ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಿಕೆ; ಈ ಬಗ್ಗೆ ವಿಚಾರಣೆ ನಡೆಸಲು ಅವಸರವೇನಿಲ್ಲ ಎಂದ ಕೇಂದ್ರ

ಆಡಳಿತವು ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ಹಾಗೂ ಈಗ ಅವಸರವಾಗಿ ಆಗಬೇಕಾದ ಹಲವು ಕಾರ್ಯಗಳಿವೆ. ಒಂದು ಸರ್ಕಾರದ ಗಮನ ಅಂತಹ ವಿಚಾರಗಳ ಬಗೆಗಿದೆ ಎಂದು ತುಷಾರ್ ಮೆಹ್ತಾ ತಿಳಿಸಿದ್ದಾರೆ.

ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಿಕೆ; ಈ ಬಗ್ಗೆ ವಿಚಾರಣೆ ನಡೆಸಲು ಅವಸರವೇನಿಲ್ಲ ಎಂದ ಕೇಂದ್ರ
ದೆಹಲಿ ಹೈಕೋರ್ಟ್
Updated By: ganapathi bhat

Updated on: Aug 21, 2021 | 9:54 AM

ದೆಹಲಿ: ಸಲಿಂಗಿ ವಿವಾಹಗಳಿಗೆ ಮಾನ್ಯತೆ ನೀಡಬೇಕು ಎಂಬ ಅರ್ಜಿ ವಿಚಾರಣೆಯನ್ನು ಮುಂದೂಡುವಂತೆ ಕೋರಿ ಕೇಂದ್ರ ಸರ್ಕಾರ ಸೋಮವಾರ ದೆಹಲಿ ಹೈಕೋರ್ಟ್​ಗೆ ಹೇಳಿದೆ. ಅವಸರವಾಗಿ ಪರಿಗಣಿಸಬೇಕಾದ ಹಲವು ವಿಚಾರಗಳು ಇದೆ. ವಿವಾಹ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಯಾರೂ ಕೂಡ ಸಾವನ್ನಪ್ಪುತ್ತಿಲ್ಲ ಎಂದು ಕೇಂದ್ರ ತಿಳಿಸಿದೆ.

ಕೇಂದ್ರ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆಡಳಿತವು ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ಹಾಗೂ ಈಗ ಅವಸರವಾಗಿ ಆಗಬೇಕಾದ ಹಲವು ಕಾರ್ಯಗಳಿವೆ. ಒಂದು ಸರ್ಕಾರದ ಗಮನ ಅಂತಹ ವಿಚಾರಗಳ ಬಗೆಗಿದೆ ಎಂದು ತುಷಾರ್ ಮೆಹ್ತಾ ತಿಳಿಸಿದ್ದಾರೆ.

ಇತರ ಅರ್ಜಿದಾರರ ಪರ ವಹಿಸಿದ ಹಿರಿಯ ನ್ಯಾಯವಾದಿ ಸೌರಭ್ ಕೃಪಾಲ್, ಯಾವುದು ಅವಸರ ಅಥವಾ ಅಲ್ಲ ಎಂಬ ಬಗ್ಗೆ ನ್ಯಾಯಾಲಯದಲ್ಲಿ ಸರ್ಕಾರ ನಿರ್ಲಿಪ್ತವಾಗಿರಬೇಕು. ಆ ಬಗ್ಗೆ ಕೋರ್ಟ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ. ಕೆಲವು ಅರ್ಜಿದಾರರ ಪರ ವಹಿಸಿದ ಮತ್ತೊಬ್ಬ ಹಿರಿಯ ವಕೀಲ ಡಾ. ಮೇನಕಾ ಗುರುಸ್ವಾಮಿ ಭಾರತದಲ್ಲಿ ಸುಮಾರು 70 ಮಿಲಿಯನ್ ಎಲ್​ಜಿಬಿಟಿಕ್ಯು ಸಮುದಾಯಕ್ಕೆ ಸೇರುವ ಜನರಿದ್ದಾರೆ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ಅರ್ಜಿಯನ್ನು ಕಳೆದ ವರ್ಷ ಸಲ್ಲಿಸಲಾಗಿತ್ತು. ಮನಶ್ಶಾಸ್ತ್ರಜ್ಞೆ ಡಾ. ಕವಿತಾ ಅರೋರಾ, ಥೆರಪಿಸ್ಟ್ ಡಾ. ಅಂಕಿತಾ ಖನ್ನಾ ಜೊತೆಗಾರರನ್ನು ಆರಿಸಿಕೊಳ್ಳುವ ಹಕ್ಕಿನ ಬಗ್ಗೆ ಪ್ರಸ್ತಾಪಿಸಿದ್ದರು. ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಅವರ ಅರ್ಜಿಯು ತಿರಸ್ಕೃತವಾಗಿತ್ತು. ಅವರು ಸಲಿಂಗಿ ಜೋಡಿ ಎಂಬ ಬಗ್ಗೆ ಉಲ್ಲೇಖಿಸಿ ದೆಹಲಿಯ ವಿವಾಹ ಅಧಿಕಾರಿ ಅರ್ಜಿಯನ್ನು ತಿರಸ್ಕರಿಸಿದ್ದರು.

ಎರಡನೇ ಅರ್ಜಿಯು ವಿದೇಶದಲ್ಲಿರುವ ಭಾರತೀಯ ಪರಾಗ್ ವಿಜಯ್ ಮೆಹ್ತಾ ಹಾಗೂ ಭಾರತೀಯ ನಾಗರಿಕ ವೈಭವ್ ಜೈನ್ ಎಂಬವರಿಂದ ದಾಖಲಾಗಿತ್ತು. ಅವರು ವಾಷಿಂಗ್ಟನ್ ಡಿಸಿಯಲ್ಲಿ 2017ರಲ್ಲಿ ವಿವಾಹವಾಗಿದ್ದರು. ಹಾಗೂ ವಿವಾಹ ದಾಖಲಾತಿಯ ಅರ್ಜಿಯನ್ನು ವಿದೇಶ ವಿವಾಹ ಕಾಯ್ದೆಯ ಅಡಿಯಲ್ಲಿ ನ್ಯೂಯಾರ್ಕ್​ನ ಕನ್ಸುಲೇಟ್ ಜನರಲ್ ಆಫ್ ಇಂಡಿಯಾದಲ್ಲಿ ಸಲ್ಲಿಸಿದ್ದರು. ಆದರೆ ಅದು ಸಹ ತಿರಸ್ಕೃತವಾಗಿತ್ತು.

ಮೂರನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸಲಿಂಗಿ ವಿವಾಹಕ್ಕೆ ಸಂಬಂಧಿಸಿ ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ದಾಖಲಾಗಿತ್ತು. ರಕ್ಷಣಾ ವಿಶ್ಲೇಷಕ ಅಭಿಜಿತ್ ಅಯ್ಯರ್ ಮಿತ್ರ ಮತ್ತು ಇತರ ಮೂವರಿಂದ ಅರ್ಜಿ ಸಲ್ಲಿಕೆಯಾಗಿತ್ತು.

ಇದನ್ನೂ ಓದಿ: ಕೊವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ಪರಿಹಾರ ಕೊಡುವ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿದ ಸುಪ್ರೀಂಕೋರ್ಟ್

ಕೋರ್ಟ್​ಗಳು ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಆದೇಶ ನೀಡಬಾರದು; ಸುಪ್ರೀಂಕೋರ್ಟ್

Published On - 9:42 pm, Mon, 24 May 21