Singapore Strain: ದೆಹಲಿ ಸಿಎಂ ಹೇಳಿಕೆಗೆ ಸಿಂಗಾಪುರ್ ಆಕ್ಷೇಪ; ಅರವಿಂದ ಕೇಜ್ರಿವಾಲ್ ಭಾರತದ ಪರ ಮಾತಾಡಿಲ್ಲ ಎಂದ ಕೇಂದ್ರ ಸರ್ಕಾರ

|

Updated on: May 19, 2021 | 4:49 PM

Arvind Kejriwal: ದೆಹಲಿ ಸಿಎಂ ಭಾರತ ಪರವಾಗಿ ಮಾತನಾಡಿಲ್ಲ ಎಂದು ಒತ್ತಿ ಹೇಳಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅರಿವು ಇರುವವರ ಬೇಜವಾಬ್ದಾರಿ ಕಾಮೆಂಟ್‌ಗಳು ದೀರ್ಘಕಾಲದ ಸಹಭಾಗಿತ್ವವನ್ನು ಹಾನಿಗೊಳಿಸುತ್ತವೆ ಎಂದಿದ್ದಾರೆ.

Singapore Strain: ದೆಹಲಿ ಸಿಎಂ ಹೇಳಿಕೆಗೆ ಸಿಂಗಾಪುರ್ ಆಕ್ಷೇಪ; ಅರವಿಂದ ಕೇಜ್ರಿವಾಲ್ ಭಾರತದ ಪರ ಮಾತಾಡಿಲ್ಲ ಎಂದ ಕೇಂದ್ರ ಸರ್ಕಾರ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Follow us on

ದೆಹಲಿ: ಸಿಂಗಾಪುರ್​ನಲ್ಲಿ ಕಂಡುಬರುವ ಕೊರೊನಾವೈರಸ್‌ನ ರೂಪಾಂತರಿಯು ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಸಿಂಗಾಪುರ್ ಸರ್ಕಾರ ನಿರಾಕರಿಸಿದ ಒಂದು ದಿನದ ನಂತರ, ಕೇಂದ್ರವು ಬುಧವಾರ ದೆಹಲಿ ಮುಖ್ಯಮಂತ್ರಿಗೆ ಕೊವಿಡ್ ರೂಪಾಂತರಿಗಳ ಬಗ್ಗೆ ಅಥವಾ ನಾಗರಿಕ ವಿಮಾನಯಾನ ನೀತಿ ಬಗ್ಗೆ ಮಾತನಾಡುವಂತಿಲ್ಲ ಎಂದು ಹೇಳಿದೆ. ದೆಹಲಿ ಸಿಎಂ ಭಾರತ ಪರವಾಗಿ ಮಾತನಾಡಿಲ್ಲ ಎಂದು ಒತ್ತಿ ಹೇಳಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅರಿವು ಇರುವವರ ಬೇಜವಾಬ್ದಾರಿ ಕಾಮೆಂಟ್‌ಗಳು ದೀರ್ಘಕಾಲದ ಸಹಭಾಗಿತ್ವವನ್ನು ಹಾನಿಗೊಳಿಸುತ್ತವೆ ಎಂದಿದ್ದಾರೆ.

ಮಂಗಳವಾರ ಕೇಜ್ರಿವಾಲ್ ಸಿಂಗಾಪುರದಲ್ಲಿ ಕಂಡುಬರುವ ಕೊರೊವೈರಸ್​ನ ಒಂದು ರೂಪಾಂತರವು ದೇಶದ ಮೂರನೇ ಅಲೆ ಉಂಟುಮಾಡಬಹುದು ಎಂದು ಹೇಳಿದ್ದರು ಮತ್ತು ಸಿಂಗಾಪುರ್​ನೊಂದಿಗೆ ವಿಮಾನ ಸೇವೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು.


ಇದನ್ನು ಮಂಗಳವಾರ ರಾತ್ರಿ ಸಿಂಗಾಪುರ್​ ಆರೋಗ್ಯ ಸಚಿವಾಲಯ ನಿರಾಕರಿಸಿದೆ. ವರದಿಗಳಲ್ಲಿ ಕಂಡುಬರುವ ಪ್ರತಿಪಾದನೆಗಳಲ್ಲಿ ಯಾವುದೇ ಸತ್ಯವಿಲ್ಲ. ಸಿಂಗಾಪುರ್ ರೂಪಾಂತರಿ ಇಲ್ಲ. ಇತ್ತೀಚಿನ ವಾರಗಳಲ್ಲಿ ಅನೇಕ ಕೊವಿಡ್ ಪ್ರಕರಣಗಳಲ್ಲಿ ಪ್ರಚಲಿತದಲ್ಲಿರುವ ತಳಿ B.1.617.2 ರೂಪಾಂತರವಾಗಿದೆ, ಇದು ಭಾರತದಲ್ಲಿ ಹುಟ್ಟಿಕೊಂಡಿತು. ಫೈಲೋಜೆನೆಟಿಕ್ ಪರೀಕ್ಷೆಯು ಈ ಬಿ .1.617.2 ರೂಪಾಂತರಿಯು ಸಿಂಗಾಪುರ್ ನ ಹಲವಾರು ಕ್ಲಸ್ಟರ್‌ಗಳೊಂದಿಗೆ ಸಂಯೋಜಿಸಿದೆ ಎಂದು ತೋರಿಸಿದೆ ಎಂದು ಸಿಂಗಾಪುರ್ ಸಚಿವಾಲಯ ಟ್ವೀಟ್ ಮಾಡಿದೆ.


ಬುಧವಾರ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, ಸಿಂಗಾಪುರ್ ರೂಪಾಂತರಿ ಕುರಿತು ದೆಹಲಿ ಸಿಎಂ ಅವರ ಟ್ವೀಟ್‌ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಲು ಸಿಂಗಾಪುರ್ ಸರ್ಕಾರ ಇಂದು ನಮ್ಮ ಹೈಕಮಿಷನರ್‌ಗೆ ಕರೆ ಮಾಡಿದೆ. ಕೋವಿಡ್ ರೂಪಾಂತರಿಗಳು ಅಥವಾ ನಾಗರಿಕ ವಿಮಾನಯಾನ ನೀತಿಯ ಬಗ್ಗೆ ಹೇಳಲು ದೆಹಲಿ ಸಿಎಂಗೆ ಯಾವುದೇ ಅಧಿಕಾರವಿಲ್ಲ ಎಂದು ಹೈಕಮಿಷನರ್ ಸ್ಪಷ್ಟಪಡಿಸಿದ್ದಾರೆ.


ಕೆಲವು ನಿಮಿಷಗಳ ನಂತರ ಪ್ರತಿಕ್ರಿಯಿಸಿದ ಜೈಶಂಕರ್ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸಿಂಗಾಪುರ್ ಮತ್ತು ಭಾರತವು ದೃಢವಾದ ಪಾಲುದಾರರಾಗಿದ್ದೇವೆ. ಲಾಜಿಸ್ಟಿಕ್ಸ್ ಹಬ್ ಮತ್ತು ಆಮ್ಲಜನಕ ಪೂರೈಕೆದಾರರಾಗಿ ಸಿಂಗಾಪುರದ ಪಾತ್ರವನ್ನು ಶ್ಲಾಘಿಸುತ್ತೇವೆ. ನಮಗೆ ಸಹಾಯ ಮಾಡಲು ಮಿಲಿಟರಿ ವಿಮಾನವನ್ನು ನಿಯೋಜಿಸಿರುವುದು ನಮ್ಮ ಅಸಾಧಾರಣ ಸಂಬಂಧವನ್ನು ತೋರಿಸುತ್ತದೆ ಎಂದಿದ್ದಾರೆ.

ಆದಾಗ್ಯೂ ಚೆನ್ನಾಗಿ ತಿಳುವಳಿಕೆ ಇರುವವರ ಬೇಜವಾಬ್ದಾರಿ ಹೇಳಿಕೆಗಳು ದೀರ್ಘಕಾಲದ ಸಹಭಾಗಿತ್ವವನ್ನು ಹಾನಿಗೊಳಿಸುತ್ತವೆ. ಆದ್ದರಿಂದ, ನಾನು ಸ್ಪಷ್ಟಪಡಿಸುತ್ತೇನೆ- ದೆಹಲಿ ಸಿಎಂ ಭಾರತದ ಪರ ಮಾತನಾಡಿಲ್ಲ ಎಂದು ಹೇಳಿದ್ದಾರೆ.


ಕೇಂದ್ರದ ಟೀಕೆಗಳಿಗೆ ಪ್ರತಿಕ್ರಿಯಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. “ಸಿಂಗಾಪುರ್ ನಲ್ಲಿ ಕೇಂದ್ರವು ತನ್ನ ಇಮೇಜ್ ಬಗ್ಗೆ ಮಾತ್ರ ಚಿಂತಿಸುತ್ತಿದೆ .ಕೊವಿಡ್ ಒತ್ತಡದಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಅಲ್ಲ. ಇದು ಕೊವಿಡ್ ಲಂಡನ್ ರೂಪಾಂತರಿ ಬಗ್ಗೆ ಎಚ್ಚರಿಕೆಗಳನ್ನು ಪರಿಗಣಿಸಲಿಲ್ಲ. ಇದರಿಂದ ಅನೇಕರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡರು ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.


ಏತನ್ಮಧ್ಯೆ, ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಸಕಾರಾತ್ಮಕ ದರವು ಶೇಕಡಾ 6.89 ಕ್ಕೆ ಇಳಿದಿದೆ. ಸೋಮವಾರ, ಸಕಾರಾತ್ಮಕತೆ ಪ್ರಮಾಣವು ಶೇ 8.42% ಆಗಿತ್ತು. ನಗರದಲ್ಲಿ ಸೋಮವಾರ ಪರೀಕ್ಷೆಗಳ ಸಂಖ್ಯೆ 53,756 ರಿಂದ ಮಂಗಳವಾರ 65,004 ಕ್ಕೆ ಏರಿದೆ. ಸಾವುಗಳ ಸಂಖ್ಯೆ ಸೋಮವಾರ 340 ರಿಂದ 265 ಕ್ಕೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ, 4,482 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಮವಾರ ವರದಿಯಾದ ಪ್ರಕರಣಕ್ಕಿಂತ 4,524 ಕ್ಕಿಂತ ಕಡಿಮೆಯಾಗಿದೆ. ನಗರದಾದ್ಯಂತ ಕೊವಿಡ್ ರೋಗಿಗಳಿಗಾಗಿ ಕಾಯ್ದಿರಿಸಲಾಗಿರುವ 24,305 ಹಾಸಿಗೆಗಳಲ್ಲಿ ಪ್ರಸ್ತುತ 9,906 ಹಾಸಿಗೆಗಳು ಖಾಲಿ ಇವೆ.

ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಕಾಣಿಸುತ್ತಿವೆ ಖಾಲಿ ಬೆಡ್

ಸಿಂಗಾಪುರದಲ್ಲಿ ಪತ್ತೆಯಾದ ಕೊರೊನಾ ವೈರಾಣು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು: ಅರವಿಂದ್ ಕೇಜ್ರಿವಾಲ್

Published On - 4:40 pm, Wed, 19 May 21