥಿಕ ವರ್ಷದಲ್ಲಿ ಸಂಪೂರ್ಣವಾಗಿ ವರ್ಕ್ ಫ್ರಮ್ ಹೋಂ ನಡೆದಿದೆ. ಮುಂದಿನ ಆರ್ಥಿಕ ವರ್ಷದ ವೇಳೆಗೆ ಅನೇಕ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಸಾಕಷ್ಟು ಪ್ರಮುಖ ಸಂಸ್ಥೆಗಳು ಕಚೇರಿ ನಡೆಸಲು ಕಟ್ಟಡ ಬಾಡಿಗೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಓಲಾ 4.5 ಲಕ್ಷ ಚದರ ಅಡಿ ಜಾಗವನ್ನು ಬಾಡಿಗೆ ಪಡೆದಿದೆ. ಉಳಿದಂತೆ ಆ್ಯಪಲ್3.5 ಲಕ್ಷ ಚದರ ಅಡಿ, ಗೂಗಲ್ 10 ಲಕ್ಷ ಚದರ ಅಡಿ, ಅಮೆಜಾನ್ 13 ಲಕ್ಷ ಚದರ ಅಡಿ ಜಾಗವನ್ನು ಬೆಂಗಳೂರಲ್ಲಿ ಬಾಡಿಗೆ ಪಡೆದಿವೆ.
2020ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪೆನಿಗಳು ಕಟ್ಟಡ ಬಾಡಿಗೆ ಪಡೆಯುತ್ತಿರುವ ಪ್ರಮಾಣ ನಿಧಾನವಾಗಿ ಹೆಚ್ಚುತ್ತಿದೆಯಂತೆ. ಈ ಮೂಲಕ ವರ್ಕ್ ಫ್ರಮ್ ಹೋಂ ಆಯ್ಕೆ ಶೀಘ್ರವೇ ಅಂತ್ಯಗೊಳ್ಳುವ ಸೂಚನೆ ಸಿಕ್ಕಿದೆ.
ಕುಸಿತ ಕಂಡಿದ್ದ ರಿಯಲ್ ಎಸ್ಟೇಟ್ ಉದ್ಯಮ ಈ ಬಾರಿ ಅತಿ ಹೆಚ್ಚು ಮನೆ ಮಾರಾಟವಾದ ಸಾಲಿನಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ. ಇಲ್ಲಿ, 44,320 ಮನೆಗಳು ಮಾರಾಟವಾಗಿವೆ. ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು, 24,910 ನಿವಾಸಗಳು ಸೇಲ್ ಆಗಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ 50,450 ಮನೆಗಳು ಮಾರಾಟವಾಗಿದ್ದವು. ಈ ಮೂಲಕ ಬೆಂಗಳೂರಿನಲ್ಲಿ ಮನೆ ಮಾರಾಟ ಪ್ರಮಾಣ ಶೇ. 51ರಷ್ಟು ಇಳಿಕೆ ಆದಂತಾಗಿದೆ.
Facebook Live| ವರ್ಕ್ ಫ್ರಮ್ ಹೋಮ್ನಿಂದ ಉಂಟಾಗುತ್ತಿರುವ ಸಮಸ್ಯೆಗಳೇನು ಗೊತ್ತಾ?: ಇಲ್ಲಿದೆ ತಜ್ಞರ ಅಭಿಪ್ರಾಯ