ಮಹರ್ಷಿ ಅರಬಿಂದೋ ಘೋಷ್ 150ನೇ ಜನ್ಮ ವಾರ್ಷಿಕೋತ್ಸವ; ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲು ಕೇಂದ್ರದಿಂದ ಸಮಿತಿ ರಚನೆ
ಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಲಿದ್ದು, ಮಾಜಿ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ ಕೂಡ ಇರಲಿದ್ದಾರೆ.
ಮಹರ್ಷಿ ಶ್ರೀ ಅರಬಿಂದೋ (Sri Aurobindo) ಅವರ 150ನೇ ಜನ್ಮ ವಾರ್ಷಿಕೋತ್ಸವವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವ ಸಲುವಾಗಿ ಕೇಂದ್ರ ಸರ್ಕಾರ 53 ಜನರ ಸಮಿತಿಯನ್ನು ರಚಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಲಿದ್ದು, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೂಡ ಇರಲಿದ್ದಾರೆ. ಈ ಉನ್ನತಮಟ್ಟದ ಸಮಿತಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಗೃಹ ಮಂತ್ರಿ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ಎನ್.ರಂಗಸ್ವಾಮಿ ಮತ್ತು ಭೂಪೇಂದ್ರ ಪಟೇಲ್, ನಟ, ಸೂಪರ್ಸ್ಟಾರ್ ರಜನಿಕಾಂತ್, ಆಧ್ಯಾತ್ಮಿಕ ನಾಯಕರಾದ ರವಿ ಶಂಕರ ಗುರೂಜಿ, ಬಾಬಾ ರಾಮದೇವ್, ಸದ್ಗುರು ಜಗ್ಗಿ ವಾಸುದೇವ್ ಇತರರೂ ಇರಲಿದ್ದಾರೆ.
ಈ ಬಗ್ಗೆ ಕೇಂದ್ರ ಸಂಸ್ಕೃತಿ ಕಚೇರಿ ಅಧಿಸೂಚನೆ ಹೊರಡಿಸಿದೆ. ಶ್ರೀ ಅರಬಿಂದೋ ಅವರ 150 ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ಈ ಸಮಿತಿ ರಚನೆಯಾಗಿದೆ. ಕಾರ್ಯಕ್ರಮಕ್ಕೆ ಸಂಬಂಧಪಟ್ಟ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ನು ಈ ಸಮಿತಿ ನೀಡಲಿದೆ ಎಂದು ಹೇಳಿದೆ. ಶ್ರೀ ಅರಬಿಂದೋ ಅವರು 1872ರ ಆಗಸ್ಟ್ 15ರಂದು ಕೋಲ್ಕತ್ತದಲ್ಲಿ ಜನಿಸಿದ್ದಾರೆ. ಬ್ರಿಟಿಷರ ವಿರುದ್ಧ ದಂಗೆಗೆ ಭಾರತದಲ್ಲಿ ನಡೆಸಲಾದ ರಹಸ್ಯ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಂದೇ ಮಾತರಂ ಎಂಬ ಪತ್ರಿಕೆ ಹೊರತರುತ್ತಿದ್ದ ಅವರು, ಸ್ವತಂತ್ರ್ಯ ಭಾರತದ ಕಲ್ಪನೆಯನ್ನು ಬಹಿರಂಗವಾಗಿ ಪ್ರಸ್ತುತ ಪಡಿಸಿದ್ದ ಮೊದಲ ರಾಜಕೀಯ ನಾಯಕರಾಗಿದ್ದಾರೆ. ಬ್ರಿಟಿಷರು ಅವರ ವಿರುದ್ಧ ಎರಡು ಬಾರಿ ದೇಶದ್ರೋಹ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಿದ್ದರು. ಹಾಗೇ, ಒಂದು ಬಾರಿ ಪಿತೂರಿ ಆರೋಪ ಹೊರೆಸಿ ವಶಕ್ಕೆ ಪಡೆದಿದ್ದರು. ಆದರೆ ಈ ಎಲ್ಲ ಬಾರಿಯೂ ಸರಿಯಾದ ಸಾಕ್ಷಿ ಸಿಗದೆ ಅವರನ್ನು ಬಿಡಲಾಯಿತು ಎಂದು ಶ್ರೀ ಅರಬಿಂದೋ ಆಶ್ರಮದ ವೆಬ್ಸೈಟ್ನಲ್ಲಿ ಉಲ್ಲೇಖವಿದೆ. ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅರಬಿಂದೋ 1908ರಲ್ಲಿ ತಮ್ಮ ರಾಜಕೀಯದಿಂದ ದೂರ ಸರಿದು ಅಧ್ಯಾತ್ಮಿಕ ಜೀವನ ನಡೆಸಲು ಪಾಂಡಿಚೇರಿಗೆ ತೆರಳಿದರು. ನಂತರ 1950ರ ಡಿಸೆಂಬರ್ 5ರಂದು ನಿಧನರಾಗಿದ್ದಾರೆ. ಕಳೆದ ಮನ್ ಕೀ ಬಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅರಬಿಂದೋ ಜನ್ಮ ವಾರ್ಷಿಕೋತ್ಸವದ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಇದನ್ನೂ ಓದಿ: ಶಾಸನಗಲ್ಲು ನೆಟ್ಟು ಮೇಕೆದಾಟಿನಿಂದ ಬೆಂಗಳೂರಿಗೆ ದಿನಕ್ಕೆ 10 ಕಿಮೀ ಕಾಲ್ನಡಿಗೆ ಮಾಡ್ತೇವೆ: ಕರ್ನಾಟಕ ಕಾಂಗ್ರೆಸ್ ನಾಯಕರ ಘೋಷಣೆ